ಮಹಾಕುಂಭ ಕ್ಷೇತ್ರದಲ್ಲಿ ಉಚಿತ ಮಾರಾಟ !
ಪ್ರಯಾಗರಾಜ, ಫೆಬ್ರುವರಿ ೧೨(ಸುದ್ಧಿ) – ಮಹಾಕುಂಭ ಕ್ಷೇತ್ರದ ತ್ರಿವೇಣಿ ಸಂಗಮದ ಮಾರ್ಗದಲ್ಲಿ ‘ಮಾನವ ಧರ್ಮಶಾಸ್ತ್ರ’ ಈ ಹಿಂದೂ ದ್ವೇಷಿ ಪುಸ್ತಕವು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಈ ಪುಸ್ತಕದಲ್ಲಿ ಮಂದಿರ, ಮಸೀದಿ, ಮೌಲ್ವಿ (ಇಸ್ಲಾಮಿನ ಧಾರ್ಮಿಕ ನಾಯಕ) ಮತ್ತು ಅರ್ಚಕರು ಇವರನ್ನು ಒಟ್ಟಾಗಿ ಹೋಲಿಸಿ ಹಿಂದೂ ಅರ್ಚಕರ ಬಗ್ಗೆ ಅಸಂಬದ್ಧ ಮಾಹಿತಿ ನೀಡಿ ಹಿಂದೂಗಳ ಬ್ರೈನ್‌ವಾಷ್ ಮಾಡುತ್ತಿದ್ದಾರೆ. ಈ ಪುಸ್ತಕದ ಪ್ರೇರಣಾಸ್ಥಾನ ಎಂದು ಅವಧೂತ ದೇವಿದಾಸ ಇವರ ಹೆಸರು ಮತ್ತು ಅವರ ಛಾಯಾಚಿತ್ರ ನೀಡಿದ್ದಾರೆ. ಇದರ ಲೇಖಕರು ಲಕ್ಷ್ಮೀನಾರಾಯಣ ಎಂದಾಗಿದ್ದೂ ಅವರು ಬಂಗಾಲದ ಐ.ಪಿ.ಎಸ್. ಅಧಿಕಾರಿಯಾಗಿದ್ದಾರೆ, ಎಂಬ ಉಲ್ಲೇಖ ಮಾಡಿದ್ದಾರೆ. ಈಗ ಪುಸ್ತಕದ ಮೂಲ ಮೌಲ್ಯ ೫೦೦ ರೂಪಾಯಿ ಇದ್ದರು ಪ್ರತ್ಯಕ್ಷದಲ್ಲಿ ಮಾತ್ರ ಮಹಾಕುಂಭ ಕ್ಷೇತ್ರದಲ್ಲಿ ಉಚಿತವಾಗಿ ವಿತರಿಸುತ್ತಿದ್ದಾರೆ.
‘ಮಾನವ ಧರ್ಮಶಾಸ್ತ್ರ’ ಈಗ ಪುಸ್ತಕದಲ್ಲಿ ನೀಡಿರುವ ಬ್ರೈನ್‌ವಾಷ್ ಮಾಡುವ ಮಾಹಿತಿ ಹೀಗಿದೆ :
೧. ಮಂದಿರ, ಮಸೀದಿ, ದರ್ಗಾ ಯಾರದೇ ಟ್ರಸ್ಟ್ ಆಗಿರಲಿ, ಅದರಲ್ಲಿ ಸಮಾಜದಲ್ಲಿನ ಎಲ್ಲಾ ವರ್ಗದ ಪ್ರತಿನಿಧಿತ್ವ ಇರಬೇಕು. ಪಂಥದ ಸಂಸ್ಥೆ ಎಲ್ಲಾ ಸಮಾಜಕ್ಕಾಗಿ ಇರಬೇಕು ಹಾಗೂ ಎಲ್ಲರೂ ಒಟ್ಟಾಗಿ ಸೇರಿ ಕಾರ್ಯ ಮಾಡಬೇಕು.
೨. ಪಂಥದ ಮಹಂತರು ತಮ್ಮನ್ನು ಧರ್ಮಗುರು ಎನ್ನುತ್ತಾರೆ. ಅವರು ಮರೆಯಲ್ಲಿ ತಮ್ಮ ಸ್ವಾರ್ಥವನ್ನು ಸಾಧಿಸುತ್ತಾರೆ. ಮುಗ್ಧ ಜನರು ಅವರ ಮಾತಿಗೆ ಮೋಸ ಹೋಗುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಪರಮಾರ್ಥ ಹೇಗೆ ಸಾಧ್ಯ ?
೩. ಅರ್ಚಕರು ಹಗಲಿರಳು ಸುಳ್ಳು ಮಾಹಿತಿ ನೀಡುತ್ತಿರುತ್ತಾರೆ ಹಾಗೂ ಸುಳ್ಳು ಮಾತನಾಡಿ ತಮ್ಮ ಜೀವನ ನಡೆಸುತ್ತಾರೆ, ಅವರು ಧರ್ಮವನ್ನು ಮರೆತು ಜನರನ್ನು ವಂಚಿಸುವ ಕೆಲಸ ಮಾಡುತ್ತಾರೆ.
೪. ಅರ್ಚಕರು ಮನುಷ್ಯನಲ್ಲಿ ತಾರತಮ್ಯ ಮಾಡುತ್ತಾರೆ, ಆದ್ದರಿಂದ ಸಂಸಾರಿಕ ಜೀವನದಲ್ಲಿ ಒಡಕು ಹೆಚ್ಚಾಗುತ್ತದೆ. ಅರ್ಚಕರಿಂದ ಜೀವನ ನಡೆಸಲು ಬೇರೆ ಸಾಧನವಿಲ್ಲ. ಆದ್ದರಿಂದ ಅವರು ತಾರತಮ್ಯ ನಡೆಸಲು ವಿವಶರಾಗಿದ್ದಾರೆ.
ಸಂಪಾದಕೀಯ ನಿಲುವುಹಿಂದುಗಳ ಎಲ್ಲಕ್ಕಿಂತ ದೊಡ್ಡ ಉತ್ಸವದಲ್ಲಿ ಹಿಂದೂಗಳ ಬ್ರೈನ್‌ವಾಷ್ ಮಾಡುವ ಪುಸ್ತಕದ ಹೇಗೆ ಮಾರಾಟ ಮಾಡಲಾಗುತ್ತಿದೆ ? ಮಕ್ಕಾ ಅಥವಾ ವ್ಯಾಟಿಕನ್ ಚರ್ಚ್ ಇಲ್ಲಿ ಅನುಕ್ರಮವಾಗಿ ಇಸ್ಲಾಂ ಅಥವಾ ಕ್ರೈಸ್ತ ಪಂಥದ ವಿರೋಧದಲ್ಲಿನ ಪುಸ್ತಕದ ಮಾರಾಟ ಮಾಡುವುದು ಎಂದಾದರೂ ಸಾಧ್ಯವೇ ? ಇಂತಹ ಪುಸ್ತಕದ ಮಾರಾಟಕ್ಕೆ ಅನುಮತಿ ನೀಡಿದವರು ಮತ್ತು ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |