ಧರ್ಮನಾಶ ಮಾಡುವವರ ವಿರುದ್ಧ ಧರ್ಮರಕ್ಷಣೆಗಾಗಿ ಶಸ್ತ್ರದ ಉಪಯೋಗ ಅನಿವಾರ್ಯ ! – ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ, ಪಂಚಾಯತಿ ಅಖಾಡ, ಮಹನಿರ್ವಾಣಿ

ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ

ಪ್ರಯಾಗರಾಜ, ಫೆಬ್ರವರಿ ೫(ವಾರ್ತೆ) – ಇಂದು ಹಿಂದುಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ. ಅಖಾಡಗಳಿಂದ ಕೂಡ ಜಾಗೃತಿಯ ಕಾರ್ಯಾ ಮಾಡಲಾಗುತ್ತದೆ. ಕೇವಲ ಜ್ಞಾನ ಅಷ್ಟೇ ಅಲ್ಲದೆ, ಧರ್ಮರಕ್ಷಣೆಗಾಗಿ ಎಲ್ಲಿ ಶಸ್ತ್ರಗಳ ಬಳಕೆ ಅನಿವಾರ್ಯವಾಗುವುದು, ಧರ್ಮದ್ರೋಹಿ, ದಾಳಿಕೋರರು ಕೆಟ್ಟದ್ದನ್ನು ಬಯಸುತ್ತಿದ್ದರೆ, ಅಲ್ಲಿ ಶಸ್ತ್ರಗಳ ಉಪಯೋಗ ಅನಿವಾರ್ಯವಾಗುವುದು. ಅದಕ್ಕಾಗಿ ಅಖಾಡಾಗಳ ನಿರ್ಮಿತಿ ಮಾಡಲಾಗಿದೆ. ದೇಶದಲ್ಲಿ ಮೊದಲೇ ನಾಯಕರಿಂದ ಓಲೈಕೆಯ ರಾಜಕಾರಣ ನಡೆಸಿ ಹಿಂದುಗಳ ದಮನ ಮಾಡಿದ್ದಾರೆ.

ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ ಇವರಿಗೆ ಉಡುಗೊರೆ ನೀಡುವಾಗ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಜೊತೆಗೆ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸ್ಗಡ್ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ

ಇಂದು ಕಾಲದ ಪ್ರಕಾರ ನೂತನ ನೇತೃತ್ವ ದೊರೆತಿದೆ. ಹಿಂದೂ ರಾಷ್ಟ್ರ ಆಗುವುದರ ಕಡೆಗೆ ದೇಶ ಮುಂದೆ ಸಾಗುತ್ತಿದೆ. ಹಿಂದೂ ರಾಷ್ಟ್ರ ಘೋಷಣೆ ಆಗುವುದಕ್ಕಾಗಿ ನಾವು ಪ್ರಯತ್ನಿಶೀಲರಾಗಿದ್ದೇವೆ, ಎಂದು ಶ್ರೀ ಪಂಚಾಯತಿ ಅಖಾಡ, ಮಹಾನಿರ್ವಾಣಿಯ ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ ಇವರು ಹೇಳಿಕೆ ನೀಡಿದರು. ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಹಾಗೂ ಸಮಿತಿಯ ಮಹಾರಾಷ್ಟ್ರ ರಾಜ್ಯ ಮತ್ತು ಛತ್ತೀಸ್‌ಗಡ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ ಇವರು ಅವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಅವರು ತಮ್ಮ ವಿಚಾರ ವ್ಯಕ್ತಪಡಿಸಿದರು. ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ ಇವರು ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಖಂಡಿತವಾಗಿಯೂ ಸಹಾಯ ಮಾಡುವೆವು’, ಎಂದು ಹೇಳಿದರು. ಅವರು, ‘ಹಿಂದೂ ಜನಜಾಗೃತಿ ಸಮಿತಿಯ ಮಾಧ್ಯಮದಿಂದ ಬಹಳ ಒಳ್ಳೆಯ ಕಾರ್ಯ ನಡೆಯುತ್ತಿದೆ. ಸಮಿತಿಯ ಕಾರ್ಯಕ್ಕೆ ಅನೇಕ ಶುಭಾಶಯಗಳು ! ಹೀಗೆ ನಿರಂತರ ಕಾರ್ಯ ಮುಂದುವರಿಸಿರಿ. ಎಲ್ಲಿ ನಮ್ಮ ಅವಶ್ಯಕತೆ ಇದೆ, ಅಲ್ಲಿ ನಾವು ನಿಮಗೆ ಖಂಡಿತವಾಗಿ ಸಹಾಯ ಮಾಡುವೆವು,’ ಎಂದು ಹೇಳಿದರು.