‘ಪೇಟಾ’ದಿಂದ ತ್ರಿಶೂರ (ಕೇರಳ) ದಲ್ಲಿರುವ ಕೊಂಬಾರ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ !

(‘ಪೆಟಾ’, ಅಂದರೆ ‘ಪಿಪಲ್ ಫಾರ್ ದಿ ಡಥಿಕಲ ಟ್ರೀಟ್‌ಮೆಂಟ್ ಆಫ್ ಅನಿಮಲ್’ (ಪ್ರಾಣಿಗಳ ನೈತಿಕ ಪದ್ದತಿಯಿಂದ ವರ್ತಿಸಲು ಪ್ರಯತ್ನ ಮಾಡುವ ಜನರು)

ತ್ರಿಶೂರ (ಕೇರಳ) – ಪ್ರಾಣಿಪ್ರೀತಿಯ ಹೆಸರಿನಲ್ಲಿ ಕೇಲವ ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡಿರುವ ‘ಪೆಟಾ ಇಂಡಿಯಾ’ವು ತ್ರಿಶೂರ್‌ನ ಕೊಂಬರಾ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ‘ಕೊಂಬರಾ ಕಣ್ಣನ್’ ಎಂಬ ಪೂರ್ಣ ಗಾತ್ರದ ಯಾಂತ್ರಿಕ ಆನೆಯನ್ನು ದಾನ ಮಾಡಿದೆ. ಈ ಯಾಂತ್ರಿಕ ಆನೆಯನ್ನು ಇನ್ನು ಮುಂದೆ ದೇವಾಲಯದ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ‘ಕ್ರೌರ್ಯ ಮುಕ್ತ’ ಎಂದು ದಾವೆ ಮಾಡಿದರೂ, ‘ಪೆಟಾ’ದ ಉಪಕ್ರಮವು ಇತರ ಧರ್ಮಗಳ ಆಚರಣೆಗಳನ್ನು ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸುವ ಮತ್ತು ಹಿಂದೂ ಹಬ್ಬಗಳು ಮತ್ತು ಆಚರಣೆಗಳನ್ನು ಮಾತ್ರ ಗುರಿಯಾಗಿಸುವ ನಿರಂತರ ಪದ್ದತಿಯನ್ನು ಪ್ರತಿಬಿಂಬಿಸುತ್ತದೆ.

1. ‘ಕೇರಳದ ದೇವಾಲಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯವಾದ ಜೀವಂತ ಆನೆಗಳನ್ನು ಎಂದಿಗೂ ಹೊಂದಲು ಅಥವಾ ಗುತ್ತಿಗೆಗೆ ಪಡೆಯದಿರಲು ದೇವಾಲಯದ ನಿರ್ಧಾರದ ಗೌರವಾರ್ಥವಾಗಿ ಈ ದೇಣಿಗೆ ನೀಡಲಾಗಿದೆ’, ಎಂದು ಪೇಟಾ ಹೇಳಿಕೊಂಡಿದೆ.

2. ಈ ಬಗ್ಗೆ ಸಿತಾರ್ ವಾದಕಿ ಅನುಷ್ಕಾ ಶಂಕರ್ ಸಂತೋಷ ವ್ಯಕ್ತಪಡಿಸಿದರು. ಅವರು, “ಕೊಂಬರಾ ಕಣ್ಣನ್‌’ನಂತಹ ಯಾಂತ್ರಿಕ ಆನೆಗಳು ನಿಜವಾದ ಆನೆಗಳು ತಮ್ಮ ಸ್ಥಳೀಯ ಆವಾಸಸ್ಥಾನದಲ್ಲಿ ತಮ್ಮ ಕುಟುಂಬಗಳೊಂದಿಗೆ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತವೆ” ಎಂದು ಹೇಳಿದರು.

3. ಈ ಕುರಿತು ವಿಮರ್ಶಕರು, ಪೆಟಾದ ಇಂತಹ ಹಸ್ತಕ್ಷೇಪದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ ಮತ್ತು ಶತಮಾನಗಳಷ್ಟು ಹಳೆಯದಾದ ಆಚರಣೆಗಳನ್ನು ಆಧುನಿಕತೆಯ ಹೆಸರಿನಲ್ಲಿ ವ್ಯರ್ಥವೆಂದು ಪರಿಗಣಿಸಲಾಗಿದೆ ಎಂದು ವಾದಿಸಿದ್ದಾರೆ.

4. ಪ್ರಾಣಿಗಳ ಹಕ್ಕುಗಳ ಬಗ್ಗೆ PETA ದ ಉತ್ಸಾಹವನ್ನು ಆಯ್ದ ವಿಷಯಗಳಿಗೆ ಅನ್ವಯಿಸಲಾಗಿದೆ. ಈ ಸಂಸ್ಥೆಯು ನಿರಂತರವಾಗಿ ಹಿಂದೂ ಸಂಪ್ರದಾಯಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿನ ಇದೇ ರೀತಿಯ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಮೌನವಾಗಿದೆ.

5. ಪ್ರಾಚೀನ ಆಧ್ಯಾತ್ಮಿಕ ಕೇಂದ್ರವಾದ ಕೊಂಬರಾ ಶ್ರೀಕೃಷ್ಣ ಸ್ವಾಮಿ ದೇವಸ್ಥಾನವು ಕೇರಳದ ಚೈತನ್ಯದ ದೇವಾಲಯ ಪರಂಪರೆಯ ಸಂಕೇತವಾಗಿದೆ. ದೇವಾಲಯದ ಮುಖ್ಯ ದೇವರು ಶ್ರೀಕೃಷ್ಣ ಆಗಿದೆ.

6. ದೇವಾಲಯಗಳು ಮತ್ತು ಜಲ್ಲಿಕಟ್ಟುವಿನಂತಹ ಹಬ್ಬಗಳಲ್ಲಿ ಆನೆಗಳನ್ನು ಬಳಸುವ ಸಾಂಪ್ರದಾಯಿಕ ಹಿಂದೂ ಪದ್ಧತಿಗಳನ್ನು ಪೇಟಾ ಗುರಿಯಾಗಿಸಿಕೊಂಡಿದೆ, ಆದರೆ ಇತರ ಧರ್ಮಗಳಲ್ಲಿನ ಇದೇ ರೀತಿಯ ಆಚರಣೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತದೆ. ಉದಾಹರಣೆಗೆ, ಹಿಂದೂ ಹಬ್ಬಗಳ ಸಮಯದಲ್ಲಿ ಪ್ರಾಣಿ ಬಲಿಯ ವಿರುದ್ಧ ಪ್ರಚಾರ ಮಾಡುವಾಗ ಬಕ್ರಿ ಈದ್‌ನ ಪದ್ಧತಿಗಳನ್ನು ನಿರ್ಲಕ್ಷಿಸಿದೆ ಎಂದು ಪೇಟಾ ವಿರುದ್ಧ ಆರೋಪಿಸಲಾಗಿದೆ.

ಸಂಪಾದಕೀಯ ನಿಲುವು

ಕೇವಲ ಹಿಂದೂಗಳ ಹಬ್ಬ-ಉತ್ಸವ ಮತ್ತು ಧಾರ್ಮಿಕ ಸಂಪ್ರದಾಯಗಳ ಮೇಲೆ ಟೀಕಾಸ್ತ್ರ ಮಾಡುವ ‘ಪೇಟಾ’!