‘ಎಐ’ ಯಿಂದ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗುವುದಿಲ್ಲ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ಯಾರಿಸ್ (ಫ್ರಾನ್ಸ್) ಇಲ್ಲಿ ಎರಡು ದಿನಗಳ ‘ಎಐ’ ಸಭೆ ಆರಂಭ

(‘ಎಐ’ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತ್ರಿಮ ಬುದ್ದಿಮತ್ತೆ)

ಪ್ಯಾರಿಸ್ (ಫ್ರಾನ್ಸ್) – ‘ಎಐ’ ಇಂದ ಲಕ್ಷಾಂತರ ಜನರ ಜೀವನ ಬದಲಾಗುವುದು. ಕಾಲ ಬದಲಾಗುತ್ತಿದೆ. ಅದರಂತೆ ಉದ್ಯೋಗದ ಸ್ವರೂಪ ಕೂಡ ಬದಲಾಗುತ್ತಿದೆ. ಯಾವಾಗಲೂ, ‘ಎಐ’ಯಿಂದ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗಬಹುದು ಎಂದು ಚರ್ಚೆ ಆಗುತ್ತದೆ; ಆದರೆ ಇತಿಹಾಸ ನಮಗೆ, ಯಾವುದೇ ತಂತ್ರಜ್ಞಾನದಿಂದ ಉದ್ಯೋಗ ಹೋಗುವುದಿಲ್ಲ; ಎಂದು ಹೇಳುತ್ತದೆ. ‘ಎಐ’ಯಿಂದ ಉದ್ಯೋಗದ ನೂತನ ಅವಕಾಶಗಳು ನಿರ್ಮಾಣವಾಗುವುದು; ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿ ಆಯೋಜಿಸಿರುವ ೨ ದಿನದ ‘ಎಐ’ ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಈ ಸಭೆಗೆ ಅನೇಕ ರಾಷ್ಟ್ರ ಪ್ರಮುಖರು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಹೆಸರಾಂತ ಗಣ್ಯರು ಉಪಸ್ಥಿತರಿದ್ದಾರೆ.

ಪ್ರಧಾನಮಂತ್ರಿಗಳು ಮಾತು ಮುಂದುವರೆಸುತ್ತಾ, ಇಂದು ‘ಎಐ’ ಆವಶ್ಯಕತೆ ಇದೆ. ನಮ್ಮ ಬಳಿ ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಬುದ್ದಿಮತ್ತೆ ಇದೆ. ಸಮಾಜ ಮತ್ತು ಭದ್ರತೆ ಈ ಎರಡು ಘಟಕಗಳಿಗಾಗಿ ಕೃತ್ರಿಮ ಬುದ್ಧಿಮತ್ತೆಯ ಆವಶ್ಯಕತೆ ಇದೆ’, ಎಂದು ಹೇಳಿದರು.