ಪ್ರಯಾಗರಾಜ (ಉತ್ತರಪ್ರದೇಶ) , ಫೆಬ್ರುವರಿ ೯(ವಾರ್ತೆ) – ಮಹಾಕುಂಭ ಕ್ಷೇತ್ರದಲ್ಲಿ ಫೆಬ್ರುವರಿ ೯ ರಂದು ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ನಗರದಲ್ಲಿನ ವಿವಿಧ ಮಾರ್ಗದಲ್ಲಿ ೧೦ ರಿಂದ ೧೫ ಕಿಲೋಮೀಟರವರೆಗೆ ಸಾರಿಗೆ ದಟ್ಟಣೆ ನಿರ್ಮಾಣವಾಯಿತು. ಲಕ್ಷ್ಮಣಪುರಿ, ವಾರಾಣಸಿ, ಕಾನಪುರ ಮತ್ತು ರೀವಾ ಇಲ್ಲಿಂದ ಪ್ರಯಾಗರಾಜಕ್ಕೆ ಬರುವ ಮಾರ್ಗದಲ್ಲಿ ವಾಹನಗಳ ಉದ್ದುದ್ದ ಸಾಲುಗಳು ನಿಂತಿದ್ದವು. ಈ ಸ್ಥಿತಿ ಕಳೆದ ೪ ರಿಂದ ೫ ದಿನದಿಂದ ಇದೆ. ವಾಹನಗಳಿಗೆ ಕುಂಭ ಕ್ಷೇತ್ರದಲ್ಲಿ ಪ್ರವೇಶ ನಿಷೇಧಿಸಿರುವುದರಿಂದ ಅನೇಕ ವಾಹನ ಮಾಲೀಕರು ರಸ್ತೆಯಲ್ಲಿ ವಾಹನಗಳನ್ನು ಬಿಟ್ಟು ಸಂಗಮ ತಟಕ್ಕೆ ನಡೆದುಕೊಂಡು ಹೋಗಿ ಸ್ನಾನ ಮಾಡುತ್ತಿದ್ದಾರೆ.
೧. ಸಾರಿಗೆ ದಟ್ಟಣೆಯಿಂದ ಅನೇಕ ವಾಹನ ಮಾಲೀಕರು ಮತ್ತು ಭಕ್ತರು ಅನೇಕ ಘಂಟೆಗಳಿಂದ ಕಾದು ನಿಲ್ಲಬೇಕಾಗಿದೆ. ಸಾರಿಗೆ ದಟ್ಟಣೆ ಪರಿಹರಿಸಲು ಸರಕಾರದ ಪರೀಕ್ಷೆ ಆಗುತ್ತಿದೆ.
೨. ಭಕ್ತರ ಗದ್ದಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗದ್ದಲ ನಿಯಂತ್ರಿಸಲು ಪ್ರಯಾಗರಾಜ ರೈಲು ನಿಲ್ದಾಣದಲ್ಲಿ ಆಪತ್ಕಾಲಿನ ವ್ಯವಸ್ಥಾಪನ ಯೋಜನೆ ಜಾರಿ ಮಾಡಲಾಗಿದೆ.
೩. ಬಸ್ ಚಾಲಕರ ಹಿಡಿತ ತಪ್ಪುವುದರಿಂದ ಪ್ರಯಾಗರಾಜದಿಂದ ಮಧ್ಯಪ್ರದೇಶ ಕಡೆಗೆ ಹೋಗುವ ಬಸ್ಸು ಪಲ್ಟಿ ಹೊಡೆದಿದ್ದು ೧೨ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಗದ್ದಲ ನೋಡಿ ಸರಕಾರದಿಂದ ಸಾರಿಗೆ ವ್ಯವಸ್ಥೆಯ ಮಾರ್ಗ ಬೇರೆ ದಿಕ್ಕಿನತ್ತ ಹೊರಳಿಸಿದ್ದಾರೆ.
೪. ಪ್ರಯಾಗರಾಜನಲ್ಲಿ ಹೆಚ್ಚಿನ ಅವಧಿಗಾಗಿ ನಿಲ್ಲದೆ ಸಂಗಮ ಸ್ನಾನ ಆದ ನಂತರ ಭಕ್ತರು ತಕ್ಷಣ ಹೊರಡಬೇಕೆಂದು ಸರಕಾರ ಸೂಚನೆ ನೀಡುತ್ತಿದೆ.