|
ಪ್ರಯಾಗರಾಜ, ಫೆಬ್ರುವರಿ ೧೨(ಸುದ್ಧಿ) – ಮಹಾಕುಂಭದಲ್ಲಿ ಮಾಘ ಪೌರ್ಣಿಮೆಗೆ ತ್ರಿವೇಣಿ ಸಂಗಮ ಮತ್ತು ವಿವಿಧ ಘಟ್ಟಗಳಲ್ಲಿ ಒಟ್ಟು ೧ ಕೋಟೆ ೫೦ ಲಕ್ಷ ಭಕ್ತರು ಸ್ನಾನ ಮಾಡಿದರು. ಮಹಾಕುಂಭ ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ಸಂಗಮದಿಂದ ೧೦ ಕಿಲೋಮೀಟರವರೆಗೆ ಇತ್ತು. ಸಂಗಮ ಕ್ಷೇತ್ರದಲ್ಲಿ ಹೆಲಿಕಾಪ್ಟರ್ ನಿಂದ ಭಕ್ತರ ಮೇಲೆ ೨೫ ಕ್ವಿಂಟಲ್ ಪುಷ್ಪವೃಷ್ಟಿ ಮಾಡಲಾಯಿತು. ಕುಂಬಕ್ಷೇತ್ರ ಮತ್ತು ನಗರದಲ್ಲಿ ವಾಹನ ಪ್ರವೇಶ ನಿಷೇಧವಿದೆ. ಇಂತಹ ಪರಿಸ್ಥಿತಿಯಲ್ಲಿ ಭಕ್ತರಿಗೆ ಸಂಗಮಕ್ಕೆ ಹೋಗಲು ೮ ರಿಂದ ೧೦ ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗುತ್ತಿದೆ.
ಪ್ರಯಾಗರಾಜ ಕಡೆಗೆ ಹೋಗುವ ರಸ್ತೆಗಳಲ್ಲಿ ಸಾರಿಗೆ ದಟ್ಟಣೆ ಆದ ನಂತರ ಸಾರಿಗೆ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಯಿತು. ಸಂಗಮದಲ್ಲಿ ಅರೆ ಸೈನಿಕರನ್ನು ನೇಮಕ ಮಾಡಲಾಗಿತ್ತು. ಬಹಳಷ್ಟು ಭಕ್ತರನ್ನು ಸ್ನಾನಕ್ಕಾಗಿ ಉಳಿದಿರುವ ಘಟ್ಟಕ್ಕೆ ಕಳುಹಿಸಲಾಗುತ್ತಿದೆ. ದಟ್ಟಣೆ ನಿಯಂತ್ರಿಸಲು ಮೊದಲೇ ೧೫ ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿ, ೨೦ ಐ ಎ ಎಸ್ ಮತ್ತು ೮೫ ಐಪಿಎಸ್ ಅಧಿಕಾರಿಗಳು ಮೇಳದಲ್ಲಿ ನೇಮಕಗೊಂಡಿದ್ದಾರೆ. ಲಕ್ಷ್ಮಣಪುರಿ ಇಲ್ಲಿ ಮುಖ್ಯಮಂತ್ರಿ ಯೋಗಿ ಬೆಳಗಿನ ಜಾವ ೪ ಗಂಟೆಯಿಂದ ಮುಖ್ಯಮಂತ್ರಿಗಳ ನಿವಾಸ ಸ್ಥಾನದಲ್ಲಿನ ವಾರ್ ರೂಮ್ ನಿಂದ ಮಹಾಕುಂಭಮೇಳದ ವೀಕ್ಷಣೆ ಮಾಡುತ್ತಿದ್ದಾರೆ. ಮಾಘ ಪೌರ್ಣಿಮೆಯ ಸ್ನಾನದ ಶುಭಮುಹೂರ್ತ ಬೆಳಿಗ್ಗೆ ೭.೨೨ ನಿಮಿಷದವರೆಗೆ ಇತ್ತು. ಮಹಾಕುಂಭಮೇಳದಲ್ಲಿನ ಭಕ್ತರು ಬೇಗನೆ ಹೊರ ಬರಬೇಕು, ಅದಕ್ಕಾಗಿ ಲೇಟೆ ಹನುಮಾನ ಮಂದಿರ, ಅಕ್ಷಯ ವಟ ಮತ್ತು ಡಿಜಿಟಲ್ ಮಹಾಕುಂಭಕೇಂದ್ರ ಮುಚ್ಚಲಾಗಿದೆ. ನಗರ ವಿಕಾಸ ಇಲಾಖೆಯ ಸಚಿವ ಅನುಜ ಕುಮಾರ ಝಾ ಇವರು, ಮೇಳ ಪರಿಸರದಲ್ಲಿ ೧೫ ಸಾವಿರಗಿಂತಲೂ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ನೇಮಕಗೊಂಡಿದ್ದಾರೆ, ಹೀಗಿದ್ದರೂ ನಗರದಲ್ಲಿ ೮ ಸಾವಿರ ಸ್ವಚ್ಛತಾ ಸಿಬ್ಬಂದಿ ನೇಮಕಗೊಳಿಸಲಾಗಿದೆ ಎಂದು ಹೇಳಿದರು. ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಒಂದುವರೆ ಲಕ್ಷಕ್ಕಿಂತಲೂ ಹೆಚ್ಚಿನ ಶೌಚಾಲಯಗಳು ನಿಯಮಿತವಾಗಿ ಸ್ವಚ್ಛ ಮಾಡಲಾಗುತ್ತಿದೆ. ಕುಂಭಮೇಳದಲ್ಲಿ ಕಸ ಹಾಕಬಾರದು, ಎಂದು ಭಕ್ತರಿಗೂ ಕೂಡ ಕರೆ ನೀಡಲಾಗುತ್ತಿದೆ.