4 ಜನರಿಗೆ ಗಾಯ
ವಿಯೆನ್ನಾ (ಆಸ್ಟ್ರಿಯಾ) – ದಕ್ಷಿಣ ಆಸ್ಟ್ರಿಯಾದ ಕ್ಯಾರಿಂಥಿಯಾ ಪ್ರಾಂತ್ಯದ ವಿಲ್ಲಾಚ್ ನಗರದಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 15 ರಂದು ಸಿರಿಯಾ ಮೂಲದ 23 ವರ್ಷದ ವ್ಯಕ್ತಿಯೊಬ್ಬ 5 ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಲ್ಲಿ 14 ವರ್ಷದ ಬಾಲಕಿ ಸಾವನ್ನಪ್ಪಿದ್ದು, 4 ಜನರು ಗಾಯಗೊಂಡಿದ್ದಾರೆ. ಘಟನೆಯ ನಂತರ ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಆಸ್ಟ್ರಿಯಾದಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದಾನೆ, ಎಂದು ಪೊಲೀಸರ ಹೇಳಿಕೆಯಾಗಿದೆ.
1. ‘ಸಿ.ಎನ್.ಎನ್.’ ನೀಡಿದ ವರದಿಯ ಪ್ರಕಾರ, ಇದರ ಹಿಂದಿನ ಉದ್ದೇಶವನ್ನು ತಕ್ಷಣವೇ ತಿಳಿಯಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಾರೆ.
2. ಈ ಭೀಕರ ದುಷ್ಕೃತ್ಯಕ್ಕೆ ಕಠೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕ್ಯಾರಿಂಥಿಯಾ ಪ್ರಾಂತ್ಯದ ಗವರ್ನರ್ ಪೀಟರ್ ಕೈಸರ್ ಹೇಳಿದ್ದಾರೆ.
3. ಗೃಹ ಸಚಿವಾಲಯದ ಪ್ರಕಾರ, 2024 ರಲ್ಲಿ 24 ಸಾವಿರದ 941 ವಿದೇಶಿಯರು ಆಸ್ಟ್ರಿಯಾದಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ, ಎಲ್ಲಕ್ಕಿಂತ ದೊಡ್ಡ ಗುಂಪು ಸಿರಿಯನ್ ಮೂಲದವರಾಗಿದ್ದು, ಆನಂತರದ ಕ್ರಮಾಂಕದಲ್ಲಿ ಆಫ್‌ಘಾನಿಸ್ತಾನದ ಜನರು ಇದ್ದಾರೆ.
4. ಕಳೆದ ವರ್ಷ ನಡೆದ ಆಸ್ಟ್ರಿಯಾದಲ್ಲಿನ ಚುನಾವಣೆಯಲ್ಲಿ “ವಲಸೆ” ಇದು ಒಂದು ಪ್ರಮುಖ ವಿಷಯವಾಗಿತ್ತು. ಚುನಾವಣೆಯಲ್ಲಿ ಕಟ್ಟರ್ ರಾಷ್ಟ್ರವಾದಿ ‘ಫ್ರೀಡಂ ಪಾರ್ಟಿ’ ಗೆ 70 ವರ್ಷಗಳ ನಂತರ ಗೆಲುವು ಸಿಕ್ಕಿದೆ.
5. ವಿಲ್ಲಚ್‌ನಲ್ಲಿ ನಡೆದ ಭೀಕರ ಕೃತ್ಯದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ‘ಎಕ್ಸ್’ ನಲ್ಲಿ ಕಟ್ಟರ್ ರಾಷ್ಟ್ರವಾದಿ ನಾಯಕ ಹರ್ಬರ್ಟ್ ಕಿಕಲ್ ಹೇಳಿದ್ದಾರೆ.
ಸಂಪಾದಕೀಯ ನಿಲುವು“ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು ಆಗಿರುತ್ತಾರೆ”, ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ಯುರೋಪಿನಲ್ಲಿನ ಘಟನೆಯಿಂದಲೂ ಇದೆ ಎಂದು ಗಮನಕ್ಕೆ ಬರುತ್ತದೆ ! |