೫ ವಿದ್ಯಾರ್ಥಿಗಳ ಬಂಧನ
ಕೊಟ್ಟಾಯಂ (ಕೇರಳ) – ಇಲ್ಲಿಯ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹಿರಿಯ ೫ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿನ ೩ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಅವರ ಗುಪ್ತಾಂಗದ ಮೇಲೆ ಒಂದು ‘ಡಂಬೆಲ್’ (ಭಾರವಾದ) ಇಡಲಾಯಿತು. ನಂತರ ‘ಕಂಪಾಸ್’ ಮತ್ತು ಹರಿತಾದ ವಸ್ತುವಿನಿಂದ ಗಾಯಗೊಳಿಸಿದರು. ಹಾಗೂ ಗಾಯದ ಮೇಲೆ ನೋವು ಹೆಚ್ಚಾಗುವಂತಹ ಮುಲಾಮು ಹಚ್ಚಲಾಯಿತು. ಯಾವಾಗ ಸಂತ್ರಸ್ತ ವಿದ್ಯಾರ್ಥಿಗಳು ನೋವಿನಿಂದ ಕಿರಿಚಾಡಿದರು, ಆಗ ಅವರ ಬಾಯಲ್ಲಿ ಕೂಡ ಮುಲಾಮು ಹಚ್ಚಲಾಯಿತು. ಮೂವರು ಕೂಡ ಮೊದಲ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ ಮತ್ತು ತಿರುವನಂತಪುರಂನ ನಿವಾಸಿಗಳಾಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ತಯಾರಿಸಿದ್ದಾರೆ. ಅವರಿಗೆ ರ್‍ಯಾಗಿಂಗ್ ಘಟನೆಯ ಬಗ್ಗೆ ಹೊರಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಅನುಭವಿಸಬೇಕಾಗುತ್ತದೆ’, ಎಂದು ಬೆದರಿಕೆ ಕೂಡ ನೀಡಿದ್ದರು. ಸಂತ್ರಸ್ತರಲ್ಲಿನ ಓರ್ವ ಹುಡುಗನು ತಂದೆಗೆ ತಿಳಿಸಿದ ನಂತರ ಅವರು ಪೊಲೀಸರಿಗೆ ದೂರು ನೀಡಿ ಈ ಘಟನೆಯನ್ನು ಬಹಿರಂಗಪಡಿಸಿದರು.
ಆರೋಪಿ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ತೆಗೆದು ಹಾಕಲಾಗಿದೆ. ಅವರಿಗೆ ರ್‍ಯಾಗಿಂಗ್ ವಿರೋಧಿ ಕಾನೂನಿನ ಅಡಿಯಲ್ಲಿ ಬಂದಿಸಲಾಗಿದೆ. ಈ ವಿದ್ಯಾರ್ಥಿಗಳು ಸಾರಾಯಿ ಖರಿಧಿಸಲು ಕಿರಿಯ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದರು. ಮತ್ತು ಯಾರು ನೀಡಲು ನಿರಾಕರಿಸಿದರು, ಅವರಿಗೆ ಹೊಡೆಯುತ್ತಿದ್ದರು.
🚨 Shocking 🚨
Ragging in a Kerala nursing college leaves three students injured; five arrested
👉This highlights the consequences of neglecting moral education and failing to teach spiritual practice to students.
👉 Education should not only make a person literate but also… pic.twitter.com/84uVxuInvT
— Sanatan Prabhat (@SanatanPrabhat) February 12, 2025
ಸಂಪಾದಕೀಯ ನಿಲುವು
|