|
ಕಾಸಗಂಜ (ಉತ್ತರಪ್ರದೇಶ) – ಕಾಸಗಂಜದಲ್ಲಿನ ಸರಾಯ ಜುನ್ನಾರದಾರ ಗ್ರಾಮದಲ್ಲಿನ ಹಿಂದೂ ಗ್ರಾಮಸ್ಥರು ‘ಮಾರಾಟಕ್ಕಾಗಿ ಮನೆ’ ಎಂದು ಮನೆಯ ಹೊರಗೆ ಫಲಕಗಳು ಹಾಕಿದ್ದರು. ‘ಈ ಸಲ ಹೋಳಿ ಹಬ್ಬ ಆಚರಿಸಬಾರದು’, ಹೀಗೂ ಕೂಡ ಅವರು ಹೇಳಿದ್ದರು. ಹಿಂದುಗಳಿಗೆ ಗ್ರಾಮದಲ್ಲಿ ಒಂದು ನಿಶ್ಚಿತ ಸ್ಥಳ ಹೋಳಿ ಹೊತ್ತಿಸಲು ಅನುಮತಿ ಬೇಕಿತ್ತು. ಈ ಸ್ಥಳ ಒಂದು ಮಸೀದಿಯ ಹತ್ತಿರ ಇದೆ. ಮುಸಲ್ಮಾನರು ಅದನ್ನು ವಿರೋಧಿಸುತ್ತಿದ್ದರು. ಹಿಂದುಗಳು ಕೂಡ ಈ ಸಂದರ್ಭದಲ್ಲಿ ಪ್ರತಿಭಟನೆಗಳು ನಡೆಸಿದರು. ಅದರ ನಂತರ ಪೊಲೀಸರು ಈ ವಿವಾದ ಬಗೆಹರಿಸಿದರು.
೧. ಈ ಗ್ರಾಮದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದಲ್ಲಿ ಕೆಲವು ಹಿಂದೂ ಕುಟುಂಬಗಳು ಕೂಡ ವಾಸಿಸುತ್ತವೆ. ಗ್ರಾಮದಲ್ಲಿನ ಯಾವುದಾದರೂ ಸ್ಥಳದಲ್ಲಿ ಹೋಳಿ ಹೊತ್ತಿಸಲು ಆಗ್ರಹಿಸಿ ಹಿಂದುಗಳು ಪ್ರತಿಭಟನೆ ನಡೆಸಿದರು. ಯಾವ ಸ್ಥಳದಲ್ಲಿ ಹಿಂದುಗಳು ಆಗ್ರಹಿಸುತ್ತಿದ್ದರು, ಅದು ಸಾಂಪ್ರದಾಯಿಕ ಸ್ಥಳವಾಗಿದೆ. ಕಳೆದ ಅನೇಕ ದಶಕಗಳಿಂದ ಅಲ್ಲಿ ಹೋಳಿ ದಹನ ಆಗುತ್ತಿತ್ತು.
೨. ಸ್ಥಳೀಯ ಪತ್ರಕರ್ತ ಆಯುಷ್ ಭಾರದ್ವಾಜ ಇವರು, ಸಮಾಜವಾದಿ ಪಕ್ಷದ ಸರಕಾರದ ಸಮಯದಲ್ಲಿ ಮುಸಲ್ಮಾನರು ಹೋಳಿ ಹೊತ್ತಿಸಿರುವ ಸ್ಥಳದ ಹತ್ತಿರ ಒಂದು ಮಸೀದಿ ಕಟ್ಟಿದ್ದರು. ಮಸೀದಿಯ ಕಾಮಗಾರಿ ನಂತರ ಹೋಳಿಯ ಸ್ಥಳ ಊರ ಹೊರಗೆ ಸ್ಥಳಾಂತರವಾಯಿತು. ಈ ಪರಿಸ್ಥಿತಿ ಕೆಲವು ವರ್ಷಗಳು ಖಾಯಂ ಆಗಿತ್ತು. ಈಗ ಹೊಸ ಸ್ಥಳದಲ್ಲಿ ಅಂಗನವಾಡಿ ಕಟ್ಟಲಾಗಿದೆ’, ಎಂದು ಹೇಳಿದರು.
೩. ಹಿಂದುಗಳು, ‘ನಾವು ಹೋಳಿ ದಹನದ ಸ್ಥಾನ ಮೇಲಿಂದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ. ಗ್ರಾಮದಲ್ಲಿ ಮಸೀದಿಯ ಹತ್ತಿರ ಹೋಳಿ ದಹನಕ್ಕೆ ಅನುಮತಿ ನೀಡಬೇಕು’, ಈ ಆಗ್ರಹದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿದ್ದು ಸರಕಾರಕ್ಕೆ ಈ ಸಮಸ್ಯೆ ಪರಿಹರಿಸಲು ಮನವಿ ಮಾಡಲಾಯಿತು. ಸಾಂಪ್ರದಾಯಿಕ ಸ್ಥಳದಲ್ಲಿ ಹೋಳಿ ದಹನ ಮಾಡಲು ಅನುಮತಿ ನೀಡದಿದ್ದರೆ ಈ ವರ್ಷ ಹೋಳಿ ಆಚರಣೆ ಮಾಡುವುದಿಲ್ಲ ಮತ್ತು ಅವರು ಅವರ ಮನೆ ಮತ್ತು ಗ್ರಾಮ ಕೂಡ ತೊರೆಯುವರು’, ಎಂದು ಹೇಳಿದ್ದರು.
೪. ಇನ್ನೊಂದು ಕಡೆ ಮುಸಲ್ಮಾನರು ಮಸೀದಿಯ ಎದುರು ಹೋಳಿ ದಹನ ಮಾಡಬಾರದೆಂದು ಹಠ ಹಿಡಿದು ಕುತಿದ್ದರು, ಸರಕಾರವು ಈ ಪ್ರಕರಣದಲ್ಲಿ ಚರ್ಚೆ ನಡೆಸಿದೆ. ಅದರ ನಂತರ ಹಿಂದೂ ಜನರಿಗೆ ಗ್ರಾಮ ಪಂಚಾಯತಿಯ ಜಾಗದಲ್ಲಿ ಹೋಳಿ ಹೊತ್ತಿಸಲು ಅನುಮತಿ ನೀಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಆಂಚಲ ಚೌಹಾನ ಇವರು, ಗ್ರಾಮದಲ್ಲಿ ಹಾಕಿರುವ ಫಲಕಗಳು ಹಿಂದುಗಳು ತೆಗೆದು ಹಾಕಿದ್ದಾರೆ ಮತ್ತು ಪ್ರಸ್ತುತ ಶಾಂತಿಯ ವಾತಾವರಣವಿದೆ’, ಎಂದು ಹೇಳಿದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಹಿಂದುಗಳಿಗೆ ಈ ರೀತಿ ಎಚ್ಚರಿಕೆ ನೀಡುವ ಸಮಯ ಬರಬಾರದು, ಹೀಗೆ ಇತರ ಹಿಂದುಗಳಿಗೆ ಅನಿಸುತ್ತದೆ ! |