|
ನವ ದೆಹಲಿ – ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಯ ಮೇಲಿನ ವಿವಾದ ಹೆಚ್ಚುತ್ತಾ ಹೋಗುತ್ತಿದೆ. ಈ ಸಂದರ್ಭದಲ್ಲಿ ಇತ್ತೀಚಿಗೆ ಸಂಯುಕ್ತ ಸಂಸದೀಯ ಸಮಿತಿ (‘ಜೆಪಿಸಿ’ಯ) ವರದಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಇವರ ಮುಂದೆ ಪ್ರಸ್ತುತಪಡಿಸಲಾಯಿತು. ಇದರಲ್ಲಿ ವಿವಾದಿತ ವಕ್ಫ್ ಆಸ್ತಿಯ ಮಾಹಿತಿ ನೀಡಲಾಗಿದೆ. ಈ ವರದಿಯಲ್ಲಿ, ಉತ್ತರಪ್ರದೇಶದಲ್ಲಿ ೫೭ ಸಾವಿರದ ೭೯೨ ಸರಕಾರಿ ಆಸ್ತಿಯ ಮೇಲೆ ವಕ್ಫ್ ಅಧಿಕಾರ ಪಡೆದಿದೆ. ಈ ಆಸ್ತಿ ೧೧ ಸಾವಿರದ ೭೧೨ ಎಕರೆಯಲ್ಲಿ ಹಬ್ಬಿದೆ.
🚨 Massive Land Encroachment by UP Waqf Board!
🏛️ 11,712 acres of Govt. land encroached!
📜 57,792 properties under its control!
📢 As per UP Govt.’s report to the Joint Parliamentary Committee, the scale of this takeover is staggering!
🛑 The ONLY solution: Dissolve the Waqf… pic.twitter.com/hGlqvqMBdh
— Sanatan Prabhat (@SanatanPrabhat) February 7, 2025
೧. ಮಾಹಿತಿ ಪ್ರಕಾರ ಶಹಜಹಾಂಪುರದಲ್ಲಿ ವಕ್ಫ್ ಹೆಸರಿನಲ್ಲಿ ೨ ಸಾವಿರದ ೫೮೯ ಸಂಪತ್ತಿ ನೋಂದಣಿಯಾಗಿದೆ, ಇದರಲ್ಲಿ ೨ ಸಾವಿರದ ೩೭೧ ಸರಕಾರಿ ಆಸ್ತಿ ಆಗಿದೆ. ರಾಮಪುರದಲ್ಲಿ ೩ ಸಾವಿರದ ೩೬೫ ವಕ್ಫ್ ಆಸ್ತಿ ಇದೆ, ಅದರಲ್ಲಿ ೨ ಸಾವಿರದ ೩೬೩ ಸರಕಾರಿ ಆಸ್ತಿ ಆಗಿದೆ. ಅಯ್ಯೋದ್ಯೆಯಲ್ಲಿ ೩ ಸಾವಿರದ ೬೫೨ ಆಸ್ತಿಯ ಬಗ್ಗೆ ದಾವೆ ಮಾಡಲಾಗುತ್ತಿದೆ, ಇದರಲ್ಲಿ ೨ ಸಾವಿರದ ೧೧೬ ಸಾರ್ವಜನಿಕ ಆಸ್ತಿಯಾಗಿದೆ. ಜೌನಪುರದಲ್ಲಿನ ೪ ಸಾವಿರದ ೧೬೭ ವಕ್ಫ್ ಆಸ್ತಿಯಲ್ಲಿ ೨ ಸಾವಿರದ ೯೬ ಮತ್ತು ಬರೇಲಿಯಲ್ಲಿ ೩ ಸಾವಿರದ ೪೯೯ ವಕ್ಫ್ ಆಸ್ತಿಯಲ್ಲಿ ೨ ಸಾವಿರ ಸರಕಾರಿ ಭೂಮಿಯಾಗಿದೆ. ಲಖಿಮಪುರ ಖೇರಿ (೧ ಸಾವಿರದ ೭೯೨), ಬುಲಂದಶಹರ (೧ ಸಾವಿರದ ೭೭೮), ಪತೆಹಪುರ (೧ ಸಾವಿರದ ೬೧೦) ಮುಂತಾದ ಸ್ಥಳಗಳಲ್ಲಿ ಕೂಡ ವಕ್ಫ್ ದಾವೆ ಇರುವುದು ಕಂಡುಬಂದಿದೆ.
