Devil’s Trouble in Dakshina Kannada : ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಾಲಾಡಿ ಇಲ್ಲಿ ಪ್ರೇತದ ಘಟನೆಯಿಂದ ನಾಗರೀಕರಲ್ಲಿ ಚರ್ಚೆ

ಮೊಬೈಲ್ ನಲ್ಲಿ ಸಲ್ಲದ ಪ್ರೇತದ ತೆಗೆಯಲಾದ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

ದಕ್ಷಿಣ ಕನ್ನಡ – ಇಲ್ಲಿಯ ಮಲಾಡಿ ಪ್ರದೇಶದಲ್ಲಿನ ಒಂದು ಮನೆಯಲ್ಲಿ ಪ್ರೇತದ ತೊಂದರೆ ಇರುವುದರಿಂದ ಒಂದು ಕುಟುಂಬ ಭಯದ ನೆರಳಿನಲ್ಲಿ ಇದೆ, ಎಂದು ‘ಏಷ್ಯಾನೆಟ್ ನ್ಯೂಸ್’ ಈ ವಾರ್ತೆಯನ್ನು ನೀಡಿದೆ. ಈ ಮನೆಯಲ್ಲಿ ಪಾತ್ರೆ ಬೀಳುತ್ತೇವೆ, ಬಟ್ಟೆಗಳಿಗೆ ಅನಿರೀಕ್ಷಿತವಾಗಿ ಬೆಂಕಿ ಹತ್ತುತ್ತಿದೆ ಮತ್ತು ಕತ್ತು ಹಿಸಿಕಿದಂತಹ ಘಟನೆ ಘಟಿಸುತ್ತಿವೆ, ಎಂದು ದಾವೆ ಮಾಡಿದ್ದಾರೆ. ಮೊಬೈಲ್‌ನ ಕ್ಯಾಮೆರಾದಲ್ಲಿ ಸೆರೆಯಾದ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆಯಿಂದ ಮಾಲಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಉಮೇಶ ಶೆಟ್ಟಿ ಅವರು ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ೩ ತಿಂಗಳಿಂದ ಅವರಿಗೆ ಈ ಅಜ್ಞಾತ ಶಕ್ತಿಯನ್ನು ಎದುರಿಸಬೇಕಾಗುತ್ತಿದೆ. ‘ಯಾರೋ ವಾಹನದಲ್ಲಿ ತಂದಿರುವ ಪ್ರಸಾದ ಮನೆಗೆ ಬಂದ ನಂತರದಿಂದ ಈ ಸಮಸ್ಯೆ ಆರಂಭವಾಗಿದೆ’, ಎಂದು ಈ ಕುಟುಂಬ ಹೇಳಿದೆ. ಮಂತ್ರ ತಂತ್ರ ತಜ್ಞರು ಮತ್ತು ಜ್ಯೋತಿಷಿ ಇವರು ಈ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದಾಗಿ ಹೇಳಿದ್ದಾರೆ.