Alcohol Consumption Kumbh Mela : ಮಹಾಕುಂಭಮೇಳದಲ್ಲಿ ಬಹಿರಂಗವಾಗಿ ಮದ್ಯಪಾನ, ಭಕ್ತರ ಆಕ್ರೋಶ ಆದರೆ ಪೊಲೀಸರ ನಿರ್ಲಕ್ಷ್ಯ

ಪೊಲೀಸರು ಮೂಕ ವೀಕ್ಷಕ

ಪ್ರಯಾಗರಾಜ, ಫೆಬ್ರುವರಿ ೧೦ (ವಾರ್ತೆ) – ಯಾವ ಮಾರ್ಗದಿಂದ ಭಕ್ತರು ಮಹಾಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಾರೆ, ಆ ಮಾರ್ಗದಲ್ಲಿ ಅಂದರೆ ಝುನ್ಸಿ ಮಾರ್ಗದಲ್ಲಿ ಅಡ್ಡೆ ಮಾಡಿಕೊಂಡು ಹಾಡು ಹಗಲೇ ಕುಡುಕರು ಮದ್ಯಪಾನ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಸ್ಥಳದಲ್ಲಿ ಪೊಲೀಸರು ಇದ್ದರೂ ಅವರು ಇದನ್ನು ನಿರ್ಲಕ್ಷಿಸುತ್ತಿದ್ದಾರೆ. ರೈಲಿನಿಂದ ಬರುವ ಭಕ್ತರು ಝುನ್ಸಿಯಿಂದ ಮಹಾಕುಂಭ ಮೇಳಕ್ಕೆ ಪ್ರವೇಶಿಸುತ್ತಾರೆ. ಈ ಮಾರ್ಗದಲ್ಲಿ ಕೆಲವು ಮದ್ಯದ ಅಂಗಡಿಗಳಿವೆ; ಆದರೆ ಅವರಿಗೆ ಅಲ್ಲಿ ಕುಳಿತು ಮದ್ಯ ಕುಡಿಯಲು ಪರ್ಮಿಟ್ ರೂಮಿನ ಅನುಮತಿ ಇಲ್ಲ. ಈ ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿಸುವ ಕುಡುಕರು ಕುಂಭ ಕ್ಷೇತ್ರಕ್ಕೆ ಹೋಗುವ ಭಕ್ತರ ಎದುರು ಮದ್ಯಪಾನ ಮಾಡುತ್ತಿದ್ದಾರೆ. ರಸ್ತೆಯ ಮೂಲೆಯಲ್ಲಿ, ರಸ್ತೆಗೆ ಅಂಟಿಕೊಂಡಿರುವ ಉದ್ಯಾನಗಳಲ್ಲಿ ಒಟ್ಟಾಗಿ ಕುಳಿತು ಪೊಲೀಸರನ್ನು ಲೆಕ್ಕಿಸದೆ ಕುಡುಕರು ನಿರ್ಭಯದಿಂದ ಮದ್ಯಪಾನ ಮಾಡುತ್ತಿದ್ದಾರೆ. ‘ಪೊಲೀಸರು ಮತ್ತು ಆಡಳಿತ ಗಮನ ಹರಿಸಿ ಇಂಥ ಕೆಟ್ಟ ವರ್ತನೆ ತಡೆಯಬೇಕೆಂದು ಭಕ್ತರಿಂದ ಆಗ್ರಹಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಪೊಲೀಸರ ಎದುರಿನಲ್ಲಿಯೇ ಹೀಗೆ ನಡೆಯುತ್ತಿದ್ದರೆ ಭ್ರಷ್ಟಾಚಾರ ನಡೆಸಿ ಪೊಲೀಸರು ಇದಕ್ಕೆ ಅನುಮತಿ ನೀಡಿದ್ದಾರೆ, ಎಂದು ತಿಳಿಯಬೇಕೆ ?