ಸಾಧನೆ ಎಂದು ಔಷಧಿ ವನಸ್ಪತಿಗಳ ಕೃಷಿ ಮಾಡಿ

ಸಾಧನೆ ಎಂದು ಔಷಧಿ ವನಸ್ಪತಿ ಗಳ ಕೃಷಿ ಮಾಡುವುದರ ಮಹತ್ವ

ಮನುಷ್ಯನಲ್ಲಿರುವ ಗುಣದೋಷಗಳಿಗೆ ಹೇಗೆ ಸುತ್ತಮುತ್ತಲಿನ ವಾತಾವರಣವೂ ಒಂದು ಕಾರಣ ವಾಗಿರುತ್ತದೆಯೋ, ಹಾಗೆಯೇ ವನಸ್ಪತಿಗಳ ವಿಷಯದಲ್ಲಿಯೂ ಆಗಿದೆ. ಔಷಧಿ ವನಸ್ಪತಿಗಳ ಸುತ್ತಮುತ್ತಲಿನ ವಾತಾವರಣವು ಎಷ್ಟು ಸಾತ್ತ್ವಿಕವಾಗಿರುತ್ತದೆಯೋ ವನಸ್ಪತಿಗಳೂ ಅಷ್ಟೇ ಸಾತ್ತ್ವಿಕವಾಗುತ್ತವೆ. ಎಷ್ಟು ಸತ್ತ್ವಗುಣ ಹೆಚ್ಚೋ, ಅಷ್ಟೇ ಪ್ರಮಾಣದಲ್ಲಿ ವನಸ್ಪತಿಗಳಲ್ಲಿನ ಔಷಧಿ ಗುಣವು ಹೆಚ್ಚಿರುತ್ತದೆ. ಸಾಧನೆಯಿಂದ ಸತ್ತ್ವ ಗುಣ ಹೆಚ್ಚಾಗುತ್ತದೆ. ಔಷಧಿ ವನಸ್ಪತಿಗಳ ಕೃಷಿಯನ್ನು ಕೇವಲ ಹಣ ಸಂಪಾದನೆಯ ಸಾಧನವೆಂದಲ್ಲ, ಈಶ್ವರಪ್ರಾಪ್ತಿಯ ಸಾಧನೆ ಎಂದು ಮಾಡಿದರೆ ವನೌಷಧಿಗಳು ಸಾತ್ತ್ವಿಕವಾಗುತ್ತದೆ.

ವನಸ್ಪತಿಗಳ ಕೃಷಿ ಮಾಡಬೇಕಾದ ಪ್ರಾರ್ಥನೆ ಮತ್ತು ಇಟ್ಟುಕೊಳ್ಳಬೇಕಾದ ಭಾವ

೨ ಅ. ಪ್ರಾರ್ಥನೆ

೧. ವನಸ್ಪತಿಗಳನ್ನು ನೆಡುವ ಮೊದಲು ಭೂಮಾತೆಗೆ ‘ಹೇ ಭೂಮಾತೆ, ನೀನು ಹೇಗೆ ನನಗೆ ಆಧಾರ ನೀಡಿದ್ದೀಯೋ, ಹಾಗೆಯೇ ಈ ವನಸ್ಪತಿಗಳಿಗೂ ಆಧಾರ ನೀಡು. ನೀನು ಇವುಗಳ ಪಾಲನೆ ಪೋಷಣೆ ಮಾಡು ಮತ್ತು ಇವುಗಳಲ್ಲಿ ಯೋಗ್ಯ ಔಷಧಿ ಗುಣಧರ್ಮವನ್ನು ನಿರ್ಮಿಸು !, ಎಂದು ಪ್ರಾರ್ಥನೆ ಮಾಡಬೇಕು.

ಆ. ಔಷಧಿ ವನಸ್ಪತಿಗಳನ್ನು ನೆಡುವಾಗ ಆ ವನಸ್ಪತಿಗಳಿಗೂ ‘ಹೇ ಔಷಧಿ ವನಸ್ಪತಿ, ನಿನ್ನಲ್ಲಿ ಮತ್ತು ನನ್ನಲ್ಲಿ ಸ್ನೇಹಸಂಬಂಧ ನಿರ್ಮಾಣವಾಗಲಿ. ನಿನ್ನಿಂದ ರೋಗಿಗಳ ರೋಗ ದೂರವಾಗಲು ಸಹಾಯವಾಗಲಿ ಎಂದು ಪ್ರಾರ್ಥನೆ ಮಾಡಬೇಕು.

ಇ. ಕೃಷಿಯನ್ನು ಮಾಡುವಾಗ ಕೃಷಿಗಾಗಿ ಉಪಯೋಗಿಸಲಾಗುವ ಗುದ್ದಲಿ, ಬುಟ್ಟಿ ಇತ್ಯಾದಿ ಉಪಕರಣಗಳಿಗೂ ಪ್ರಾರ್ಥನೆ ಮಾಡಬೇಕು.

೨ ಆ. ಭಾವ : ‘ಔಷಧಿ ವನಸ್ಪತಿಗಳ ಕೃಷಿಯಿಂದ ನನಗೆ ದೇವರು ಭೇಟಿಯಾಗುವವನಿದ್ದಾನೆ, ಎಂಬ ಭಾವವನ್ನು ಇಡಬೇಕು. ವನೌಷಧಿಗಳ ಬಗ್ಗೆ ಕೃತಜ್ಞತೆಯ ಭಾವವನ್ನಿಡಬೇಕು.

ಗಿಡಗಳೊಂದಿಗೆ ಹೇಗೆ ವರ್ತಿಸಬೇಕು ?

ಅ. ವನಸ್ಪತಿಯ ಹತ್ತಿರ ಹೋಗುವಾಗ ಆ ವನಸ್ಪತಿಯ ಮಗು ಅಥವಾ ಅದರ ಪಾಲಕನಾಗಿ ಹೋಗಬೇಕು.

೨. ಅಭಿಮಾನ ಅಥವಾ ಗರ್ವವಿದ್ದರೆ ವನಸ್ಪತಿಗಳು ನಿಮ್ಮನ್ನು ಸಮೀಪ ಕರೆದುಕೊಳ್ಳುವುದಿಲ್ಲ.

೩. ಗಿಡಗಳೊಂದಿಗೆ ಪ್ರಾಥಮಿಕ ಸ್ನೇಹ ಬೆಳೆಸಲು ೨ ವರ್ಷಗಳು ತಗಲುತ್ತದೆ.

೪. ಚಿಕ್ಕಂದಿನಿಂದಲೇ ಗಿಡಗಳ ಮೇಲೆ ಸುಸಂಸ್ಕಾರ ಮಾಡಬೇಕಾಗುತ್ತದೆ. – ಪೂ. ಡಾ. ದೀಪಕ ಜೋಶಿ ಹಾಗೂ ಗಣೇಶನಾಥನಜಿ

Kannada Weekly | Offline reading | PDF