Name Changes in Rajasthan : ಅಜ್ಮೇರ್’ನ ‘ಕಿಂಗ್ ಎಡ್ವರ್ಡ್ ಸ್ಮಾರಕ’ದ ಹೆಸರನ್ನು ಬದಲಾಯಿಸಿ ‘ಮಹರ್ಷಿ ದಯಾನಂದ ವಿಶ್ರಾಂತಿ ಗೃಹ’ ಹಾಗೂ ‘ಫಾಯ್ ಸಾಗರ’ ಹೆಸರನ್ನು ‘ವರುಣ ಸಾಗರ’ ಎಂದು ಮರುನಾಮಕರಣ !

ಅಜ್ಮೆರ್‍‌(ರಾಜಸ್ಥಾನ) – ರಾಜಸ್ಥಾನ ಸರಕಾರವು ಅಜ್ಮೆರ್‍‌ ನಲ್ಲಿರುವ ‘ಕಿಂಗ್ ಎಡ್ವರ್ಡ್ ಸ್ಮಾರಕ’ದ ಹೆಸರನ್ನು ‘ಮಹರ್ಷಿ ದಯಾನಂದ ಸ್ಮಾರಕ’ ಹಾಗೂ ‘ಫಾಯ್ ಸಾಗರ’ ಸರೋವರದ ಹೆಸರನ್ನು ‘ವರುಣ ಸಾಗರ’ ಎಂದು ಬದಲಾಯಿಸಲಾಗಿದೆ. ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಮತ್ತು ಅಜ್ಮೆರ್‍‌ ಉತ್ತರ ಶಾಸಕ ವಾಸುದೇವ ದೇವನಾನಿಯವರು ಇತ್ತೀಚೆಗೆ ಅಜ್ಮೆರ್‍‌ ಮಹಾನಗರ ಪಾಲಿಕೆ ಆದೇಶ ಹೊರಡಿಸಿದ ನಂತರ ಸರೋವರಗಳು ಮತ್ತು ಸ್ಮಾರಕಗಳ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ, ಎಂದು ಹೇಳಿದ್ದಾರೆ.

1. ವಾಸುದೇವ ದೇವನಾನಿ ಮಾತನಾಡಿ, ಅಜ್ಮೆರ್‍‌ನಲ್ಲಿ 132 ವರ್ಷಗಳಷ್ಟು ಹಳೆಯದಾದ ‘ಫಾಯ್ ಸಾಗರ’ ಇತ್ತು, ಅದಕ್ಕೆ ಇಂಗ್ಲಿಷ್ ಎಂಜಿನಿಯರ್ ಹೆಸರನ್ನು ಇಡಲಾಗಿತ್ತು, ಈಗ ಸರೋವರದ ಹೆಸರನ್ನು ಜಲದೇವತೆ `ವರುಣ’ ಎಂದು ಇಡಲಾಗಿದೆ.

2. ದೇವನಾನಿ ಮಾತುಮುಂದುವರೆಸಿ, ಕ್ರಮೇಣ ಸರೋವರದ ಬಳಿ ವರುಣ ದೇವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಮತ್ತು ಘಾಟ್ ಅನ್ನು ಸಹ ನಿರ್ಮಿಸಲಾಗುವುದು. ಅಲ್ಲಿ ಕುಳಿತು ಜನರು ಪ್ರಾರ್ಥಿಸಬಹುದು, ಎಂದು ಹೇಳಿದರು.

3. ವಿಧಾನಸಭಾ ಅಧ್ಯಕ್ಷ ಮಾತನಾಡಿ, `ಅಜ್ಮೆರ್‍‌ ರೇಲ್ವೆ ಸ್ಟೇಶನ ರಸ್ತೆಯಲ್ಲಿರುವ 113 ವರ್ಷಗಳಷ್ಟು ಪ್ರಾಚೀನ ‘ಕಿಂಗ್ ಎಡ್ವರ್ಡ್ ಸ್ಮಾರಕ’ ಕಟ್ಟಡದ ಹೆಸರನ್ನು ಸಹ ಬದಲಾಯಿಸಲಾಗಿದೆ”. ಈಗ ಅದರ ಹೆಸರನ್ನು ‘ಮಹರ್ಷಿ ದಯಾನಂದ ವಿಶ್ರಾಂತಿ ಗೃಹ’ ಎಂದು ಬದಲಾಯಿಸಲಾಗಿದೆ. ಅಜ್ಮೆರ್‍‌ ಮಹರ್ಷಿ ದಯಾನಂದ ಸರಸ್ವತಿಯವರ ವಾಸಸ್ಥಾನವಾಗಿದೆಯೆಂದು” ಹೇಳಿದರು.

4. ವಾಸುದೇವ ದೇವನಾನಿ ಮಾತನಾಡಿ, ಸ್ವಾತಂತ್ರ್ಯದ 77 ವರ್ಷಗಳ ನಂತರವೂ ಅಜ್ಮೆರ್‍‌ನಲ್ಲಿ ಗುಲಾಮಗಿರಿಯ ಕೆಲವು ಚಿಹ್ನೆಗಳು ಅಸ್ತಿತ್ವದಲ್ಲಿದ್ದವು, ಇದರಿಂದ ನಮ್ಮ ಮನಸ್ಸಿನಲ್ಲಿ ಗುಲಾಮಗಿರಿಯ ಮನಃಸ್ಥಿತಿ ನಿರ್ಮಾಣವಾಗುತ್ತಿತ್ತು. ಆದ್ದರಿಂದ ಸರಕಾರ ಹೆಸರನ್ನು ಬದಲಾಯಿಸಲು ನಿರ್ಧರಿಸಿತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಗುಲಾಮಗಿರಿಯ ಸಂಕೇತಗಳನ್ನು ತೆಗೆದುಹಾಕಿದ ಅಜ್ಮೆರ್‍‌ ಮಹಾನಗರಪಾಲಿಕೆ ಮತ್ತು ರಾಜಸ್ಥಾನದ ಭಾಜಪ ಸರಕಾರಕ್ಕೆ ಅಭಿನಂದನೆಗಳು!