|
ಜಮುಯಿ (ಬಿಹಾರ್) – ಇಲ್ಲಿ ಹನುಮಾನ ಚಾಲಿಸಾ ಪಠಣೆ ಮಾಡಿ ಹಿಂತಿರುಗುತ್ತಿದ್ದ ಹಿಂದುಗಳ ಮೇಲೆ ಮತಾಂಧ ಮುಸಲ್ಮಾನರು ಮುಸಲ್ಮಾನ ಬಾಹುಳ್ಯ ಪ್ರದೇಶದ ಮಸೀದಿಯ ಹತ್ತಿರ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾರೆ. ಹಾಗೂ ಅನೇಕ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಇದರಲ್ಲಿ ಮಹಿಳೆಯರ ಸಹಿತ ೧೦ ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ನಗರದಲ್ಲಿನ ಇಂಟರ್ನೆಟ್ ವ್ಯವಸ್ಥೆ ನಿಲ್ಲಿಸಲಾಗಿದೆ. ಪೊಲೀಸರು ದಾಳಿಯ ಪ್ರಕರಣದಲ್ಲಿ ಕೆಲವು ಜನರನ್ನು ಬಂಧಿಸಿದ್ದಾರೆ.
Jamui, Bihar: Attack on Hindus Near Mosque while they were Returning from Hanuman Chalisa Recitation – 10 injured
Mu$l|m women & children also allegedly involved in the attack
Negligent police officers suspended
Attacks on Hindu religious processions near mosques are not new.… pic.twitter.com/408T0tQS7I
— Sanatan Prabhat (@SanatanPrabhat) February 17, 2025
೧. ಹಿಂದೂ ಸ್ವಾಭಿಮಾನ ಸಂಘಟನೆಯ ಕಾರ್ಯಕರ್ತರು ಫೆಬ್ರುವರಿ ೧೬ ರಂದು ಜಮುಯಿನ ಬಲಿಯಾಡಿಹ ಗ್ರಾಮದಲ್ಲಿ ಹನುಮಾನ ಚಾಲಿಸಾಾ ಪಠಣೆಗಾಗಿ ಹೋಗಿದ್ದರು. ಪಠಣೆ ಮುಗಿಸಿ ಹಿಂತಿರುಗುತ್ತಿರುವಾಗ ಮಸೀದಿಯ ಹತ್ತಿರ ಅವರ ವಾಹನಗಳ ಮೇಲೆ ೩೦೦ ರಿಂದ ೪೦೦ ಮತಾಂಧ ಮುಸಲ್ಮಾನರ ಗುಂಪಿನಿಂದ ದಾಳಿ ನಡೆಯಿತು.
೨. ಮತಾಂಧ ಮುಸಲ್ಮಾನರ ಗುಂಪಿನಿಂದ ಹಿಂದೂ ಕಾರ್ಯಕರ್ತರ ವಾಹನಗಳ ಕಿಟಕಿಗಳನ್ನು ಓಡೆದು ಹಾಕಿದರು. ಕಾರ್ಯಕರ್ತರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳು ಎಸೆದರು. ಈ ದಾಳಿಯಲ್ಲಿ ಹಿಂದೂ ಸ್ವಾಭಿಮಾನ ಸಂಘಟನೆಯ ಜಿಲ್ಲಾಧ್ಯಕ್ಷ ನಿತೀಶ್ ಕುಮಾರ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಖುಷಬು ಪಾಂಡೆ ಸಹಿತ ಸುಮಾರು ೧೦ ಜನರು ಗಾಯಗೊಂಡರು.
೩. ‘ನ್ಯೂಸ್ ೧೮ ಬಿಹಾರ’ ವಾರ್ತೆಯ ಪ್ರಕಾರ ದಾಳಿ ನಡೆಸಿರುವ ಮುಸಲ್ಮಾನರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸಹಭಾಗಿದ್ದರು.
೪. ಗಾಯಗೊಂಡಿರುವ ಖುಶಭೂ ಪಾಂಡೆ ಇವರು, ಬಲಿಯಾಡಿಹ ಗ್ರಾಮದಲ್ಲಿ ಬಾಲೇಶ್ವರನಾಥ ದೇವಸ್ಥಾನದಲ್ಲಿ ಹನುಮಾನ ಚಾಲಿಸಾ ಕಾರ್ಯಕ್ರಮವಿತ್ತು. ಪ್ರಸಾದ ತೆಗೆದುಕೊಂಡ ನಂತರ ಹಿಂತಿರುಗಿ ಬರುವಾಗ ಮಸೀದಿಯಿಂದ ಸ್ವಲ್ಪ ಅಂತರದಲ್ಲಿಯೇ ಅನಿರೀಕ್ಷಿತವಾಗಿ ಕಲ್ಲು ತೂರಾಟ ಆರಂಭವಾಯಿತು. ವಾಹನಗಳನ್ನು ಧ್ವಂಸ ಮಾಡಲಾಯಿತು. ಅಲ್ಲಿ ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನ ಇರುವನು) ಘೋಷಣೆ ನೀಡಲಾದವು. ನನ್ನನ್ನು ಹುಡುಕಿ ಕೊಲ್ಲುವ ಯೋಜನೆ ಇತ್ತು. ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವ ಷಡ್ಯಂತ್ರ ಕೂಡ ಇತ್ತು; ಆದರೆ ದೇವರ ಕೃಪೆಯಿಂದ ನಾನು ಬದುಕುಳಿದ್ದಿದ್ದೇನೆ’, ಎಂದು ಹೇಳಿದರು.
೫. ಪೊಲೀಸರಿಂದ ನಿರ್ಲಕ್ಷ ತೋರಿಸಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಜಮುಯಿದ ಪೊಲೀಸ ಅಧಿಕಾರಿ ಮದನ ಕುಮಾರ ಆನಂದ ಇವರು, ಹನುಮಾನ ಚಾಲಿಸಾಾ ಪಠಣೆ ನಡೆಸಿ ಹಿಂತಿರುಗುವಾಗ ಜನರ ವಿರುದ್ಧ ಘೋಷಣೆಗಳು ನೀಡಿದ ನಂತರ ಅಲ್ಲಿ ಉಪಸ್ಥಿತ ಪೊಲೀಸರ ತಂಡದಿಂದ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿಲ್ಲ. ಅವರು ಸ್ವತಃ ಪ್ರಕರಣವನ್ನು ನಿಭಾಯಿಸುವ ಪ್ರಯತ್ನ ಮಾಡಿದರು ಮತ್ತು ಮಾರ್ಗ ಬದಲಾಯಿಸುವ ಬಗ್ಗೆ ಕೂಡ ಮಾತನಾಡಿದರು. ನಾವು ಸಂಬಂಧಿತ ಪೊಲೀಸರಿಂದ ಸ್ಪಷ್ಟೀಕರಣ ಕೇಳಿದ್ದೇವೆ ಮತ್ತು ಅವರನ್ನು ಅಮಾನತು ಕೂಡ ಮಾಡಿದ್ದೇನೆ’, ಎಂದು ಹೇಳಿದರು.
೬. ಈ ಘಟನೆಯ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ೮ ಜನರ ಸಮಾವೇಶ ಇದ್ದು ೫೦ ಜನರನ್ನು ಅಪರಿಚಿತ ಆರೋಪಿ ಎಂದು ಮಾಡಲಾಗಿದೆ. ಕ್ರಮ ಕೈಗೊಳ್ಳುವಾಗ ಪೊಲೀಸರು ೯ ಆರೋಪಿಗಳನ್ನು ಕೂಡ ಬಂಧಿಸಿದ್ದಾರೆ. ಗ್ರಾಮದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಪಾದಕೀಯ ನಿಲುವು
|