ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆ

ವಾಷಿಂಗ್ಟನ್ (ಅಮೇರಿಕಾ) – ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಬಗ್ಗೆ ನಾನು ಗಂಭೀರವಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 51 ನೇ ರಾಜ್ಯವಾಗಿ ಕೆನಡಾ ಉತ್ತಮ ಸ್ಥಾನದಲ್ಲಿರುತ್ತದೆ ಎಂದು ನಾನು ಭಾವಿಸುತ್ತೇನೆ’, ಎಂದು ಟ್ರಂಪ್ ಹೇಳಿದರು. ಏಕೆಂದರೆ ಕೆನಡಾದಿಂದಾಗಿ ಅಮೆರಿಕವು ಪ್ರತಿ ವರ್ಷ 200 ಅಬ್ಜ ಡಾಲರ್ ನಷ್ಟವನ್ನು ಅನುಭವಿಸುತ್ತಿದೆ. ನಾವು ಕೆನಡಾಕ್ಕೆ ಅಬ್ಜ ಡಾಲರ್ ಅನುದಾನಗಳನ್ನು ಏಕೆ ನೀಡುತ್ತಿದ್ದೇವೆ ? ನಾನು ಇನ್ನು ಮುಂದೆ ಇದು ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಅಮೇರಿಕವಿಲ್ಲದೆ ಕೆನಡಾ ಬದುಕಲು ಸಾಧ್ಯವಿಲ್ಲ. ಕೆನಡಾ ಇನ್ನು ಮುಂದೆ ಅಮೆರಿಕದ ರಕ್ಷಣೆಯನ್ನು ಅವಲಂಬಿಸಬಾರದು. ಕೆನಡಾ ತನ್ನ ಮಿಲಿಟರಿಗೆ ಹೆಚ್ಚು ಖರ್ಚು ಮಾಡುತ್ತಿಲ್ಲ. ಏಕೆಂದರೆ ಅಮೆರಿಕ ತನ್ನನ್ನು ರಕ್ಷಿಸುತ್ತದೆ ಎಂದು ಅದು ಭಾವಿಸುತ್ತದೆ; ಆದರೆ ಈಗ ಅದು ಸಾಧ್ಯವಾಗುವುದಿಲ್ಲ. ಇದಕ್ಕೂ ಮೊದಲು ಫೆಬ್ರವರಿ 7 ರಂದು, ಕೆನಡಾದ ನಿಯೋಜಿತ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ವ್ಯಾಪಾರ ಮತ್ತು ಕಾರ್ಮಿಕ ನಾಯಕರೊಂದಿಗೆ ರಹಸ್ಯ ಸಭೆಯಲ್ಲಿ, ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಟ್ರಂಪ್ ಅವರ ಚರ್ಚೆ ಆಗಿರುವುದು ನಿಜ ಎಂದು ಹೇಳಿದ್ದರು. ಅವರು ಕೆನಡಾವನ್ನು ಅಮೆರಿಕಾಗೆ ವಿಲೀನಗೊಳಿಸುವ ತಮ್ಮ ಯೋಜನೆಯ ಬಗ್ಗೆ ಗಂಭೀರವಾಗಿದ್ದಾರೆ. ಟ್ರಂಪ್ ಕೆನಡಾದ ನೈಸರ್ಗಿಕ ಸಂಪನ್ಮೂಲಗಳನ್ನು ಬಯಸುತ್ತಾರೆ ಮತ್ತು ಅದಕ್ಕಾಗಿ ನಮ್ಮನ್ನು ತಮ್ಮ ದೇಶಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ.