ಬಾಂಗ್ಲಾದೇಶದಲ್ಲಿನ ಹಿಂದೂಗಳ ದಯನೀಯ ಸ್ಥಿತಿ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಮೌಲ್ವಿ ಬಾಜಾರಿನ ಕಮಲಗಂಜ ಉಪಜಿಲ್ಲೆಯಲ್ಲಿ ಓರ್ವ ಹಿಂದೂ ಹುಡುಗಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಹುಡುಗಿಯ ಹೆಸರು ಪೂರ್ಣಿಮಾ ರೇಲಿ. ಆಕೆ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಫೆಬ್ರುವರಿ ೫ ರಿಂದ ಈ ಹುಡುಗಿಯು ಮನೆಯಿಂದ ಕಾಣೆಯಾಗಿದ್ದಳೆಂದು ಹೇಳಲಾಗಿದೆ. ಜಾನುವಾರುಗಳನ್ನು ಮೇಯಿಸಲು ಹೋಗುವಾಗ ಆಕೆಯನ್ನು ಕೊನೆಯ ಬಾರಿ ನೋಡಲಾಗಿತ್ತು. ಆಕೆ ಕಾಣೆಯಾದ ಮರುದಿನ ಫೆಬ್ರುವರಿ ೬ ರಂದು ಆಕೆಯ ಶವವು ಶಮಶೆರನಗರ ಚಹಾದ ತೋಟದಲ್ಲಿ ಅಲ್ಲಿನ ಕಾರ್ಮಿಕರಿಗೆ ಕಂಡಿದೆ. ಹುಡುಗಿಯ ಕತ್ತು ಮತ್ತು ಮಣಿಕಟ್ಟನ್ನು ಕತ್ತರಿಸಲಾಗಿತ್ತು.