
ಪ್ರಯಾಗರಾಜ, ಫೆಬ್ರವರಿ 9 (ಸುದ್ದಿ) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಸಮಿತಿಯ ಧರ್ಮ ಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ಮಲುಕ ಪೀಠದ ಶ್ರೀ ರಾಜೇಂದ್ರ ದಾಸ ಮಹಾರಾಜರನ್ನು ಭೇಟಿಯಾಗಿ ಸನ್ಮಾನಿಸಿದರು. ಈ ಮಂಗಲಮಯ ಸಂದರ್ಭದಲ್ಲಿ ಸಮಿತಿಯು ಮಾಡುತ್ತಿರುವ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕುಂಭ ಕ್ಷೇತ್ರದಲ್ಲಿರುವ ಸಮಿತಿಯ ಕಕ್ಷೆಗೆ ಬರಲು ಅವರನ್ನು ಆಹ್ವಾನಿಸಲಾಯಿತು.