ಢಾಕಾ (ಬಾಂಗ್ಲಾದೇಶ)ದಲ್ಲಿ ಜಿಹಾದಿಗಳಿಂದ ಪುಸ್ತಕ ಮಳಿಗೆ ಮೇಲೆ ದಾಳಿ !

ತಸ್ಲಿಮಾ ನಸ್ರೀನ್ ಅವರ ಪುಸ್ತಕ ಮಾರಾಟಕ್ಕೆ ಇಟ್ಟಿದ್ದರಿಂದ ದಾಳಿ

ಢಾಕಾ – ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪುಸ್ತಕ ಮೇಳದಲ್ಲಿ ಸಬ್ಯಸಾಚಿ ಪ್ರಕಾಶನದ ಪುಸ್ತಕಗಳನ್ನು ಮಾರುವ ಕೇಂದ್ರದ ಮೇಲೆ ಜಿಹಾದಿಗಳು ದಾಳಿ ನಡೆಸಿದರು. ಈ ಪುಸ್ತಕ ಮಾರಾಟಗಾರ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಅವರ ಒಂದು ಪುಸ್ತಕವನ್ನು ಮಾರಾಟಕ್ಕೆ ಇಟ್ಟಿದ್ದನು. ಇದರಿಂದ ಕೋಪಗೊಂಡ ಜಿಹಾದಿಗಳು ಸಬ್ಯಸಾಚಿ ಪ್ರಕಾಶನದ ಅಂಗಡಿಗೆ ಮುತ್ತಿಗೆ ಹಾಕಿ ನಂತರ ಅದರ ಮೇಲೆ ದಾಳಿ ಮಾಡಿದರು.

ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ತಸ್ಲಿಮಾ ನಸ್ರೀನ್, “ನನ್ನ ಪುಸ್ತಕವನ್ನು ಮಾರಾಟಕ್ಕೆ ಇಡುವುದು ಪುಸ್ತಕ ಮಾರಾಟ ಕೇಂದ್ರದ ಮಾಲೀಕರ ‘ಅಪರಾಧ’ವಾಗಿತ್ತು. ಪುಸ್ತಕ ಮೇಳದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ನನ್ನ ಪುಸ್ತಕವನ್ನು ತೆಗೆದುಹಾಕುವಂತೆ ಆದೇಶಿಸಿದರು. ಪುಸ್ತಕವನ್ನು ತೆಗೆದುಹಾಕಿದ ನಂತರವೂ ಜಿಹಾದಿಗಳು ಆ ಕೇಂದ್ರದ ಮೇಲೆ ದಾಳಿ ನಡೆಸಿ, ಅದನ್ನು ಧ್ವಂಸಗೊಳಿಸಿ ಮುಚ್ಚಿಸಿದರು. ಸರಕಾರ ಈ ಜಿಹಾದಿಗಳಿಗೆ ಬೆಂಬಲ ನೀಡುತ್ತಿದೆ ಮತ್ತು ಜಿಹಾದಿ ಚಟುವಟಿಕೆಗಳು ದೇಶಾದ್ಯಂತ ಹರಡುತ್ತಿವೆ.’ ಎಂದು ಹೇಳಿದರು. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಪ್ರಸ್ತುತ ಪುಸ್ತಕ ಮೇಳದಲ್ಲಿ ಸ್ಥಾಪಿಸಲಾದ ‘ಸಬ್ಯಸಾಚಿ ಪಬ್ಲಿಕೇಷನ್ಸ್ ಸ್ಟಾಲ್’ ಅನ್ನು ಮುಚ್ಚಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಜಿಹಾದಿ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚಾಗುತ್ತಿವೆ, ಇದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !