ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಭಕ್ತರ ದಟ್ಟಣೆ
(ಕುಂಭಮೇಳದಲ್ಲಿ ಸುಮಾರು ಒಂದು ತಿಂಗಳ ಕಾಲ ಭಕ್ತರಿಂದ ಸಂಗಮ ಸ್ನಾನ ವ್ರತವನ್ನು ಆಚರಿಸಲಾಗುತ್ತದೆ. ಆ ವ್ರತ ಆಚರಿಸುವವರನ್ನು ‘ಕಲ್ಪವಾಸಿ’ ಎಂದು ಕರೆಯಲಾಗುತ್ತದೆ.)
ಪ್ರಯಾಗರಾಜ್, ಫೆಬ್ರವರಿ 12 (ಸುದ್ದಿ) – ಕುಂಭಮೇಳಕ್ಕೆ ಆಗಮಿಸಿದ ಲಕ್ಷಾಂತರ ಕಲ್ಪವಾಸಿಗಳು ಮಾಘ ಪೂರ್ಣಿಮೆಗೆ ತಮ್ಮ ಕಲ್ಪವಾಸ ವ್ರತವನ್ನು ಪೂರ್ಣಗೊಳಿಸಿದರು. ಹೀಗಾಗಿ ಕಳೆದೊಂದು ತಿಂಗಳಿನಿಂದ ಕುಂಭಮೇಳದಲ್ಲಿದ್ದು ಸಾಧನೆ ಮಾಡುತ್ತಿರುವ ಲಕ್ಷಾಂತರ ಕಲ್ಪವಾಸಿಗಳು ಮುಂಜಾನೆಯಿಂದಲೇ ತ್ರಿವೇಣಿ ಸಂಗಮ ಮತ್ತು ಗಂಗಾ ಘಾಟ್‌ಗೆ ಆಗಮಿಸಿ ತ್ರಿವೇಣಿ ಸಂಗಮ ಮತ್ತು ಗಂಗಾ ಘಾಟ್‌ಗೆ ಬಂದು ಮನಃಪೂರ್ವಕ ಪ್ರಾರ್ಥನೆ ಪೂಜೆ- ಅರ್ಚನೆ ಸಲ್ಲಿಸಿ ಸ್ನಾನ ಮಾಡಿದರು.
ಮಾಘಿ ಪೂರ್ಣಿಮಾ ಫೆಬ್ರವರಿ 11 ರಂದು ಸಾಯಂಕಾಲ 7 ಗಂಟೆಗೆ ಪ್ರಾರಂಭವಾಯಿತು. ಆದ್ದರಿಂದ ಪರ್ವ ಸ್ನಾನದ ಪ್ರಯೋಜನ ಪಡೆಯಲು ಭಕ್ತರು ಫೆ.11ರಂದು ಸಂಜೆ 7 ಗಂಟೆಯಿಂದಲೇ ಪರ್ವ ಸ್ನಾನ ಆರಂಭಿಸಿದರು. ರಾತ್ರಿಯಿಡೀ ಲಕ್ಷಾಂತರ ಭಕ್ತರು ಪರ್ವ (ಉತ್ಸವ) ಸ್ನಾನ ಮಾಡಿದ್ದರಿಂದ ಬೆಳಗ್ಗೆ ಭಕ್ತರ ನೂಕುನುಗ್ಗಲು ನಿಯಂತ್ರಣಕ್ಕೆ ಬಂತು. ಅಮೃತಸ್ನಾನವು ಪೂರ್ಣಗೊಂಡಿದ್ದರಿಂದ, ಪರ್ವ ಸ್ನಾನಕ್ಕೆ ಅಖಾಡಗಳ ಮತ್ತು ಸಾಧುಗಳ ಪ್ರತಿನಿಧಿಗಳು ಇರಲಿಲ್ಲ. ಆದ್ದರಿಂದ ಪೊಲೀಸರು ತ್ರಿವೇಣಿ ಸಂಗಮದಲ್ಲಿ ಭಕ್ತರಿಗೆ ಸ್ನಾನಕ್ಕೆ ಅವಕಾಶ ನೀಡಿದರು. ಸ್ನಾನ ಮಾಡುವವರಲ್ಲಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಇದ್ದರು.
ಕುಂಭಕ್ಷೇತ್ರದಲ್ಲಿ ವಾಹನ ನಿಷೇಧದಿಂದ ಸಂಗಮ ರಸ್ತೆಯಲ್ಲಿ ದಟ್ಟಣೆ ನಿಯಂತ್ರಣ !
ಪರ್ವ ಸ್ನಾನದ ಹಿನ್ನೆಲೆಯಲ್ಲಿ ಫೆ.11ರ ರಾತ್ರಿ 8 ಗಂಟೆಯಿಂದ ಕುಂಭ ಕ್ಷೇತ್ರದಲ್ಲಿ ವಾಹನಗಳ ಸಂಚಾರಕ್ಕೆ ಆಡಳಿತ ಮಂಡಳಿ ನಿಷೇಧ ಹೇರಿತ್ತು. ಕುಂಭ ಕ್ಷೇತ್ರಕ್ಕೆ ಅಗತ್ಯ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಹಾಗಾಗಿ ಪೊಲೀಸರು ಕುಂಭ ಕ್ಷೇತ್ರದಲ್ಲಿ ಜನಸಂದಣಿಯನ್ನು ನಿಯಂತ್ರಿಸಿದರು.