Teesta River Conversion: ಬಾಂಗ್ಲಾದೇಶ ಭಾರತಕ್ಕೆ ದೊಡ್ಡ ಅಪಾಯವನ್ನು ಒಡ್ಡುವ ಸಿದ್ಧತೆಯಲ್ಲಿ !

  • ತೀಸ್ತಾ ನದಿ ಯೋಜನೆಯಲ್ಲಿ ಚೀನಾವನ್ನು ಸೇರಿಸಲು ಪ್ರಯತ್ನ

  • ಈ ಯೋಜನೆಯು ಚೀನಾವನ್ನು ಭಾರತದ ‘ಚಿಕನ್ ನೆಕ್’ ನಿಂದ ಕೇವಲ 100 ಕಿ.ಮೀ. ಅಂತರದಲ್ಲಿ ತಲುಪುತ್ತದೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರ ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಉದ್ದೇಶಿತ ಬಹುಪಯೋಗಿ ಯೋಜನೆಯಲ್ಲಿ ಚೀನಾವನ್ನು ಸೇರಿಸಿಕೊಳ್ಳಬಹುದು. ಇದರಿಂದ  ಭಾರತದ ಭದ್ರತೆಗೆ ಗಂಭೀರ ಅಪಾಯ ನಿರ್ಮಾಣವಾಗಬಹುದು. ನದಿ ಸಿಕ್ಕಿಂನಲ್ಲಿ ಹುಟ್ಟಿ ಉತ್ತರ ಬಂಗಾಳದ ಕೆಲವು ಭಾಗಗಳ ಮೂಲಕ ಸುಮಾರು 305 ಕಿ.ಮೀ. ಅಂತರವನ್ನು ದಾಟಿ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. ತೀಸ್ತಾ ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ದೀರ್ಘಕಾಲದ ವಿವಾದವಿದೆ; ಆದರೆ ಶೇಖ್ ಹಸೀನಾ ಸರಕಾರ ಚೀನಾವನ್ನು ಈ ಯೋಜನೆಯಿಂದ ದೂರವಿಟ್ಟಿತು.

ಭಾರತಕ್ಕೆ ಹೇಗೆ ಅಪಾಯ ?

ನಿವೃತ್ತ ಭಾರತೀಯ ಸೇನಾ ಅಧಿಕಾರಿಯೊಬ್ಬರು ಮಾತನಾಡಿ, ತೀಸ್ತಾ ಸಂಬಂಧಿತ ಯೋಜನೆಯಲ್ಲಿ ಚೀನಾವನ್ನು ಸೇರಿಸುವ ನಿರ್ಧಾರವು ಪ್ರಮುಖ ಭದ್ರತಾ ಸಮಸ್ಯೆಯಾಗಲಿದೆ. ಈ ನದಿ ಭಾರತದಿಂದ ಬಾಂಗ್ಲಾದೇಶವನ್ನು ಪ್ರವೇಶಿಸುವ ಸ್ಥಳ (ಕೂಚ್ ಬಿಹಾರ್‍‌ನ ಮೇಖಲಿಗಂಜ್ ಬಳಿ) ‘ಸಿಲಿಗುಡಿ ಕಾರಿಡಾರ್’ ನಿಂದ (ಸಿಲಿಗುಡಿ ರಸ್ತೆ) ಕೇವಲ 100 ಕಿ.ಮೀ ದೂರದಲ್ಲಿದೆ. ಬಾಂಗ್ಲಾದೇಶ ಭಾರತಕ್ಕೆ ಮತ್ತಷ್ಟು  ಸಮಸ್ಯೆಗಳನ್ನು ಸೃಷ್ಟಿಸಲು ಬಯಸುತ್ತಿರುವಂತೆ ತೋರುತ್ತಿದೆ.

‘ಚಿಕನ್ ನೆಕ್’ ಎಂದರೇನು?

‘ಸಿಲಿಗುಡಿ ಕಾರಿಡಾರ್’ ಅನ್ನು ಭಾರತದ `ಚಿಕನ್ ನೆಕ್’ ಎಂದು ಕರೆಯಲಾಗುತ್ತದೆ. ಇದು ಭಾರತೀಯ ಉಪಖಂಡದ ಅತ್ಯಂತ ತೆಳುವಾದ ಭಾಗವಾಗಿದ್ದು, ಇದು ನೇಪಾಳ ಮತ್ತು ಬಾಂಗ್ಲಾದೇಶದ ನಡುವೆ ಇದೆ. ಸಂಪೂರ್ಣ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಅಸ್ಥಿರತೆಯ ಪರಿಣಾಮ ಕೇವಲ ಅಲ್ಲಿನ ಹಿಂದೂಗಳ ಮೇಲೆ ಮಾತ್ರ ಬೀರುತ್ತಿಲ್ಲ, ಅದು ಭಾರತದ ಭದ್ರತೆಗೂ ಅಪಾಯವನ್ನುಂಟು ಮಾಡುತ್ತಿದೆ. ಹೀಗಿರುವಾಗ ಭಾರತದ ನಿಷ್ಕ್ರಿಯತೆ ಅರ್ಥವಾಗುತ್ತಿಲ್ಲ !