ತಮಿಳುನಾಡಿನಲ್ಲಿ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ರೈಲಿನಿಂದ ಹೊರಗೆ ತಳ್ಳಿದ !

ಓರ್ವ ಆರೋಪಿಯ ಬಂಧನ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ತಿರುಪತ್ತೂರಿನ ಜೋಲರಪೇಟ್ಟಯಿಹತ್ತಿರ ರೈಲಿನಲ್ಲಿ ೪ ತಿಂಗಳ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ೨ ಯುವಕರು ಈ ಕೃತ್ಯ ನಡೆಸಿರುವ ಮಾಹಿತಿ ಬೆಳಕೆಗೆ ಬಂದಿದೆ.

ಸಂತ್ರಸ್ತ ಮಹಿಳೆ ಆಂಧ್ರಪ್ರದೇಶದ ಚಿತ್ತೂರಿಗೆ ಹೊರಟಿದ್ದಳು. ಈ ಮಹಿಳೆ ಫೆಬ್ರುವರಿ ೭ ರಂದು ಬೆಳಿಗ್ಗೆ ರೈಲ್ವೆಯ ಶೌಚಾಲಯಕ್ಕೆ ಹೋಗುತ್ತಿರುವಾಗ ಇಬ್ಬರು ಆಕೆಯನ್ನು ತಡೆದು ದೌರ್ಜನ್ಯ ನಡೆಸಿದ್ದಾರೆ. ಆ ಸಮಯದಲ್ಲಿ ಆಕೆ ಸಹಾಯಕ್ಕಾಗಿ ಕಿರಿಚಾಡಿರುವಾಗ ಆ ಇಬ್ಬರು ಯುವಕರು ಆಕೆಯನ್ನು ವೆಲ್ಲೋರ್ ಜಿಲ್ಲೆಯ ಕೆವಿಕುಪ್ಪಮಹತ್ತಿರ ರೈಲಿನಿಂದ ಕೆಳಗೆ ತಳ್ಳಿದ್ದಾರೆ. ಇದರಲ್ಲಿ ಆ ಮಹಿಳೆಯ ಕೈ ಮತ್ತು ಕಾಲು ಫ್ಯಾಕ್ಚರ್ ಆಗಿದೆ ಮತ್ತು ಆಕೆಯ ತಲೆಗೂ ಪೆಟ್ಟು ಬಿದ್ದಿದೆ. ಚಿಕಿತ್ಸೆಗಾಗಿ ತಿಲವೆಲ್ಲೋರ್ ಇಲ್ಲಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಈ ಘಟನೆಯ ಪ್ರಕರಣದಲ್ಲಿ ದೂರು ದಾಖಲಿಸಿ ಹೇಮರಾಜ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಅಣ್ಣದ್ರಮುಕ ಪಕ್ಷದಿಂದ ರಾಜ್ಯದಲ್ಲಿನ ದ್ರಮುಕ ಸರಕಾರದ ಕುರೀತು ವಾಗ್ದಾಳಿ

‘ಎ.ಐ.ಎ.ಡಿ.ಎಂ.ಕೆ.’ಯ(‘ಆಲ್ ಇಂಡಿಯಾ ಅಣ್ಣಾದ್ರಮುಕ’ದ – ಅಖಿಲ ಭಾರತೀಯ ಅಣ್ಣ ದ್ರವೀಡ ಮುನ್ನೆತ್ರ ಕಳಘಂ, ಎಂದರೆ ದ್ರವೀಡ ಪ್ರಗತಿ ಸಂಘದ) ಕಾರ್ಯದರ್ಶಿ ಪಳನಿ ಸ್ವಾಮಿ ಇವರು ಈ ಘಟನೆಯನ್ನು ಖಂಡಿಸಿದ್ದಾರೆ. ಅವರು, ತಮಿಳುನಾಡಿನಲ್ಲಿನ ಮಹಿಳೆಯರು ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಲು ಸಾಧ್ಯವಿಲ್ಲ. ಶಾಲೆ, ಕಾಲೇಜುಗಳು ಅಥವಾ ಕೆಲಸದ ಸ್ಥಳಗಳಲ್ಲಿ ಹೋಗಲು ಸಾಧ್ಯವಿಲ್ಲ ಮತ್ತು ಈಗ ರೈಲು ಪ್ರವಾಸ ಕೂಡ ಮಾಡಲು ಸಾಧ್ಯವಿಲ್ಲ, ಇದು ನಾಚಿಕೆಗೇಡಿನ ವಿಷಯವಾಗಿದೆ. ಇಂತಹ ದೌರ್ಜನ್ಯದ ಘಟನೆ ಎಂದರೆ ರಾಜ್ಯ ಸರಕಾರದ ವಿಫಲತೆ ಆಗಿದ್ದು ಸರಕಾರ ತಪ್ಪಿತಸ್ಥರಿಗೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ತಮಿಳುನಾಡಿನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಈ ಘಟನೆಯ ಬಗ್ಗೆ ದೇಶದಲ್ಲಿನ ಜಾತ್ಯತೀತ ರಾಜಕೀಯ ಪಕ್ಷ ಏಕೆ ಬಾಯಿ ತೆರೆಯುವುದಿಲ್ಲ?
  • ಇಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ !