ಹಿಂದೂಗಳು ಅಲ್ಪಸಂಖ್ಯಾತರಾಗುವ ಮೊದಲು ಹಿಂದೂ ರಾಷ್ಟ್ರ ಘೋಷಣೆಯಾಗಬೇಕು ! – ಮಹಾಮಂಡಲೇಶ್ವರ ಶ್ರೀ ಶ್ರೀ 1008 ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜ್, ಪಂಚಾಯತಿ ಅಖಾಡ

ಮಹಾಮಂಡಲೇಶ್ವರ ಶ್ರೀ ಶ್ರೀ 1008 ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜ್ ಅವರನ್ನು ಸನ್ಮಾನಿಸುವಾಗ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ

ಪ್ರಯಾಗರಾಜ, ಫೆಬ್ರವರಿ 5 (ಸುದ್ದಿ) – ಅಖಿಲ ಭಾರತ ಅಖಾಡಾ ಪರಿಷತ್ ವತಿಯಿಂದ ವಕ್ಫ್ ಬೋರ್ಡ್‌ಅನ್ನು ರದ್ದುಪಡಿಸಿ ಸನಾತನ ಬೋರ್ಡ್‌ಅನ್ನು ಸ್ಥಾಪಿಸಬೇಕು ಎನ್ನುವ ನಿರ್ಣಯವನ್ನು ಅಂಗೀಕರಿಸಿದೆ. ಈ ಬಗ್ಗೆ ಸಭೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಭಾರತ ಸಂವಿಧಾನದ ಪ್ರಕಾರ ಹಿಂದೂ ರಾಷ್ಟ್ರವಲ್ಲ. ಇಂದು ನಮಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದ ಅಗತ್ಯವಿದೆ. ಆಗ ಮಾತ್ರ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದು.

ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವ ಮಹಾಮಂಡಲೇಶ್ವರ ಶ್ರೀ ಶ್ರೀ 1008 ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜ್

ಹಿಂದೂ ರಾಷ್ಟ್ರವಾಗುವುದು ಅನಿವಾರ್ಯವಾಗಿದೆ. ಇದು ಸಂಭವಿಸದಿದ್ದರೆ, ಮುಂಬರುವ ದಿನಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಮತ್ತು ಇತರ ಧರ್ಮಗಳ ಜನರು 100 ಕೋಟಿ ಸಂಖ್ಯೆಯಲ್ಲಿರುತ್ತಾರೆ ಎಂದು ಅಖಿಲ ಭಾರತೀಯ ಸನಾತನ ಪರಿಷತ್ತಿನ ಅಂತರರಾಷ್ಟ್ರೀಯ ವಕ್ತಾರ ಮಹಾಮಂಡಲೇಶ್ವರ ಶ್ರೀ ಶ್ರೀ 1008 ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜ್ ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ರಾಜ್ಯ ಸಮನ್ವಯಕ ಶ್ರೀ. ಸುನಿಲ ಘನವಟ ಮತ್ತು ಸಮಿತಿಯ ಶ್ರೀ. ಸುನಿಲ ಕದಮ ಇವರು ಸ್ವಾಮೀಜಿಯವರನ್ನು ಭೇಟಿಯಾಗಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಆ ಸಮಯದಲ್ಲಿ ಸ್ವಾಮೀಜಿಯವರು ಸಮಿತಿಯ ಕಾರ್ಯಕ್ಕಾಗಿ ಆಶೀರ್ವದಿಸಿದರು.

(ಎಡದಿಂದ) ಶ್ರೀ ಪಂಚದಶನಾಮ ಜುನಾ ಅಖಾಡಾ ಕಾರ್ಯದರ್ಶಿ ಮಹಾಮಂಡಲೇಶ್ವರ ರಾಮೇಶ್ವರಗಿರಿಜಿ ಮಹಾರಾಜ, ಶ್ರೀ ಪಂಚದಶನಾಮ ಜುನಾ ಅಖಾಡಾ ಕಾರ್ಯದರ್ಶಿ ಮಹಾಮಂಡಲೇಶ್ವರ ಶೈಲೇಂದ್ರಗಿರಿಜಿ ಮಹಾರಾಜ ಮತ್ತು ಶ್ರೀ ಪಂಚದಶನಾಮಾ ಜುನಾ ಅಖಾಡಾ ಮಹಾಮಂಡಲೇಶ್ವರ ಮನೋಜಗಿರಿಜಿ ಮಹಾರಾಜ ಅವರ ಆಶೀರ್ವಾದ ಪಡೆಯುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಶ್ರೀ. ಸುನಿಲ ಘನವಟ

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಪಂಚದಶನಾಮ ಜುನಾ ಅಖಾಡದ ಕಾರ್ಯದರ್ಶಿ ಮಹಾಮಂಡಲೇಶ್ವರ ರಾಮೇಶ್ವರ ಗಿರಿಜಿ ಮಹಾರಾಜರು, ಶ್ರೀ ಪಂಚದಶನಾಮ ಜುನಾ ಅಖಾಡದ ಕಾರ್ಯದರ್ಶಿ ಮಹಾಮಂಡಲೇಶ್ವರ ಶೈಲೇಂದ್ರ ಗಿರಿಜಿ ಮಹಾರಾಜರು ಮತ್ತು ಶ್ರೀ ಪಂಚದಶನಾಮ ಜುನಾ ಅಖಾಡದ ಮಹಾಮಂಡಲೇಶ್ವರ ಮನೋಜ ಗಿರಿಜಿ ಮಹಾರಾಜರು ಇವರನ್ನೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸನ್ಮಾನ ಮಾಡಲಾಯಿತು.

ಮಹಾಮಂಡಲೇಶ್ವರ ಶ್ರೀ ಶ್ರೀ ೧೦೦೮ ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜರು ಮಾತು ಮುಂದುವರೆಸಿ,

1. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಯಿತು, ಇದರಿಂದ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆದವು.
2. ಇಂದು ಪೋಷಕರು ತಮ್ಮ ಮಕ್ಕಳನ್ನು ಬುದ್ಧಿವಂತರು ಮತ್ತು ಸುಂದರರನ್ನಾಗಿ ಮಾಡುವತ್ತ ಗಮನ ಹರಿಸಿದ್ದಾರೆ. ಅವರಿಗೆ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕಲಿಸಬೇಕು.
3. ‘ದೇವಸ್ಥಾನಗಳು ಖಂಡಿತವಾಗಿ ಮುಕ್ತಗೊಳ್ಳುವವು’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಎಲ್ಲಾ ಸಂತರು ಮತ್ತು ಮಹಂತರು ಕಾರ್ಯ ಮಾಡುತ್ತಿದ್ದಾರೆ.