Power Of Hanuman Chalisa : ಹನುಮಾನ ಚಾಲಿಸ ಪಠಣೆ ಮಾಡುವುದರಿಂದ ಕೇವಲ ಭಕ್ತಿ ಅಷ್ಟೇ ಅಲ್ಲದೆ, ಯೋಗಿಕ ಉಸಿರಾಟ ಕೂಡ ಆಗಿದೆ ! – ನರರೋಗ ತಜ್ಞೆ ಡಾ. ಶ್ವೇತಾ ಅದಾತಿಯಾ

ದುಬೈ – ಪ್ರಸಿದ್ಧ ನರರೋಗತಜ್ಞೆ (ನ್ಯೂರೋಲಜಿಸ್ಟ್) ಡಾ. ಶ್ವೇತಾ ಅದಾತಿಯಾ ಇವರು ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿದ್ದು ಅದರಲ್ಲಿ ಶ್ರೀ ಹನುಮಾನ ಚಾಲಿಸಾದ ವೈಜ್ಞಾನಿಕ ಲಾಭ ತಿಳಿಸಿದ್ದಾರೆ. ಡಾ. ಶ್ವೇತಾ ಅದಾತಿಯಾ ಇವರು, ಹನುಮಾನ ಚಾಲಿಸಾದ ಪಠಣೆ ಹೃದಯ ಮತ್ತು ಮನಸ್ಸಿಗಾಗಿ ಬಹಳ ಲಾಭದಾಯಕವಾಗಿದೆ ಎಂದು ಹೇಳಿದರು. ಅವರು, ಹನುಮಾನ ಚಾಲಿಸ ‘ಯೋಗಿಕ ಶ್ವಾಸ’ ಎಂದು ತಿಳಿಯುತ್ತಾರೆ. ಇದರ ಅರ್ಥ ಏನೆಂದರೆ, ನಾವು ಅದನ್ನು ಓದುತ್ತಾ ನಮ್ಮ ಉಸಿರಾಟ ಒಂದು ವಿಶಿಷ್ಟ ಪದ್ಧತಿಯನ್ನು ಅನುಸರಿಸುತ್ತೇವೆ.

೧. ಶ್ರೀ ಹನುಮಾನ ಚಾಲಿಸಾದ ಕೆಲವು ಚೌಪಾಯಿ (ಸಾಲುಗಳ) ಪಠಣೆ ಮಾಡುವಾಗ, ಉಸಿರು ಒಳಗೆ ತೆಗೆದುಕೊಳ್ಳುತ್ತೇವೆ (ಉದಾ. ಜೈ ಹನುಮಾನ ಜ್ಞಾನ ಗುಣಸಾಗರ), ಹಾಗೂ ಕೆಲವು ಚೌಪಾಯಿಗಳ(ಸಾಲುಗಳ) ಪಠಣೆ ಮಾಡುವಾಗ, ಉಸಿರು ಬಿಡುತ್ತೇವೆ. (ಉದಾ. ಜಯ ಕಪಿಸ ತಿಹೂ ಲೋಕ ಉಜಾಗರ) ಕೆಲವುದರಲ್ಲಿ ಉಸಿರು ಹಿಡಿದಿಟ್ಟುಕೊಳ್ಳುತ್ತೇವೆ. (ಉದಾ. ರಾಮದೂತ ಅತುಲಿತ ಬಲಧಾಮ), ಕೆಲವುದರಲ್ಲಿ ಉಸಿರು ತಡೆದ ನಂತರ ಹೊರಗೆ ಹೋಗುತ್ತದೆ. (ಉದಾ. ಅಂಜನಿ ಪುತ್ರ ಪವನ ಸುತ ನಾಮ)

೨. ಡಾ. ಶ್ವೇತಾ ಅದಾತಿಯಾ ಇವರ ಅಭಿಪ್ರಾಯ, ಈ ಪ್ರಕ್ರಿಯೆ ಹೃದಯದ ಗತಿ ಪರಿವರ್ತನೆಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹೃದಯದ ಸ್ಥಿತಿ ಆರೋಗ್ಯವಾಗಿರಲು ಸಹಾಯವಾಗುತ್ತದೆ. ಇನ್ನೊಂದು ಕಡೆಗೆ ಹನುಮಾನ ಚಾಲಿಸಾದ ಯೋಗ್ಯರೀತಿಯಲ್ಲಿ ಪಠಣೆ ಮಾಡಿದರೆ, ಆಗ ಅದರ ನೇರ ಪರಿಣಾಮ ‘ಲಿಂಬಿಕ್ ಸಿಸ್ಟಮ್’ ಮೇಲೆ (ಮೆದುಳಿಗೆ ಸಂಬಂಧಿಸಿದ ನರಮಂಡಲದ ಮೇಲೆ) ಆಗುತ್ತದೆ. ಅದರಿಂದ ವ್ಯಕ್ತಿಯ ಚಿಂತೆ ಕಡಿಮೆಯಾಗುತ್ತದೆ ಮತ್ತು ಅವನಲ್ಲಿನ ಒಳಗಿನ ಭಯ ಹೊರಟು ಹೋಗುತ್ತದೆ.

೩. ಡಾ. ಶ್ವೇತಾ ಅದಾತಿಯಾ ಇವರು, ಶ್ರೀ ಹನುಮಾನ ಚಾಲಿಸಾ ಓದುವುದರಿಂದ ನರಮಂಡಲ ಸಕ್ರಿಯವಾಗುತ್ತದೆ, ಅದರಿಂದ ಪಚನ ಮತ್ತು ಒತ್ತಡ ನಿರ್ವಹಣೆ ಇವುಗಳಂತಹ ಶಾರೀರಿಕ ಅನೇಕ ಕಾರ್ಯಗಳಲ್ಲಿ ಸಹಾಯ ಆಗುತ್ತದೆ’, ಎಂದು ಹೇಳಿದರು.

೪. ಶ್ರೀ ಹನುಮಾನ ಚಾಲಿಸ ಓದುವುದರಿಂದ ಹೃದಯ ಮತ್ತು ಮನಸ್ಸು ಎರಡರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಇದು ಪ್ರಯೋಗದಿಂದ ಕಂಡು ಬಂದಿದೆ, ಹೀಗೂ ಕೂಡ ಡಾ. ಶ್ವೇತಾ ಅದಾತಿಯಾ ಇವರು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ದೇವತೆಗಳ ಸ್ತೋತ್ರಗಳನ್ನು ಅವಹೇಳನ ಮಾಡುವ ಬುದ್ಧಿ ಪ್ರಾಮಾಣ್ಯವಾದಿಗಳು ಈ ವಿಷಯದ ಬಗ್ಗೆ ಏನಾದರೂ ಹೇಳುವರೆ ?