ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಸರಕಾರಿಮಾನ್ಯತೆ ನೀಡಿ ‘ಯುಜಿಸಿ’ಯು ಅದಕ್ಕೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಬೇಕು !

ಮಹಾಕುಂಭಕ್ಷೇತ್ರದಲ್ಲಿನ ಪ್ರದರ್ಶನಿಗೆ ಭೇಟಿ ನೀಡಿರುವ ವಾರಾಣಸಿಯ ಫ್ಯಾಕಲ್ಟಿ ಆಫ್ ಆಯುರ್ವೇದ, ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ. ಕೆ.ಕೆ. ಸಿಂಹರವರ ಅಭಿಪ್ರಾಯ

ಡಾ. ಕೆ. ಕೆ. ಸಿಂಹ, ಫ್ಯಾಕಲ್ಟಿ ಆಫ್ ಆಯುರ್ವೇದ, ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ವಾರಾಣಸಿ

ಪ್ರಯಾಗರಾಜ, ಫೆಬ್ರುವರಿ ೯ (ವಾರ್ತೆ) – ಮಹಾಕುಂಭಕ್ಷೇತ್ರಕ್ಕೆ ಬಂದ ನಂತರ ನಾನು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಕ್ಷೆಯನ್ನು ಭೇಟಿ ಮಾಡಿದೆನು. ಅವರ ಪ್ರತಿನಿಧಿಗಳೊಂದಿಗೆ ಮಾತನಾಡಿದೆನು. ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯವು `ಒಬ್ಬ ಸಾಮಾನ್ಯ ವ್ಯಕ್ತಿಯು ಆಧ್ಯಾತ್ಮದಲ್ಲಿ ಹೇಗೆ ಮುಂದೆ ಹೋಗಬೇಕು’ ಎಂಬುದನ್ನು ಬಹಳ ಸುಲಭವಾಗಿ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ನನಗೆ ಬಹಳ ಸಕಾರಾತ್ಮಕತೆಯ ಅನುಭವವಾಯಿತು. ಆಧ್ಯಾತ್ಮದ ಬಗ್ಗೆ ಯಾವುದೋ ಮಾಹಿತಿ ಪಡೆದು, ಅದರ ಅನುಸಾರ ವ್ಯಕ್ತಿಯು ಸಾಧನೆ ಮಾಡುತ್ತಾನೆ; ಆದರೆ ಒಂದು ವಿಶ್ವವಿದ್ಯಾಲಯದಿಂದ ಸಾಧನೆಗಾಗಿ ಮಾರ್ಗದರ್ಶನ ದೊರೆತರೆ ಸಾಧನೆಯಲ್ಲಿ ಯೋಗ್ಯ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡಬಹುದು. ಇಂತಹ ವಿಶ್ವವಿದ್ಯಾಲಯ ಇದೆ, ಇದು ನನಗಾಗಿ ಬಹಳ ಆನಂದದ ಸಂಗತಿಯಾಗಿದೆ. ನಾನು ಸರಕಾರಕ್ಕೆ ವಿನಂತಿಸುವುದೇನೆಂದರೆ, ಈ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಬೇಕು ಮತ್ತು ‘ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್’ (ಯುಜಿಸಿ ಹಾಗೂ ವಿದ್ಯಾಪೀಠ ಅನುದಾನ ಆಯೋಗ) ಕೂಡ ವಿಶ್ವವಿದ್ಯಾಲಯಕ್ಕೆ ಸಹಾಯ ಮಾಡಬೇಕು. ಇದರಿಂದ ಯುವ ವರ್ಗಕ್ಕೆ ಯೋಗ್ಯ ದಿಶೆ ದೊರೆಯುವುದು ಮತ್ತು ಆಧ್ಯಾತ್ಮದ, ಆಧ್ಯಾತ್ಮಿಕ ಚೇತನದ ವಿಸ್ತಾರವಾಗುವುದು ಎಂದು, ಡಾ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಆಯುರ್ವೇದ ವಿಷಯದ ಪ್ರಾಧ್ಯಾಪಕರಾದ ಡಾ. ಕೆ. ಕೆ. ಸಿಂಹರವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪ್ರಯಾಗರಾಜದಲ್ಲಿನ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ ಪ್ರಯಾಗರಾಜ್ ಇಲ್ಲಿಯ ಮಹಾಕುಂಭ ಕ್ಷೇತ್ರದಲ್ಲಿ ತೆರೆದಿರುವ ಪ್ರದರ್ಶನಿಗೆ ಭೇಟಿ ನೀಡಿದ ನಂತರ ತಮ್ಮ ಅಭಿಪ್ರಾಯ ಮಂಡಿಸಿದರು.

ಯುಜಿಸಿ ಎಂದರೆ ಏನು ?

ಯುಜಿಸಿ ಎಂದರೆ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಹಾಗೂ ವಿದ್ಯಾಪೀಠ ಅನುದಾನ ಆಯೋಗ. ಭಾರತ ಸರಕಾರದ ಶೈಕ್ಷಣಿಕ ಸಚಿವಾಲಯದ ಅನ್ವಯ ಈ ಆಯೋಗವು ಕಾರ್ಯನಿರ್ವಹಿಸುತ್ತದೆ. ಉನ್ನತ ಶಿಕ್ಷಣದ ಮಟ್ಟವನ್ನು ಸುಧಾರಿಸುವ ಹಾಗೂ ಗುಣಮಟ್ಟ ಕಾಪಾಡುವ ಕಾರ್ಯವನ್ನು ಈ ಆಯೋಗ ಮಾಡುತ್ತದೆ.