ಸ್ವಾತಂತ್ರ್ಯವೀರ ಸಾವರಕರ ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸುವುದನ್ನು ವಿರೋಧಿಸಿದ ಮಾರ್ಸಿಲಿಸ್ ನಾಗರಿಕರಿಗೆ ಧನ್ಯವಾದ ! – ಪ್ರಧಾನಿ ಮೋದಿ

ಫ್ರಾನ್ಸ್ ಭೇಟಿಯಲ್ಲಿರುವ ಮೋದಿಯವರಿಂದ ಮಾರ್ಸೆಲಿಸ್ ನಗರಕ್ಕೂ ಭೇಟಿ

ಪ್ಯಾರಿಸ (ಫ್ರಾನ್ಸ್) – ಪ್ರಧಾನಿ ಮೋದಿ ಅವರು ಎರಡು ದಿನಗಳ ಫ್ರಾನ್ಸ್‌ನ ಪ್ರವಾಸದಲ್ಲಿರುವಾಗ ಫೆಬ್ರವರಿ 12 ರಂದು ಮಾರ್ಸೆಲಿಸ ನಗರಕ್ಕೆ ಭೇಟಿ ನೀಡಿದರು. ಅವರು ಇಲ್ಲಿ ಭಾರತದ ಹೊಸ ರಾಯಭಾರಿ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಉಪಸ್ಥಿತರಿದ್ದರು.

ಇದೇ ನಗರದಲ್ಲಿ ಸ್ವಾತಂತ್ರ್ಯವೀರ ಸಾವರಕರ ಜುಲೈ 8, 1910 ರಂದು ಬ್ರಿಟಿಷ್ ಹಡಗಿನಿಂದ ಹಾರಿ ನಗರದ ತೀರವನ್ನು ತಲುಪಿದ್ದರು. ಈ ಸಂದರ್ಭವನ್ನು ನೆನಪಿಸಿಕೊಂಡು ಪ್ರಧಾನಿ ಮೋದಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಪೋಸ್ಟನಲ್ಲಿ, “ಮಾರ್ಸೆಲಿಸ್ ತಲುಪಿದ್ದೇನೆ. ಭಾರತದ ಸ್ವಾತಂತ್ರ್ಯದ ಶೋಧನೆಯಲ್ಲಿ ಈ ನಗರವು ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲೇ ಮಹಾನ ವೀರ ಸಾವರಕರ ಇವರು ಧೈರ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರನ್ನು ಬ್ರಿಟಿಷರ ವಶಕ್ಕೆ ನೀಡಬಾರದೆಂದು ಒತ್ತಾಯಿಸಿದ ಮಾರ್ಸೆಲಿಸ ಜನರಿಗೆ ಮತ್ತು ಆ ಕಾಲದ ಫ್ರೆಂಚ್ ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ವೀರ ಸಾವರಕರ ಅವರ ಶೌರ್ಯವು ಅನೇಕ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಮೊದಲ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ,’ ಎಂದು ಹೇಳಿದರು.

ಫ್ರಾನ್ಸ್ ಸ್ವಾತಂತ್ರ್ಯವೀರ ಸಾವರಕರ ವಿಷಯದಲ್ಲಿ ಹೇಗೆ ಸಹಾಯ ಮಾಡಿತು?

ಸ್ವಾತಂತ್ರ್ಯವೀರ ಸಾವರಕರರನ್ನು ಬ್ರಿಟಿಷ್ ಪೊಲೀಸರು ಕರೆದೊಯ್ದ ನಂತರ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಉಂಟಾಯಿತು. ಸಾವರಕರ ಅವರನ್ನು ಮರಳಿ ಕರೆದೊಯ್ಯುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಫ್ರಾನ್ಸ್ ಆರೋಪಿಸಿತ್ತು. ಬ್ರಿಟನ್ ಇದನ್ನು ಸರಿಯಾಗಿ ಪಾಲಿಸಲಿಲ್ಲ.’ 1911 ರಲ್ಲಿ, ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯವು ಸಾವರಕರರ್ ಅವರ ಬಂಧನವು ಅಕ್ರಮವಾಗಿದೆ ಎಂದು ತೀರ್ಪು ನೀಡಿತು. ಫ್ರಾನ್ಸ್‌ ಜನರು ಮತ್ತು ಅನೇಕ ನಾಯಕರು ಸಾವರಕರ್ ಅವರನ್ನು ಬ್ರಿಟನ್‌ಗೆ ಹಸ್ತಾಂತರಿಸುವುದನ್ನು ವಿರೋಧಿಸಿದ್ದರು. ಆದರೂ ಬ್ರಿಟನ್ ಸಾವರಕರ್ ಅವರನ್ನು ಫ್ರಾನ್ಸ್‌ಗೆ ಹಿಂತಿರುಗಿಸಲು ಬದ್ಧವಾಗಿರಲಿಲ್ಲ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯವೀರ ಸಾವರಕರ ಅವರನ್ನು ಸ್ಮರಿಸಿ ಫ್ರಾನ್ಸ್ ನಾಗರಿಕರಿಗೆ ಧನ್ಯವಾದ ಹೇಳಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ! ಸ್ವಾತಂತ್ರ್ಯದ 78 ವರ್ಷಗಳಲ್ಲಿ ಯಾವುದೇ ಪ್ರಧಾನಿ ಹೀಗೆ ಮಾಡಿಲ್ಲ ಎಂಬುದನ್ನು ಗಮನಿಸಬೇಕು !