ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ, ಫೆಬ್ರುವರಿ ೯ (ಸುದ್ಧಿ) – ಹಿಂದೂ ಜನಜಾಗೃತಿ ಸಮಿತಿಯು ಇಲ್ಲಿಯ ಸೆಕ್ಟರ್ ೬ ರಲ್ಲಿ ಪ್ರದರ್ಶನ ಕಕ್ಷೆಯನ್ನು ಹಾಕಿದೆ. ಈ ಕಕ್ಷೆಗೆ ಭೇಟಿ ನೀಡಲು ಅನೇಕ ಸಂತ ಮಹಂತರಿಗೆ ಸಮಿತಿಯಿಂದ ಆಮಂತ್ರಣ ನೀಡುತ್ತಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀರಾಮ ಕಾಣೆ ಮತ್ತು ಶ್ರೀ. ಸತೀಶ ಸೋನಾರ್ ಇವರು ಫತೆಪುರ್ ಇಲ್ಲಿಯ ಸಿದ್ದಾಶ್ರಮ ಸೇವಾ ಸಂಸ್ಥೆಯ ಸ್ವಾಮಿ ಪರಮ ಚೈತನ್ಯ ಬ್ರಹ್ಮಚಾರಿ ಮಹಾರಾಜ, ಭದೋಹಿ (ಉತ್ತರ ಪ್ರದೇಶ) ಇಲ್ಲಿಯ ಬಡೆ ಶಿವಧಾಮ ಗೋಪಿಗಂಜದ ಯೋಗಿ ಸೀತಾರಾಮಜಿ ಮಹಾರಾಜ, ಕರಪಾತ್ರಿ ಶಕ್ತಿಪೀಠ ಮಹಾಮನಪುರಿಯ ಪೀಠಾಧೀಶ್ವರ ಡಾ. ಆನಂದ ಚೈತನ್ಯ ಬ್ರಹ್ಮಚಾರಿಜಿ ದಯಾಲುಜಿ ಮಹಾರಾಜ, ನಂಬರ್ಕಾಚಾರ್ಯ ಪೀಠದ ಶ್ರೀ ಅಮೇಂದ್ರಕೃಷ್ಣ ಗೋಸ್ವಾಮಿ ಇವರನ್ನು ಭೇಟಿ ಮಾಡಿ ಸಮಿತಿಯ ಪ್ರದರ್ಶನಕ್ಕೆ ಭೇಟಿ ನೀಡಲು ಆಮಂತ್ರಣ ನೀಡಿದರು.

ಆ ಸಮಯದಲ್ಲಿ ಎಲ್ಲಾ ಸಂತ ಮಹಂತರು ‘ನಾವು ಪ್ರದರ್ಶನ ನೋಡಲು ಖಂಡಿತವಾಗಿ ಬರುವೆವು’, ಎಂದು ಹೇಳಿದರು.