ಕುಶಿನಗರ (ಉತ್ತರ ಪ್ರದೇಶ) : ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದನಿ ಮಸೀದಿಯ ಮೇಲೆ ಬುಲ್ಡೋಜರ್ !

ಕುಶಿನಗರ (ಉತ್ತರ ಪ್ರದೇಶ) – ಇಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದನಿ ಮಸೀದಿಯನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು. ಈ ಮಸೀದಿಯನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ದೂರು ದಾಖಲಾದ ನಂತರ, ತನಿಖೆ ನಡೆಸಲಾಯಿತು. ಇದಾದ ನಂತರ, ಮಸೀದಿ ಪಕ್ಷದವರು 3 ನೋಟೀಸುಗಳಿಗೂ ಉತ್ತರ ನೀಡಲಿಲ್ಲ. ಇದಾದ ನಂತರ, ಮುಸ್ಲಿಂ ಪಕ್ಷಗಳು ಫೆಬ್ರವರಿ 8 ರವರೆಗೆ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ಪಡೆದು ಬುಲ್ಡೋಜರ್ ಕ್ರಮವನ್ನು ನಿಲ್ಲಿಸಿದ್ದವು; ಆದರೆ, ಫೆಬ್ರವರಿ 9 ರಂದು ತಡೆಯಾಜ್ಞೆಯ ದಿನಾಂಕ ಮುಗಿದ ನಂತರ, ಆಡಳಿತವು ಬುಲ್ಡೋಜರ್‍‌ಗಳನ್ನು ಬಳಸಿ ಕ್ರಮ ಕೈಗೊಂಡು ಮಸೀದಿಯನ್ನು ಕೆಡವಿತು.

ಈ ಬಗ್ಗೆ ಹಿಂದೂ ನಾಯಕ ರಾಮ ಬಚನ ಸಿಂಗ್ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಂತರ, ಮುಖ್ಯಮಂತ್ರಿಗಳು ಆಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.

ಈ ಮಸೀದಿಯನ್ನು ಪೊಲೀಸ್ ಠಾಣೆ ಮತ್ತು ನಗರಪಾಲಿಕೆಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು. (ಪೊಲೀಸ್ ಠಾಣೆ ಮತ್ತು ನಗರಪಾಲಿಕೆಯ ಜಾಗದಲ್ಲಿ ಮಸೀದಿ ನಿರ್ಮಿಸುವಾಗ ಪೊಲೀಸರು ಮತ್ತು ಆಡಳಿತವು ನಿದ್ರಿಸುತ್ತಿತ್ತೇ ? ವಿಶೇಷವೆಂದರೆ, ಹಿಂದೂ ನಾಯಕು ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ದೂರು ದಾಖಲಿಸದಿದ್ದರೆ, ಪೊಲೀಸರು ಮತ್ತು ಆಡಳಿತ ಇನ್ನೂ ನಿದ್ರಿಸುತ್ತಿತ್ತು. ಇದರಿಂದ ರಾಜ್ಯ ಮತ್ತು ದೇಶದಲ್ಲಿ ಇಂತಹ ಎಷ್ಟು ಅಕ್ರಮ ನಿರ್ಮಾಣಗಳು ತಲೆಯೆತ್ತಿವೆ, ಈಗ ಅದನ್ನು ಕಂಡುಹಿಡಿದು ಕ್ರಮ ಕೈಗೊಳ್ಳಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಮಸೀದಿ ಕಟ್ಟುವವರೆಗೂ ಆಡಳಿತ ನಿದ್ರಿಸುತ್ತಿತ್ತೇ?