ಎಲ್ಲರೂ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿಗೆ ಭೇಟಿ ನೀಡಿ ಜಾಗೃತವಾಗಬೇಕು ! – ಆಚಾರ್ಯ ಮಹಾಮಂಡಲೇಶ್ವರ ಜಾಗೃತ ಚೇತನಾಗಿರ

ಪ್ರಯಾಗರಾಜ ಕುಂಭಮೇಳ 2025

ಆಚಾರ್ಯ ಮಹಾಮಂಡಲೇಶ್ವರ ಜಾಗೃತ ಚೇತನಾಗಿರಿ, ಮಾತೃಶಕ್ತಿ ಅಖಾಡಾ ಇವರಿಂದ ಕುಂಭ ಕ್ಷೇತ್ರದಲ್ಲಿ ಹೇಳಿಕೆ

ಆಚಾರ್ಯ ಮಹಾಮಂಡಲೇಶ್ವರ ಜಾಗೃತಚೇತನಾಗಿರಿ, ಮಾತೃಶಕ್ತಿ ಅಖಾಡಾ

ಪ್ರಯಾಗರಾಜ – ಹಿಂದೂ ಜನಜಾಗೃತಿ ಸಮಿತಿ ಬಹಳ ದೊಡ್ಡ ಸಂಕಲ್ಪದೊಂದಿಗೆ ಕಾರ್ಯ ಮಾಡುತ್ತಿದೆ. ಎಲ್ಲಾ ಹಿಂದುಗಳು ಮಹಾಕುಂಭದಲ್ಲಿನ ಸಮಿತಿಯ ಪ್ರದರ್ಶನಕ್ಕೆ ಭೇಟಿ ನೀಡಿ ಜಾಗೃತರಾಗ ಬೇಕು, ಎಂದು ಮಾತೃ ಶಕ್ತಿ ಆಖಾಡಾದ ಆಚಾರ್ಯ ಮಹಾಮಂಡಲೇಶ್ವರ ಜಾಗೃತಚೇತನಾ ಗಿರಿ ಇವರು ಹೇಳಿಕೆ ನೀಡಿದರು. ಪ್ರಯಾಗರಾಜ ಮಹಾಕುಂಭದಲ್ಲಿ ಸೆಕ್ಟರ್ ೬ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಾಕಿರುವ ಪ್ರದರ್ಶನಕ್ಕೆ ಅವರು ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಸಮಿತಿ ನಿರಪೇಕ್ಷವಾಗಿ ಹಿಂದುತ್ವದ ಕಾರ್ಯ ಮಾಡುತ್ತಿದೆ. ಸಮಿತಿ ಮಾಡುತ್ತಿರುವ ಕಾರ್ಯದ ವಿವಿಧ ಅಂಶಗಳು ತಿಳಿದುಕೊಂಡ ನಂತರ, ಸಮಿತಿ ಸಂಪೂರ್ಣ ಸನಾತನ ಸಂಸ್ಕೃತಿಯ ಆಚರಣೆ ಮಾಡಿ ಕಾರ್ಯ ಮಾಡುತ್ತಿದೆ’, ಎಂದು ಗಮನಕ್ಕೆ ಬರುತ್ತದೆ.

ಮಹಾಕುಂಭದಲ್ಲಿ ಸಮಿತಿಯು ಹಾಕಿರುವ ಹಿಂದೂ ರಾಷ್ಟ್ರದ ಫಲಕಗಳು ತೆಗೆದು ಹಾಕಿರುವುದು ತಪ್ಪು !

ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿರುವ ಅಧಿವೇಶನದ ಅವಧಿಯಲ್ಲಿ ಮಹಾಕುಂಭದಲ್ಲಿ ಹಿಂದೂ ರಾಷ್ಟ್ರದ ಫಲಕ ಹಾಕಿತ್ತು. ಪೊಲೀಸರು ಅದನ್ನು ಏಕೆ ತೆಗೆದರು, ಇದರ ನಿಜವಾದ ಕಾರಣ ಬೆಳಕಿಗೆ ಬರಬೇಕು. ಇದು ಸನಾತನ ಧರ್ಮದ ವ್ಯವಸ್ಥೆಯ ಮಹಾಕುಂಭವಾಗಿದೆ. ಸನಾತನದ ವ್ಯವಸ್ಥೆ ಇದು ಎಲ್ಲರಹಿತಕ್ಕಾಗಿದ್ದು ಅದಕ್ಕಾಗಿ ಎಲ್ಲೆಡೆಯ ಹಿಂದೂ ರಾಷ್ಟ್ರದ ಬೇಡಿಕೆ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸರಿಂದ ಈ ರೀತಿಯ ಕೃತಿ ಅಪೇಕ್ಷಿತವಿರಲಿಲ್ಲ, ಎಂದು ಮಹಾಮಂಡಲೇಶ್ವರ ಜಾಗೃತ ಚೇತನಾಗಿರಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.