೧೫೦ ವರ್ಷಗಳ ಹಿಂದೆ ಬ್ರಿಟಿಷರು ಮಾಡಿರುವ ಸಮೀಕ್ಷೆಯಲ್ಲಿ ಶಾಹಿ ಜಮಾ ಮಸೀದಿ ಈ ಹಿಂದ ದೇವಸ್ಥಾನ ಇತ್ತು ಎಂಬ ಸಾಕ್ಷಿ ದೊರೆತಿತ್ತು !

ಸಂಭಲ (ಉತ್ತರಪ್ರದೇಶ)ನ ಶ್ರೀ ಹರಿಹರ ದೇವಸ್ಥಾನದ ಪ್ರಕರಣ

ಸಂಭಲ (ಉತ್ತರಪ್ರದೇಶ) – ಇಲ್ಲಿಯ ಪ್ರಾಚೀನ ಶ್ರೀ ಹರಿಹರ ದೇವಸ್ಥಾನ ಇರುವಲ್ಲಿನ ಶಾಹಿ ಜಮಾ ಮಸೀದಿಯಲ್ಲಿನ ಸಮೀಕ್ಷೆಯ ಬಗ್ಗೆ ಇನ್ನೊಂದು ನೂತನ ಮಾಹಿತಿ ಬಹಿರಂಗವಾಗಿದೆ. ಸರಕಾರ, ೧೮೭೪ ರ ೧೫೦ ವರ್ಷ ಪ್ರಾಚೀನ ಸಮೀಕ್ಷೆಯ ವರದಿಯಲ್ಲಿ ಜಾಮಾ ಮಸೀದಿಯಲ್ಲಿ ದೇವಸ್ಥಾನದ ಸಾಕ್ಷಿಗಳು ದೊರೆತಿದ್ದವು, ಎಂದು ದಾವೆ ಮಾಡಿದೆ. ಇವರದೇ ಬ್ರಿಟಿಷ್ ಇಂಜಿನಿಯರ್ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆಯ ಜನಕ ಮೇಜರ್ ಜನರಲ್ ಎ. ಕನಿಂಘಮ ಇವರ ಉಸ್ತುವಾರಿಯಲ್ಲಿ ತಯಾರಿಸಲಾಗಿತ್ತು. ಈ ವರದಿ ೧೮೭೪-೭೫ ರಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬ್ರಿಟಿಷ್ ಪುರಾತತ್ವ ವಿಜ್ಞಾನಿ ಕಾರ್ಲೆಲ್ ಇವರು ತಯಾರಿಸಿದ್ದರು. ಈ ಮಸೀದಿಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ನ್ಯಾಯಾಲಯದ ಆದೇಶದಿಂದ ಅದರ ಸಮೀಕ್ಷೆ ಕೂಡ ನಡೆಸಲಾಗಿದೆ. ಇನ್ನು ಅದರ ವರದಿ ಬಹಿರಂಗ ಆಗಬೇಕಿದೆ.

೧. ಈ ವರದಿಯಲ್ಲಿ; ಈ ಕಟ್ಟಡದ ಸುಂದರ ಗುಮ್ಮಟ ಬಹುಶಃ ಈ ರೀತಿಯ ಗುಮ್ಮಟಗಳಲ್ಲಿ ಅದ್ವಿತೀಯವಾಗಿದೆ. ಅದರ ಆಕಾರ ಒಂದು ಮಹಾಕಾಯ ಹೆಬ್ಬೆರಳಿನ ಒಳಗಿನ ಟೊಳ್ಳಿನಂತೆ ಇದೆ. ಕಟ್ಟಡವನ್ನು ಮಸೀದಿಯಲ್ಲಿ ರೂಪಾಂತರ ಮಾಡುವುದಕ್ಕಾಗಿ ಚಿಕ್ಕ ಇಟ್ಟಿಗೆಯ ಕಾಮಗಾರಿ ಮಾಡಿರುವುದು ಕಂಡು ಬರುತ್ತಿದೆ. ಎಲ್ಲೆಲ್ಲಿ ಗೋಡೆ ಪ್ಲಾಸ್ಟರ್‍‌ನಿಂದ ಮುಕ್ತವಾಗಿದ್ದವು, ಅಲ್ಲಲ್ಲಿ ನನಗೆ (ಕನಿಂಘಮ ಇವರಿಗೆ), ಇಟ್ಟಿಗೆ ಚಿಕ್ಕದಾಗಿದ್ದವು ಮತ್ತು ಮಣ್ಣಿನ ಕೇಸರಿನಲ್ಲಿ ಕೂಡಿಸಲಾಗಿರುವುದು ಕಂಡು ಬಂದಿದೆ, ಎಂದು ಹೇಳಿದೆ.

೨. ಪ್ರಾಚೀನ ಹಿಂದೂ ಪದ್ಧತಿಯಿಂದ ಮಾಡಿರುವ ಕಾಮಗಾರಿಯಲ್ಲಿ ಮತ್ತು ಆಧುನಿಕ ಮುಸಲ್ಮಾನ ಕಾಮಗಾರಿಯಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಪ್ರಾಚೀನ ಹಿಂದೂ ದೇವಸ್ಥಾನಗಳು ಮುಸಲ್ಮಾನ ಕಾಮಗಾರಿಯಿಂದ ಬೇರೆ ಕಂಡು ಬರುತ್ತದೆ. ಚೌಕಕಾರದ ಹಿಂದೂ ದೇವಸ್ಥಾನಕ್ಕೆ ಪೂರ್ವದ ಗೋಡೆಯಲ್ಲಿ ೮ ಅಡಿ ಅಗಲದ ಕೇವಲ ಒಂದೇ ಬಾಗಿಲು ಇತ್ತು; ಆದರೆ ಮುಸಲ್ಮಾನರು ಅಲ್ಲಿ ಇನ್ನು ೪ ಬಾಗಿಲಗಳು ಅಳವಡಿಸಿದರು. ಪ್ರತಿಯೊಂದು ಬಾಗಿಲು ೬ ಅಡಿ ಅಗಲವಾಗಿತ್ತು. ಚೌಕಾಕಾರ ದೇವಸ್ಥಾನದ ಉತ್ತರದ ಗೋಡೆಯಲ್ಲಿ ೨ ಮತ್ತು ದಕ್ಷಿಣದ ಗೋಡೆಯಲ್ಲಿ ೨ ಹೇಗೆ ಬಾಗಿಲಗಳು ಅಳವಡಿಸಿದ್ದರು.

೩. ವರದಿಯಲ್ಲಿ, ಗೂಮ್ಮಟದ ಅಂತರ್ಗತದ ಆಕಾರ ಅಂಡಾಕೃತಿ ಇರುವುದು ಅಥವಾ ಅದರ ಅಕ್ಷಗಳ ಸುತ್ತಲೂ ತಿರುಗುವ ಅರ್ಧ ಲಂಬ ವರ್ತುಲದ ಹಾಗೆ ಇದೆ. ಈ ಗುಮ್ಮಟ ಇಟ್ಟಿಗೆಯಿಂದ ಕಟ್ಟಿದ್ದಾರೆ ಮತ್ತು ಪೃಥ್ವಿರಾಜ ಚೌಹಾನ್ ಇವರ ಕಾಲದಲ್ಲಿ ಅದು ಮತ್ತೆ ಕಟ್ಟಿದ್ದಾರೆ, ಎಂದು ಹೇಳಲಾಗುತ್ತದೆ. (ಈಗ ಹೇಗೆ ಇದೆ ಹಾಗೆ) ವರ್ತುಲಾಕಾರ ಗುಮ್ಮಟ ಅಷ್ಟ ಕೋನದ ಮೇಲೆ ನಿಂತಿದೆ. ಮಧ್ಯದ ಚೌಕದಲ್ಲಿ ಹಿಂದೂ ದೇವಸ್ಥಾನದ ಗೋಡೆಗಳು ದೊಡ್ಡ ಇಟ್ಟಿಗೆಯಿಂದ ಕಟ್ಟಿದ್ದಾರೆ ಮತ್ತು ಕಲ್ಲಿನಿಂದ ಅಲಂಕರಿಸಿರುವುದು ಕಾಣುತ್ತದೆ; ಆದರೆ ಗೋಡೆಗೆ ಹಚ್ಚಿರುವ ಪ್ಲಾಸ್ಟರ್ ಅದನ್ನು ಕಟ್ಟಿರುವ ಸಾಮಗ್ರಿ ಮರೆಮಾಚುತ್ತಿದೆ. ನನಗೆ ವಿಶ್ವಾಸ ಇದೆ ಏನೆಂದರೆ, ಹಿಂದೂ ಧಾರ್ಮಿಕ ಚಿನ್ಹೆಗಳು ಎಲ್ಲಿ ಇದ್ದವು ಅಲ್ಲಿ ಮುಸಲ್ಮಾನರು ಅದರ ಮೇಲೆ ಪ್ಲಾಸ್ಟರ್ ಹಚ್ಚಿದ್ದಾರೆ.