೨. ಉತ್ತರಪ್ರದೇಶ ಸರಕಾರವು ಸಮಿತಿಗೆ, ಈ ಭೂಮಿಯ ಬಹಳಷ್ಟು ಭಾಗ ವರ್ಗ ೫ ಮತ್ತು ವರ್ಗ ೬ ರ ಅಡಿಯಲ್ಲಿ ಬರುತ್ತಿದ್ದೂ ಅದು ಸರಕಾರಿ ಮತ್ತು ಗ್ರಾಮಠಾಣಾದ ಆಸ್ತಿ ಎಂದು ಹೇಳುತ್ತಾರೆ.
೩. ವಕ್ಫ್ ಆಸ್ತಿಯ ವಿಚಾರಣೆ ಮತ್ತು ವಿಲೇವಾರಿ ಮಾಡುವುದಕ್ಕಾಗಿ ಸಮಿತಿಯ ವರದಿಯಲ್ಲಿ ಕೆಲವು ಶಿಫಾರಸ್ಸು ಮಾಡಿದ್ದಾರೆ. ಇದರಲ್ಲಿ ಒಂದು ಶಿಫಾರಸ್ಸು ಅಂದರೆ ಕೇಂದ್ರ ವಕ್ಫ್ ಪರಿಷತ್ತಿನಲ್ಲಿ ಮುಸಲ್ಮಾನೇತರರ ಸಂಖ್ಯೆ ಹೆಚ್ಚಿಸುವುದು. ಇದಲ್ಲದೆ ಮೊಕದ್ದಮೆ ಬೇಗನೆ ಬಗೆಹರಿಸುವುದಕ್ಕಾಗಿ ನ್ಯಾಯಾಧೀಕರಣದ ಸದಸ್ಯರ ಸಂಖ್ಯೆ ಮತ್ತು ಅವರ ಪಾತ್ರತೆ ಮತ್ತೆ ನಿಶ್ಚಿತಗೊಳಿಸಲು ಸೂಚನೆ ನೀಡಲಾಗಿದೆ.
೪. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಕಾರ ವಕ್ಫ್ ಬೋರ್ಡ್ ಹತ್ತಿರ ದೇಶಾದ್ಯಂತ ೮ ಲಕ್ಷ ೬೫ ಸಾವಿರದ ೬೪೬ ನೋಂದಣಿಯಾಗಿರುವ ಆಸ್ತಿ ಇದೆ. ಇದರಲ್ಲಿ ವಕ್ಫ್ ಹತ್ತಿರ ಕೇವಲ ಬಂಗಾಲದಲ್ಲಿ ೮೦ ಸಾವಿರಗಿಂತಲೂ ಹೆಚ್ಚಿನ ಆಸ್ತಿ ಇದೆ. ಪಂಜಾಬದಲ್ಲಿ ೭೦ ಸಾವಿರದ ೯೯೪, ತಮಿಳುನಾಡಿನಲ್ಲಿ ೬೫ ಸಾವಿರದ ೯೪೫ ಮತ್ತು ಕರ್ನಾಟಕದಲ್ಲಿ ೬೧ ಸಾವಿರದ ೧೯೫ ಆಸ್ತಿ ಇದೆ.
ಸಂಪಾದಕೀಯ ನಿಲುವುವಕ್ಫ್ ಬೋರ್ಡ್ ವಿಸರ್ಜನೆ ಮಾಡಿ ಎಲ್ಲಾ ಭೂಮಿ ಮತ್ತು ಆಸ್ತಿಯನ್ನು ಸರಕಾರ ಜಮಾ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಯಾವ ಉಪಾಯ ಕೂಡ ಇಲ್ಲ. ಹೀಗೆ ಮಾಡುವ ಧೈರ್ಯ ಸರಕಾರ ತೋರಿಸುವುದೇ ? |