ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ – ಮಹಾಕುಂಭ ಕ್ಷೇತ್ರದ ಸೆಕ್ಟರ್ 7 ರಲ್ಲಿ ಹಾಕಲಾದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಭಕ್ತರಿಂದ ಭಾರಿ ಪ್ರತಿಸ್ಪಂದನೆ ದೊರೆಯುತ್ತಿದೆ. ವೈಜ್ಞಾನಿಕ ಸಂಶೋಧನೆಯ ಮೂಲಕ ಹಿಂದೂ ಧರ್ಮಶಾಸ್ತ್ರಗಳಲ್ಲಿ ಹೇಳಿರುವ ದೈನಂದಿನ ಆಚರಣೆಗಳಿಂದ ಹೇಗೆ ಲಾಭವಾಗುತ್ತದೆಯೆಂದು ನೋಡಿದ ನಂತರ, ಕಕ್ಷೆಗೆ ಭೇಟಿ ನೀಡುವ ಭಕ್ತರಲ್ಲಿ ಉತ್ಸಾಹ ಮತ್ತು ಭಗವಂತನ ಬಗ್ಗೆ ಇರುವ ಭಾವ ಹೆಚ್ಚಾಗುತ್ತಿದೆ. ಅನೇಕ ಜನರು ಕಕ್ಷೆಯನ್ನು ನೋಡಿದ ನಂತರ ಭಾವೋದ್ವೇಗರಾಗಿ, ಸ್ಫೂರ್ತಿ ಪಡೆದು, ತಮ್ಮ ಮನೋಗತವನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಕ್ಷೇತ್ರಗಳಿಂದ ಬಂದಿರುವ ಗಣ್ಯರು ಕಕ್ಷೆಗೆ ಭೇಟಿ ನೀಡಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಫೆಬ್ರವರಿ 4 ರ ತನಕ 8 ಸಾವಿರಕ್ಕೂ ಹೆಚ್ಚು ಭಕ್ತರು ಕಕ್ಷೆಗೆ ಭೇಟಿ ನೀಡಿದ್ದಾರೆ. ಈ ಪ್ರದರ್ಶನ ಕಕ್ಷೆಯು ಫೆಬ್ರವರಿ 15 ರವರೆಗೆ ಸೆಕ್ಟರ್ 7 ರಲ್ಲಿರುವ ‘ಕಲಾಕುಂಭ’ದ ಎದುರು ನಡೆಯುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಂತಹ ಮಹರ್ಷಿಗಳು ಭೂಮಿಯ ಮೇಲೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ! – ಮಂಗಲಮಣಿ ತ್ರಿಪಾಠಿ, ನಿವೃತ್ತ ಪ್ರಾಂಶುಪಾಲರು, ಕೃಷಕ ಮಾಧ್ಯಮಿಕ ಕಾಲೇಜು, ದೆವರಿಯಾ, ಉತ್ತರ ಪ್ರದೇಶ

ಮಹಾಕುಂಭದಲ್ಲಿ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನಕ್ಕೆ ಬಂದ ನಂತರ ನಾನು ಭಾವುಕನಾದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರು ಇಂತಹ ದೊಡ್ಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವವಿದ್ಯಾಲಯದಿಂದ ಜನರಿಗೆ ಸಾಕಷ್ಟು ಲಾಭವಾಗುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತಹ ಮಹರ್ಷಿಗಳು ಭೂಮಿಯ ಮೇಲೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ಸ್ವಾಮಿ ವಿವೇಕಾನಂದರ ಛಾಯಾಚಿತ್ರದಿಂದ ಯಾವ ರೀತಿ ತೇಜ ಹೊರಹೊಮ್ಮುತ್ತದೋ, ಅದೇ ರೀತಿ, ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಛಾಯಾಚಿತ್ರವನ್ನು ನೋಡಿದ ನಂತರ, ಅದರಿಂದ ತೇಜ ಮತ್ತು ಬೆಳಕು ಹೊರಹೊಮ್ಮುತ್ತಿದೆ ಎಂದು ನನಗೆ ಅರಿವಾಯಿತು. ಅಂತಹ ಮಹಾನ ಗುರುದೇವರ ಚರಣಗಳಿಗೆ ನಾನು ಕೃತಜ್ಞನಾಗಿದ್ದೇನೆ.
ಪ್ರದೇಶದ ಪರಿಸರವನ್ನು ಹೇಗೆ ಶುದ್ಧೀಕರಿಸುವುದು ಎಂಬುದರ ಪ್ರದರ್ಶನ ನೋಡಿ ಅರ್ಥವಾಯಿತು ! – ಡಾ. ನಿಶಿ ಗುಪ್ತಾ, ಹಿರಿಯ ಸ್ತ್ರೀರೋಗ ಸಲಹೆಗಾರರು, ಜಯಪುರ, ರಾಜಸ್ಥಾನ

ಕಕ್ಷೆಗೆ ಬರುವ ಮೊದಲು, ನಾನು ಇಲ್ಲಿ ನನಗೆ ಏನು ಸಿಗುತ್ತದೆ? ಎಂದು ಯೋಚಿಸುತ್ತಿದ್ದೆ, ಆದರೆ ಕಕ್ಷೆಯನ್ನು ಪ್ರವೇಶಿಸಿದ ನಂತರ, ನಾನು ಎಲ್ಲಾ ಫಲಕಗಳನ್ನು ನೋಡಿ ಮಾಹಿತಿಯನ್ನು ಪಡೆದುಕೊಂಡೆ. ದೈನಂದಿನ ಜೀವನದಲ್ಲಿನ ಸಣ್ಣ ಕೃತಿಗಳ ಮೂಲಕ ಅವರು ನಮ್ಮ ಸುತ್ತಲಿನ ನಕಾರಾತ್ಮಕತೆಯನ್ನು ನಾವು ಹೇಗೆ ಕಡಿಮೆ ಮಾಡಬಹುದು, ಹಾಗೆಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸಲು ನಾವು ಯಾವ ಪ್ರಯತ್ನಗಳನ್ನು ಮಾಡಬಹುದು ಎಂಬುದನ್ನು ಅವರು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನಡೆಸುತ್ತಿರುವ 5 ದಿನಗಳ ಆಧ್ಯಾತ್ಮಿಕ ಶಿಬಿರದಲ್ಲಿ ನಾನು ಖಂಡಿತವಾಗಿಯೂ ಭಾಗವಹಿಸುತ್ತೇನೆ’, ಎಂದು ಹೇಳಿದರು.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನವನ್ನು ನೋಡಿದ ನಂತರ, ನನ್ನಲ್ಲಿ ಸಕಾರಾತ್ಮಕತೆ ಸಂಚಾರವಾಯಿತು ! – ಹರ್ಷದ ಶರ್ಮಾ, ಕಥಾವಾಚಕ, ವೃಂದಾವನ

ಮಹಾಕುಂಭ ಕ್ಷೇತ್ರದಲ್ಲಿ ಸ್ಥಾಪಿಸಲಾದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನವನ್ನು ಭೇಟಿ ನೀಡಿದ ನಂತರ, ನನ್ನೊಳಗೆ ಸಕಾರಾತ್ಮಕ ಸಂಚಾರವಾಯಿತು, ಎಂಬ ಅನುಭೂತಿ ಬಂತು. ಈ ಪ್ರದರ್ಶನ ಕಕ್ಷೆಯಲ್ಲಿ ತೋರಿಸುವ ವೀಡಿಯೊದಿಂದ, ಸ್ಥಳೀಯ ಹಸು ಹೊರಸೂಸುವ ಸಕಾರಾತ್ಮಕತೆಯ ಪ್ರಭಾವಲಯ ಸುಮಾರು 8 ರಿಂದ 10 ಮೀಟರ್ ಎಷ್ಟು ಇರುತ್ತದೆ, ಎಂದು ನನ್ನ ಗಮನಕ್ಕೆ ಬಂದಿತು. ಹಾಗಾದರೆ, ಮನೆಯೊಳಗೆ ಹಸುವನ್ನು ಕರೆತರುವುದರಿಂದ ಇಡೀ ಮನೆಯು ಸಕಾರಾತ್ಮಕತೆ ಬರುತ್ತದೆ’, ಎಂದು ಹೇಳಿದರು.