ಮುಗ್ಧ ಹಿಂದೂಗಳ ಮನಸ್ಸಿನಲ್ಲಿ ಮೂರ್ತಿಪೂಜೆಯ ಬಗ್ಗೆ ವಿಷವನ್ನು ಹರಡುವುದು ಮತ್ತು ದೇವಸ್ಥಾನಗಳಲ್ಲಿ ಮಾಡುವ ಪೂಜೆ ‘ಸೈತಾನ’ ಆಗಿದೆಯೆಂದು ಸುಳ್ಳು ಪ್ರಚಾರ ಹರಡುವುದು !
ಬಿಲಾಸ್ಪುರ (ಛತ್ತೀಸಗಢ) – ಇಲ್ಲಿ ಮತ್ತೊಮ್ಮೆ ಕ್ರೈಸ್ತ ಮತಾಂತರದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಸಂಬಲಪುರಿ ಗ್ರಾಮದಲ್ಲಿ ಪಾದ್ರಿ ಸಂತೋಷ ಮೋಶೆ ಮತ್ತು ಅವನ ಪತ್ನಿ ಅನು ಮೋಶೆ ಬಡ ಮತ್ತು ನಿರುದ್ಯೋಗಿ ಹಿಂದೂಗಳಿಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಬಲವಂತವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಮಾಡುತ್ತಿದ್ದಾರೆ ಎಂದು ಮತಾಂತರಕ್ಕೆ ಬಲಿಯಾದ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದ ಪೊಲೀಸರು ಮೋಶೆ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
1. ಸಂಬಲಪುರಿಯ ನಿವಾಸಿ ಉತ್ತರಾಕುಮಾರ ಸಾಹು ಮಾತನಾಡಿ, ಅವರನ್ನು ಕ್ರೈಸ್ತರನ್ನಾಲು ಇಷ್ಟ ಇರಲಿಲ್ಲ; ಆದರೆ ಪಾದ್ರಿ ಮತ್ತು ಅವರ ಪತ್ನಿ ಅವರನ್ನು ನಿರಂತರವಾಗಿ ‘ಬ್ರೇನ ವಾಶ್’ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಮತ್ತು ಅತ್ತೆಯ ಮನೆಯವರಿಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಬಲವಂತ ಮಾಡಿದರು. ಈಗ ಅವರು ಅವರ ಬೆನ್ನು ಬಿದ್ದಿದ್ದಾರೆ’, ಎಂದು ಹೇಳಿದರು.
2. ಸಾಹು ಅವರು ಮಾತನಾಡಿ, ಪಾದ್ರಿ ಮತ್ತು ಅವರ ಪತ್ನಿ ಇಬ್ಬರೂ ಅನಾರೋಗ್ಯ ಪೀಡಿತರು, ಅಸಹಾಯಕರು, ಬಡವರು ಮತ್ತು ದುರ್ಬಲ ಹಿಂದೂಗಳನ್ನು ಗುರಿಯಾಗಿಸಿಕೊಂಡು, ಅವರನ್ನು ಆಮಿಷ ತೋರಿಸಿ, ಚರ್ಚ್‌ಗೆ ಕರೆದು ಪ್ರಾರ್ಥಿಸುವಂತೆ ಮಾಡಿ, ಅವರ ಮನೆಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸಿ, ನಂತರ ಸಹಾಯ ಮಾಡುವ ಭರವಸೆ ನೀಡುವ ಮೂಲಕ ಅವರನ್ನು ಮತಾಂತರಿಸುತ್ತಾರೆ’, ಎಂದು ಹೇಳಿದರು. (ಕ್ರೈಸ್ತರು ಎಷ್ಟೇ ಪಿತೂರಿ ನಡೆಸಿದರೂ ಹಿಂದೂಗಳಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದಾಗಿ, ಅವರು ಅದಕ್ಕೆ ಬಲಿಯಾಗುತ್ತಾರೆ, ಎನ್ನುವುದೂ ಸತ್ಯವಾಗಿದೆ ! – ಸಂಪಾದಕರು)
3. ವಿಶೇಷವಾಗಿ ಮಹಿಳೆಯರನ್ನು ಪ್ರಾರ್ಥನಾ ಸಭೆಗಳಲ್ಲಿ ಒಟ್ಟುಗೂಡಿಸಲಾಗುತ್ತದೆ ಮತ್ತು ಮೂರ್ತಿಪೂಜೆಯ ವಿರುದ್ಧ ವಿಷಕಾರುತ್ತಾರೆ. ದೇವಸ್ಥಾನಗಳಲ್ಲಿ ಪೂಜೆ ಮಾಡುವುದು ಯಾವ ರೀತಿ ತಪ್ಪಾಗಿದೆ ಮತ್ತು ಪ್ರಸಾದ ಸ್ವೀಕರಿಸುವುದು ‘ಸೈತಾನ’ನನ್ನು ಸ್ವೀಕರಿಸಿದಂತೆ ಎಂಬ ಕಲ್ಪನೆಯನ್ನು ಅವರ ಮನಸ್ಸಿನಲ್ಲಿ ತುಂಬಲಾಗುತ್ತದೆ. ನಂತರ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಲು ಮತ್ತು ದೇವರು-ದೇವತೆಗಳ ಚಿತ್ರಗಳಿರುವ ಟೈಲ್ಸ್ ಗಳನ್ನು ಕಿತ್ತುಹಾಕಲು ಹೇಳಲಾಗುತ್ತದೆ. (ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ! – ಸಂಪಾದಕರು)
4. ಕ್ರೈಸ್ತ ಧರ್ಮದಿಂದ ದೂರ ಸರಿಯಲು ಪ್ರಯತ್ನಿಸುವವರು ಯೇಸುವಿನ ಕೋಪಕ್ಕೆ ಹೆದರಬೇಕೆಂದು ಹೇಳಲಾಗುತ್ತದೆ.
5. ಉತ್ತರಾಕುಮಾರ ಸಾಹು ಅವರ ಪ್ರಕಾರ, ಕ್ರೈಸ್ತ ಧರ್ಮಪ್ರಚಾರಕರು ಈಗ ಅವರ ಬೆನ್ನುಹಿಂದೆ ಬಿದ್ದಿರುವುದರಿಂದ ಅವರು ಸಕ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. (ಜಾಗೃತ ಹಿಂದೂ ಆಗಿರುವ ಉತ್ತರಾಕುಮಾರ ಸಾಹು ಅವರಿಗೆ ಅಭಿನಂದನೆಗಳು ! – ಸಂಪಾದಕರು)
6. ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಬಲವಂತ ಮಾಡಿದ ಹೆಚ್ಚಿನ ದೂರುಗಳು ಚಿಂಗರಾಜಪಾರಾ, ಚಾಂಟಿಡಿಹ, ಸಿರಗಿಟಿ, ಪಾಚಪೆಡಿ, ಬೆಲಗಹನಾ, ರತನಪುರ, ಸಿಪತ್, ಸಾಕ್ರಿ, ಹಾಫಾ, ಮೋಪಕಾ, ಘುರು, ಟಿಫ್ರಾ ಮನ್ನಾಡೋಲ್, ಮಾಸ್ತೂರಿ, ