ಪ್ರಯಾಗರಾಜ ಕುಂಭಮೇಳ 2025
ಮಹಾಕುಂಭದ ದಿವ್ಯ ಮತ್ತು ಭವ್ಯ ವ್ಯವಸ್ಥೆ ನೋಡಿ ಪಾಕಿಸ್ತಾನಿ ಭಕ್ತರ ಹೃದಯ ಉಕ್ಕಿ ಹರಿಯಿತು !

ಪ್ರಯಾಗರಾಜ – ಇಲ್ಲಿಯ ಮಹಾಕುಂಭದಲ್ಲಿ ಇನ್ನು ಕೂಡ ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಪವಿತ್ರ ಸಂಗಮದಲ್ಲಿ ಶ್ರದ್ಧೆಯಿಂದ ಸ್ನಾನ ಮಾಡಲು ಪ್ರಯಾಗರಾಜಕ್ಕೆ ಬರುತ್ತಿದ್ದಾರೆ. ಮಹಾಕುಂಭದಲ್ಲಿ ಇಲ್ಲಿಯವರೆಗೆ ಸುಮಾರು ೩೯ ಕೋಟೆ ೭೪ ಲಕ್ಷ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಸನಾತನ ಧರ್ಮದ ಶ್ರದ್ಧೆಯ ಸಂಬಂಧ ಎಷ್ಟೊಂದು ಆಳವಾಗಿದೆ ಎಂದರೆ, ಪಾಕಿಸ್ತಾನದಲ್ಲಿನ ಸನಾತನ ಧರ್ಮದ ಅನುಯಾಯಿಗಳು ಕೂಡ ಮಹಾಕುಂಭದ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗರಾಜಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ಸಿಂಧ ಮತ್ತು ಪಂಜಾಬ ಪ್ರಾಂತದಲ್ಲಿನ ೬೮ ಹಿಂದೂ ಭಕ್ತರ ಸಮೂಹ ಪ್ರಯಾಗರಾಜಕ್ಕೆ ತಲುಪಿದೆ. ಎಲ್ಲಾ ಭಕ್ತರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿ ತಮ್ಮ ಪೂರ್ವಜರ ಅಸ್ತಿಗಳನ್ನು ಸಂಗಮದಲ್ಲಿ ವಿಸರ್ಜನೆ ಮಾಡಿದ್ದಾರೆ. ಮಹಾಕುಂಭದ ವ್ಯವಸ್ಥೆ ಮತ್ತು ಸನಾತನ ಧರ್ಮದ ಶ್ರದ್ಧೆಯ ದಿವ್ಯ ಭವ್ಯ ಕಾರ್ಯಕ್ರಮ ನೋಡಿ ಎಲ್ಲಾ ಪಾಕಿಸ್ತಾನಿ ಭಕ್ತರ ಹೃದಯ ತುಂಬಿ ಬಂದಿದೆ.

೧. ಪಾಕಿಸ್ತಾನದಲ್ಲಿನ ಈ ಎಲ್ಲಾ ಭಕ್ತರು ಅವರ ಪೂರ್ವಜರ ಅಸ್ತಿಕಲಶ ವಿಸರ್ಜನೆ ಮಾಡುವುದಕ್ಕಾಗಿ ವಿಶೇಷ ‘ವೀಸಾ’ಪಡೆದು ಪ್ರಯಾಗರಾಜಕ್ಕೆ ಬಂದಿದ್ದರು.
೨. ಭಕ್ತರ ಸಹಿತ ಬಂದಿರುವ ಮಹಂತ ರಾಮನಾಥಜಿ ಇವರು ಮಾತನಾಡಿ, ಈ ಹಿಂದೆ ಈ ಎಲ್ಲರೂ ಹರಿದ್ವಾರಕ್ಕೆ ಹೋಗಿದ್ದರು. ಅಲ್ಲಿ ಅವರು ಸುಮಾರು ೪೮೦ ಪೂರ್ವಜರ ಅಸ್ತಿ ಕಳಸದ ವಿಸರ್ಜನೆ ಮತ್ತು ಪೂಜೆ ಮಾಡಿದ್ದರು’, ಎಂದು ಹೇಳಿದರು.
೩. ಇದರ ನಂತರ ಅವರು ಪ್ರಯಾಗರಾಜಕ್ಕೆ ಬಂದು ಮಹಾಕುಂಭದಲ್ಲಿ ಸ್ನಾನ ಮಾಡಿ ತಮ್ಮ ಪೂರ್ವಜರ ಆತ್ಮದ ಶಾಂತಿಗಾಗಿ ಪ್ರಾರ್ಥನೆ ಮಾಡಿದರು.
ನಮ್ಮನ್ನು ಸನಾತನ ಶ್ರದ್ಧೆಯ ಎಳೆ ಮತ್ತು ಮಹಾಕುಂಭದ ಕೂಗು ಇಲ್ಲಿ ಸೆಳೆದು ತಂದಿದೆ ! – ಪಾಕಿಸ್ತಾನದ ಭಕ್ತರು
‘ಸನಾತನ ಧರ್ಮದ ಶ್ರದ್ದೆಯ ಎಳೆ ಮತ್ತು ಮಹಾಕುಂಭದ ಕೂಗು ನಮ್ಮನ್ನು ಇಲ್ಲಿ ಸೆಳೆದು ತಂದಿದೆ. ನಮ್ಮ ಅನೇಕ ವರ್ಷದ ಇಚ್ಛೆ ಇದ್ದೇ ಇತ್ತು; ಆದರೆ ನಮ್ಮ ಪೂರ್ವಜರಿಗೂ ಮಹಾಕುಂಭದಲ್ಲಿ ಸಹಭಾಗಿಯಾಗಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕು ಮತ್ತು ಅಲ್ಲಿಯ ನೀರಿನಲ್ಲಿ ಸೇರಬೇಕು ಎಂಬ ಇಚ್ಛೆತಯೂ ಇತ್ತು. ಅದರ ಪ್ರಕಾರ ಅವರ ಇಚ್ಛೆ ಪೂರ್ಣವಾಗಿದೆ, ಎಂದು ಪಾಕಿಸ್ತಾನದಿಂದ ಮಹಾಕುಂಭಕ್ಕೆ ಬಂದಿರುವ ಭಕ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಭಾರತ ಸರಕಾರ ಮತ್ತು ಉತ್ತರಪ್ರದೇಶದ ಯೋಗಿ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು. ಪಾಕಿಸ್ತಾನಿ ಭಕ್ತರು, ಯೋಗಿ ಸರಕಾರದಿಂದ ಮಹಾಕುಂಭದಲ್ಲಿ ಸಹಭಾಗಿ ಆಗುವ ಸೌಭಾಗ್ಯ ದೊರೆತಿದೆ’, ಎಂದು ಹೇಳಿದರು. ಮಹಾಕುಂಭದ ವ್ಯವಸ್ಥೆ ಬಹಳ ಉತ್ತಮವಾಗಿದೆ, ಇಲ್ಲಿಯ ವಾತಾವರಣ, ಭೋಜನ, ಸ್ವಚ್ಛತೆ ವ್ಯವಸ್ಥೆ ಎಲ್ಲವೂ ಶ್ಲಾಘನೀಯವಾಗಿದೆ. ಪಾಕಿಸ್ತಾನದಲ್ಲಿ ನಮಗೆ ದೇವಸ್ಥಾನಕ್ಕೆ ಹೋಗಲು ಕೂಡ ಸಿಗುವುದಿಲ್ಲ. ಇಲ್ಲಿ ಬಂದು ನಾವು ಕೇವಲ ಧನ್ಯರಷ್ಟೇ ಅಲ್ಲದೆ ನಮ್ಮ ಮಾತಾ ಪಿತೃಗಳಿಗೆ ಮತ್ತು ಪೂರ್ವಜರಿಗೂ ಕೂಡ ಮೋಕ್ಷ ದೊರೆಯಿತು. ಬಾಲ್ಯದಿಂದಲೂ ನಾವು ಪ್ರಯಾಗರಾಜ ಮತ್ತು ಸಂಗಮದ ಪವಿತ್ರ ಭೂಮಿಯ ಬಗ್ಗೆ ಕೇಳಿದ್ದೆವು. ಮಾತಾ ಗಂಗಯಲ್ಲಿ ಸ್ನಾನ ಮಾಡಿದ ನಂತರ ನಮ್ಮ ಜೀವನ ಸಫಲವಾಯಿತು’, ಎಂದು ಹೇಳಿದರು.