ಮಹಾಕುಂಭದಲ್ಲಿ ಸಾಧನೆಯ ಪ್ರೇರಣೆ ನಿರ್ಮಾಣವಾಗಬೇಕು, ಅದಕ್ಕಾಗಿ ಧರ್ಮಾಚರಣೆ ಮಾಡಿ ! – ರಾಜನ ಕೇಸರಿ, ಹಿಂದೂ ಜನಜಾಗೃತಿ ಸಮಿತಿ

ಉತ್ತರಪ್ರದೇಶದ ಸಮಾಜ ಕಲ್ಯಾಣ ಸಚಿವಾಲಯದ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

ಪ್ರಯಾಗರಾಜ – ಧರ್ಮಾಚರಣೆ ಮಾಡಿ ನಾವು ಈ ಮಹಾಕುಂಭದಲ್ಲಿ ಸಹಭಾಗಿಯಾದರೆ, ಆಗ ಮಾತ್ರ ನಮ್ಮಲ್ಲಿ ಸಾಧನೆಯ ಪ್ರೇರಣೆ ನಿರ್ಮಾಣವಾಗುವುದು ಎಂದು ಹಿಂದು ಜನಜಾಗೃತಿ ಸಮಿತಿಯ ಶ್ರೀ. ರಾಜನ ಕೇಸರಿ ಇವರು ಹೇಳಿದರು. ಉತ್ತರಪ್ರದೇಶದ ಸಮಾಜ ಕಲ್ಯಾಣ ಸಚಿವಾಲಯದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಮಾಜ ಕಲ್ಯಾಣ ಸಚಿವಾಲಯದ ಮೂಲಕ ಶ್ರವಣದೋಷ ಇರುವ ೩೦ ಸಾವಿರ ಜನರಿಗೆ ಉಚಿತ ಶ್ರವಣಯಂತ್ರ ವಿತರಿಸಲಾಯಿತು. ಅದಕ್ಕಾಗಿ ಮಹಾಕುಂಭ ಕ್ಷೇತ್ರದಲ್ಲಿ ಒಂದು ಶಿಬಿರದ ಉದ್ಘಾಟನೆ ಮಾಡಲಾಯಿತು. ಆ ಸಮಯದಲ್ಲಿ ಸಮಾಜ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಶ್ರೀ. ಸಂಜಯ ಕುಮಾರ ಗೊಂಡ, ಮಹಾಮಂಡಲೇಶ್ವರ ಸ್ವಾಮಿ ಕೇಶವದಾಸ ಮಹಾರಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಶಿಯ ಪ್ರಾಂತ ಪ್ರಚಾರಕ ಶ್ರೀ. ರಮೇಶ ಇವರ ಜೊತೆಗೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಜನ ಕೇಸರಿ

ಶ್ರೀ. ರಾಜನ ಕೇಸರಿ ಇವರು ಉಪಸ್ಥಿತರಿಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಮಾಹಿತಿ ನೀಡಿದರು. ಅದರ ನಂತರ ಧರ್ಮಾಚರಾಣೆಯ ಅವಶ್ಯಕತೆ, ಕುಂಭಮೇಳದ ಮಹತ್ವ, ದೇವಸ್ಥಾನದಲ್ಲಿ ದರ್ಶನ ಹೇಗೆ ಪಡೆಯಬೇಕು, ತಿಲಕ ಹಚ್ಚುವುದರ ಮಹತ್ವ ಈ ವಿಷಯದ ಬಗ್ಗೆ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿ ಕಳೆದ ೨೪ ವರ್ಷಗಳಿಂದ ನಡೆಸುತ್ತಿರುವ, ‘ರಾಷ್ಟ್ರಧ್ವಜದ ಗೌರವ ಕಾಪಾಡಿ’ ಈ ಅಭಿಯಾನದ ಬಗ್ಗೆ ತಿಳಿದುಕೊಂಡ ನಂತರ ಉಪಸ್ಥಿತರಿಂದ ಬಹಳಷ್ಟು ಪ್ರತಿಕ್ರಿಯೆ ದೊರೆಯಿತು. ಈ ಸಮಯದಲ್ಲಿ ಸಮಿತಿಯ ವತಿಯಿಂದ ರಾಜ್ಯ ಸಚಿವ ಶ್ರೀ. ಸಂಜಯಕುಮಾರ ಗೊಂಡ ಇವರಿಗೆ ಸಮಿತಿ ಮಾಹಿತಿ ಪುಸ್ತಕ ಉಡುಗೊರೆಯಾಗಿ ನೀಡಿದರು ಹಾಗೂ ಮಹಾಕುಂಭ ಕ್ಷೇತ್ರದಲ್ಲಿ ಸಮಿತಿಯಿಂದ ಹಾಕಲಾದ ಪ್ರದರ್ಶನಕ್ಕೆ ಭೇಟಿ ನೀಡಲು ಆಮಂತ್ರಣ ಕೂಡ ನೀಡಿದರು.