Adiguru Shankaracharya : ಮಧ್ಯಪ್ರದೇಶ ಸರಕಾರದ ಏಕಾತ್ಮ ಧಾಮ ಶಿಬಿರದಲ್ಲಿ ಆದಿಗುರು ಶಂಕರಾಚಾರ್ಯರ ಜೀವನ ಚರಿತ್ರೆಯ ಅದ್ಭುತ ಪ್ರದರ್ಶನ !

ಪ್ರಯಾಗರಾಜ, ಫೆಬ್ರವರಿ 10 (ಸುದ್ದಿ) – ಮಧ್ಯಪ್ರದೇಶ ಸರಕಾರವು ಕುಂಭ ಕ್ಷೇತ್ರದ 3 ಎಕರೆ ಪ್ರದೇಶದಲ್ಲಿ ಆದಿಗುರು ಶಂಕರಾಚಾರ್ಯರ ಸಂಪೂರ್ಣ ಜೀವನ ಚರಿತ್ರೆಯನ್ನು ಬಹಿರಂಗಪಡಿಸುವ ಪ್ರದರ್ಶನವನ್ನು ಸ್ಥಾಪಿಸಿದೆ. ಈ ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಆದಿಗುರು ಶಂಕರಾಚಾರ್ಯರು ನಡೆಸಿದ ಸನಾತನ ಧರ್ಮದ ಪುನರುಜ್ಜೀವನದ ಕಾರ್ಯವನ್ನು ಪರಿಚಯವಾಗುತ್ತದೆ.

ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ಆದಿಗುರು ಶಂಕರಾಚಾರ್ಯರು ತಮ್ಮ ಗುರುಗಳನ್ನು ಭೇಟಿಯಾದರೋ ಅಲ್ಲಿ ಮಧ್ಯಪ್ರದೇಶ ಸರಕಾರವು ಆದಿಗುರು ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಬಹಿರಂಗಪಡಿಸುವ ಭವ್ಯ ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತಿದೆ. ಓಂಕಾರೇಶ್ವರದಲ್ಲಿರುವ ಆದಿಗುರು ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕುಂಭ ಕ್ಷೇತ್ರದಲ್ಲಿ ಓಂಕಾರೇಶ್ವರದ ಏಕಾತ್ಮ ಧಾಮ ವಸ್ತುಸಂಗ್ರಹಾಲಯದ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ. ಮಹಾಕುಂಭ ಕ್ಷೇತ್ರದಲ್ಲಿ ಸ್ಥಾಪಿಸಲಾದ ಈ ಶಿಬಿರದ ಪ್ರವೇಶದ್ವಾರದಲ್ಲಿಯೂ ಆದಿಗುರು ಶಂಕರಾಚಾರ್ಯರ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಈ ಪ್ರತಿಮೆ ಕಣ್ಮನ ಸೆಳೆಯುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರು ಈ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಈ ಶಿಬಿರದಲ್ಲಿ ಯಜ್ಞಶಾಲೆಯನ್ನು ನಿರ್ಮಿಸಲಾಗಿದೆ ಮತ್ತು ವೇದ ಪಾಠಶಾಲೆಯ ಪುರೋಹಿತರು ಇಲ್ಲಿ ನಿಯಮಿತವಾಗಿ ಹೋಮ ಹವನವನ್ನು ಮಾಡುತ್ತಿದ್ದಾರೆ. ಇಲ್ಲಿ ಆದಿಗುರು ಶಂಕರಾಚಾರ್ಯರ ಕುರಿತಾದ ಗ್ರಂಥ ಪ್ರದರ್ಶನವೂ ಇದೆ.