ಉಗ್ರನಿಗ್ರಹ ದಳದಿಂದ ೧೦ ಸಾವಿರ ಶಂಕಿತರ ಮೇಲೆ ಸೂಕ್ಷ್ಮ ನಿಗಾ !

  • ಮಹಾಕಂಭದಲ್ಲಿನ ಕಲ್ತುಳಿತದ ಪ್ರಕರಣ

  • ಅಪಘಾತವಲ್ಲ, ಷಡ್ಯಂತ್ರದ ಅನುಮಾನ, ತನಿಖಾ ದಳದಿಂದ ವಿಚಾರಣೆ ಆರಂಭ !

  • ಪೌರತ್ವ ಸುಧಾರಣೆ ಕಾನೂನಿನ ವಿರುದ್ಧ ನಡೆಸಿರುವ ಪ್ರತಿಭಟನಾಕಾರರ ಮೇಲೆ ವಿಶೇಷ ಗಮನ !

ಪ್ರಯಾಗರಾಜ – ಮಹಾ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತದ ಪ್ರಕರಣ ಅಪಘಾತವಲ್ಲ, ಅದರ ಹಿಂದೆ ಷಡ್ಯಂತ್ರ ಇರುವ ಅನುಮಾನ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಉಗ್ರ ನಿಗ್ರಹ ದಳ ಮತ್ತು ಇತರ ಸುರಕ್ಷಾ ವ್ಯವಸ್ಥೆಯಿಂದ ಸುಮಾರು ೧೦ ಸಾವಿರ ಶಂಕಿತರ ಮೇಲೆ ಸೂಕ್ಷ್ಮ ನಿಗಾವಹಿಸಿದೆ. ವಿಶೇಷವಾಗಿ ಸಿಎಎ (ನಾಗರಿಕ ಸುಧಾರಣಾ ಕಾನೂನು) ಮತ್ತು ಎನ್.ಆರ್.ಸಿ. (ರಾಷ್ಟ್ರೀಯ ನಾಗರೀಕ ನೋಂದಣಿ) ವಿರೋಧದಲ್ಲಿ ಪ್ರತಿಭಟನೆಯಲ್ಲಿ ಸಕ್ರಿಯ ಇರುವ ಜನರ ಕುರಿತು ವಿಶೇಷ ನಿಗಾ ಇಡಲಾಗುತ್ತಿದೆ. ಸಮೀಕ್ಷೆಯಲ್ಲಿ ಹಿಂದೂಯೆತರ ಜನರು ಕಂಡು ಬಂದಿದ್ದಾರೆ, ಯಾವ ಜನರು ಸಾಮಾಜಿಕ ಮಾಧ್ಯಮದಲ್ಲಿ ಮಹಾಕುಂಭದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು ಹಾಗೂ ಕೆಲವು ಜನರು ‘ಗೂಗಲ್ ಮತ್ತು ಯುಟ್ಯೂಬ್’ ಬಗ್ಗೆ ಮಹಾಕುಂಭ ನೋಡುವುದಕ್ಕಾಗಿ ಹೆಚ್ಚಿನ ಸಮಯ ಸರ್ಚ್ ಮಾಡಿದ್ದರು. ಅವರ ಸಮೀಕ್ಷೆ ಮಾಡಲಾಗುವುದು. 18 ಜಿಲ್ಲೆಯಲ್ಲಿನ ‘ಪಿ.ಎಫ್.ಐ.’ ನ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ) ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ.

೧. ಕಾಲ್ತುಳಿತದ ಜೊತೆಗೆ ಮಹಾಕುಂಭಮೇಳದಲ್ಲಿ ಜನವರಿ ೧೯ ರಂದು ನಡೆದಿರುವ ಬೆಂಕಿ ಘಟನೆ ಕೂಡ ಸುರಕ್ಷಾ ವ್ಯವಸ್ಥೆ ವಿಸ್ತೃತವಾಗಿ ಪರಿಶೀಲಿಸುತ್ತಿದೆ.
೨. ವಾರಣಾಸಿಯಲ್ಲಿ ೭೦ ಶಂಕಿತರ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದ ಜೈಲಿನ ಕೆಲವು ಶಂಕಿತರ ಮಾಹಿತಿ ಪಡೆಯಲಾಗಿದೆ.
೩. ವಾರಣಾಸಿಯ ಜೈತಪುರ ಇಲ್ಲಿಯ ಸಿರಾಜುದ್ದೀನ್ ಇವನಿಗೆ ನೋಟಿಸ್ ವಿಧಿಸಲಾಗಿತ್ತು. ಫೆಬ್ರುವರಿ ೩ ರಂದು ಅವನಿಗೆ ಅಶೋಕ ವಿಹಾರ ಕಾಲೋನಿಯಲ್ಲಿ ಉಗ್ರ ನಿಗ್ರಹ ದಳದ ಕಾರ್ಯಾಲಯಕ್ಕೆ ಕರೆಸಿ ೩ ಗಂಟೆಗಳಿಗಿಂತಲೂ ಹೆಚ್ಚಿನ ಸಮಯ ವಿಚಾರಣೆ ನಡೆಸಿದರು. ಸಿರಾಜುದ್ದೀನ್ ಜನವರಿ ೧೯ ರಂದು ಮಹಾಕುಂಭ ಕ್ಷೇತ್ರದಲ್ಲಿ ಹಾಜರಿದ್ದನು ಮತ್ತು ಅವನು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಕ್ಷೇಪಣೆ ಮಾಡಿ ಅಲ್ಲಿಯ ಮಾಹಿತಿ ಪ್ರಸಾರ ಮಾಡಿದ್ದನು.
೪. ಮಹಾ ಕುಂಭಮೇಳ ಕ್ಷೇತ್ರದಲ್ಲಿ ೬೦೦ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ, ಅದರಲ್ಲಿ ಕೆಲವು ಶಂಕಿತ ವ್ಯಕ್ತಿಗಳು ಕಂಡಿದ್ದಾರೆ. ಅವರ ಪತ್ತೆಗಾಗಿ ೮ ತಂಡಗಳು ಕಾರ್ಯನಿರತವಾಗಿದೆ.

ಮಹತ್ವದ ವಿಷಯ…

೧. ಸಾಮಾಜಿಕ ಜಾಲತಾಣದಲ್ಲಿ ಮಹಾಕುಂಭಾವಿಶಯದ ಬಗ್ಗೆ ಮಾಹಿತಿ ನೋಡುವ ಬಹುತಾಂಶ ಹಿಂದಿಯೇತರರೆ ಆಗಿದ್ದಾರೆ.
೨. ನಾಗರಿಕ ಸುಧಾರಣಾ ಕಾನೂನಿನ ವಿರೋಧಕ್ಕಾಗಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಸಹಭಾಗಿ ಆಗುವ ಜನರು ಮಹಾಕುಂಭದಲ್ಲಿ ಬಂದಿದ್ದರು.
೩. ಯಾರ ಹಿಲ್ಲನೆ ಅಪರಾಧಿ ವೃತ್ತಿಯದ್ದಾಗಿದೆಯೋ, ಅಂತಹ ಜನರು ಮಹಾಕುಂಭಕ್ಕೆ ಬಂದಿದ್ದರು.
೪. ಹಿಂದೂಯೆತರ ಜನರು ಮಹಾಕುಂಭದ ನೇರ ಪ್ರಕ್ಷೇಪಣೆ ನೋಡುತ್ತಿದ್ದರು. ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಜನರು ಮಹಾಕುಂಭದಲ್ಲಿ ಸಹಭಾಗಿದ್ದರು.