MP Villages Name Change : ಮಧ್ಯಪ್ರದೇಶದ ದೇವಾಸ ಜಿಲ್ಲೆಯ 54 ಗ್ರಾಮಗಳ ಹೆಸರುಗಳ ಮರು ನಾಮಕರಣ ! – ಮುಖ್ಯಮಂತ್ರಿಗಳ ಘೋಷಣೆ

ಮುಖ್ಯಮಂತ್ರಿ ಮೋಹನ ಯಾದವ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಮೋಹನ ಯಾದವ ಅವರು ರಾಜ್ಯದ ದೇವಾಸ ಜಿಲ್ಲೆಯ 54 ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದಾಗಿ ಘೋಷಿಸಿದ್ದಾರೆ. ದೇವಾಸ ಜಿಲ್ಲೆಯ ಪಿಪಲರಾವಾ ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಮುಖ್ಯಮಂತ್ರಿ ಮೋಹನ ಯಾದವ ಅವರಿಗೆ ಭಾಜಪ ಜಿಲ್ಲಾಧ್ಯಕ್ಷ ರಾಯಸಿಂಗ್ ಸೈಂಧವ ಅವರು ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಪಟ್ಟಿಯನ್ನು ಹಸ್ತಾಂತರಿಸಿದರು. ಅದಾದ ನಂತರ, ಮುಖ್ಯಮಂತ್ರಿ ಮೋಹನ ಯಾದವ ಅವರು ವೇದಿಕೆಯಿಂದ 54 ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದಾಗಿ ಘೋಷಿಸಿದರು. ಹಾಗೆಯೇ ಈ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಈ ಹಿಂದೆ ಜನವರಿಯ ತಿಂಗಳಿನಲ್ಲಿ, ಮುಖ್ಯಮಂತ್ರಿಗಳು ಶಾಜಾಪುರ ಜಿಲ್ಲೆಯ ಪ್ರವಾಸದಲ್ಲಿದ್ದಾಗ, ಅವರು ವೇದಿಕೆಯಿಂದಲೇ 11 ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದಾಗಿ ಘೋಷಿಸಿದ್ದರು.

ದೇವಾಸ ಜಿಲ್ಲೆಯ ಬದಲಾಯಿಸಲಾಗುತ್ತಿರುವ 54 ಹಳ್ಳಿಗಳಲ್ಲಿ ಮುರಾದಪುರ, ಹೈದರಪುರ, ಶಂಷಾಬಾದ ಮತ್ತು ಇಸ್ಲಾಂನಗರ ಮುಂತಾದ ಇಸ್ಲಾಮಿಕ್ ಹೆಸರುಗಳು ಸೇರಿವೆ. ಜಿಲ್ಲಾಧ್ಯಕ್ಷರು ಹೊಸ ಹೆಸರುಗಳ ಪಟ್ಟಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿದ್ದಾರೆ. ಅದರಲ್ಲಿ ಮುರಾದಪುರದ ಮುರಳಿಪುರ, ಹೈದರಪುರದ ಹಿರಾಪುರ, ಶಂಷಾಬಾದನ ಹೆಸರುಗಳನ್ನು ಶ್ಯಾಮಪುರ, ಇಸ್ಮಾಯಿಲ್ ಖೇಡಿ ಗ್ರಾಮದ ಈಶ್ವರಪುರ, ಅಲಿಪುರದ ರಾಮಪುರ, ನಬಿಪುರದ ನಯಾಪುರ ಮತ್ತು ಮಿರ್ಜಾಪುರದ ಮೀರಾಪುರ. ಎಂದು ಸೂಚಿಸಲಾಗಿದೆ.

ಸಂಪಾದಕೀಯ ನಿಲುವು

ಒಂದು ಜಿಲ್ಲೆಯ ಹೆಸರುನ್ನು ಬದಲಾಯಿಸುವ ಬದಲು ಇಡೀ ರಾಜ್ಯದಲ್ಲಿರುವ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ಮುಖ್ಯಮಂತ್ರಿಗಳು ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !