Hindus Conversion Attempt : ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಪ್ರಯತ್ನ

ಜಾಗೃತ ಹಿಂದೂಗಳು ವಿರೋಧಿಸುತ್ತಾ ಕ್ರಮ ಕೈಗೊಳ್ಳುವಂತೆ ಒತ್ತಾಯ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಗೋಮತಿನಗರ ಎಕ್ಸಟೆಂನ್ಷನ್ ಪ್ರದೇಶದ ಭರವಾರಾ ಸ್ಟೇಟ ಕಾಲೋನಿಯ ಸ್ಥಳೀಯ ನಿವಾಸಿಗಳು ಓರ್ವ ವ್ಯಕ್ತಿಯು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅವನ ಹೆಸರು ರಾಜೀವ ಲಾಲ್ ಆಗಿದ್ದು, ಅವನು ತನ್ನ ಮನೆಯನ್ನು ಚರ್ಚ್ ಆಗಿ ಪರಿವರ್ತಿಸಿದ್ದಾನೆ. (ಮತಾಂತರಿತ ಹಿಂದೂಗಳು ಪೋಪ್ ಗಿಂತ ಹೆಚ್ಚು ಅಪಾಯಕಾರಿ ಆಗಿರುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ. ಅಂತಹ ಮತಾಂತರಗೊಂಡನಂತರ ತಮ್ಮ ಹೆಸರನ್ನು ಬದಲಾಯಿಸುವುದಿಲ್ಲ; ಏಕೆಂದರೆ ಅವರ ಹಿಂದೂ ಹೆಸರುಗಳನ್ನು ಹಾಗೆಯೇ ಇಟ್ಟುಕೊಳ್ಳುವುದರಿಂದ ಅವರಿಗೆ ಇತರ ಹಿಂದೂಗಳನ್ನು ಮತಾಂತರಿಸಲು ಸುಲಭವಾಗುತ್ತದೆ! – ಸಂಪಾದಕರು) ಇಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ 1 ರಿಂದ 3 ರವರೆಗೆ, 150 ರಿಂದ 200 ಜನರನ್ನು ಪ್ರಾರ್ಥನೆಗಾಗಿ ಕರೆಯಲಾಗುತ್ತದೆ. ಈ ಸಮಯದಲ್ಲಿ ಮತಾಂತರ ಮಾಡಲಾಗುತ್ತದೆ.

1. ರಾಜೀವ ಲಾಲ್ ಮನೆಯ ಪಕ್ಕದಲ್ಲಿ ವಾಸಿಸುವ ರಿತೇಶ ಮಿಶ್ರಾ ಮಾತನಾಡಿ, ರಾಜೀವ್ ಲಾಲ ಜನರಿಗೆ  ಮನೆಗಳು ಮತ್ತು ಫ್ಲಾಟ್‌ಗಳ ಆಮಿಷವೊಡ್ಡುವ ಮೂಲಕ ಮತಾಂತರಗೊಳಿಸುತ್ತಾನೆ’, ಎಂದು ಹೇಳಿದರು.

2. ಪ್ರದೇಶದ ಇತರ ಜನರು, ರಾಜೀವ ಮನೆಗೆ ಭೇಟಿ ನೀಡುವ ಜನರು ಆ ಪ್ರದೇಶದಲ್ಲಿ ತಮ್ಮ ನಿರ್ದಿಷ್ಟ (ಕ್ರೈಸ್ತ) ಸಮುದಾಯದ ಜನರನ್ನು ನೆಲೆಯೂರುವಂತೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಜನರು ದುಪ್ಪಟ್ಟು ಬೆಲೆಗೆ ಖಾಲಿ ಭೂಮಿಯನ್ನು ಖರೀದಿಸುತ್ತಾರೆ. ತದ ನಂತರ, ಮತಾಂತರಗೊಂಡ ಜನರಿಗೆ ಮನೆಗಳನ್ನು ನಿರ್ಮಿಸಿ ನೀಡಲಾಗುತ್ತಿದೆ.

3. ಭರವಾರಾ ಸ್ಟೇಟ್ ಕಾಲೋನಿಯ ನಿವಾಸಿಗಳ ಪ್ರಕಾರ, ರಾಜೀವ ಲಾಲ 5-6 ವರ್ಷಗಳ ಹಿಂದೆ ತಮ್ಮ ಮನೆಯನ್ನು ಕಟ್ಟಿದ್ದನು ಮತ್ತು ಇದೆಲ್ಲವೂ 6 ತಿಂಗಳ ನಂತರ ಸಂಭವಿಸಲು ಪ್ರಾರಂಭಿಸಿತು. ಇಲ್ಲಿ ಮತಾಂತರಗೊಂಡವರಿಗೆ ಮನೆ ಅಥವಾ ಅಪಾರ್ಟ್ಮೆಂಟ್ ನೀಡಲಾಗುತ್ತದೆ. ಮತಾಂತರಗೊಳ್ಳಲು ನಿರಾಕರಿಸುವವರಿಗೆ ತಮ್ಮ ಮನೆಯನ್ನು ಮಾರಿ ಹೊರಟು ಹೋಗುವಂತೆ ಹೇಳಲಾಗುತ್ತದೆ’, ಎಂದು ಹೇಳಲಾಗುತ್ತಿದೆ.

4. ಸ್ಥಳೀಯ ಜನರು ದನಿ ಎತ್ತಿದ ಬಳಿಕ, ಪೊಲೀಸರು ಘಟನಾ ಸ್ಥಳಕ್ಕೆ ಬಂದರು. ಅವರು ಮನೆಯೊಳಗೆ ಪ್ರವೇಶಿಸಿ ಹಲವಾರು ಹುಡುಗಿಯರು ಸೇರಿದಂತೆ 50 ಕ್ಕೂ ಹೆಚ್ಚು ಜನರನ್ನು ಮತಾಂತರಗೊಳ್ಳದಂತೆ ರಕ್ಷಿಸಿದರು.

5. ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಅವರದೇ ಆದ ರೀತಿಯಲ್ಲಿ ಚರ್ಚ್ ಅನ್ನು ಕೆಡವುತ್ತೇವೆ ಮತ್ತು ಪ್ರತಿ ಭಾನುವಾರ ಚರ್ಚ್ ಹೊರಗೆ ರಾಮಾಯಣದ ಸುಂದರಕಾಂಡವನ್ನು ಪಠಿಸುತ್ತೇವೆ ಎಂದು ಹಿಂದೂಗಳು ಹೇಳಿದರು.

6. ಕಳೆದ 4-5 ವರ್ಷಗಳಿಂದ ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಹಿಂದೂಗಳು ಒತ್ತಾಯಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !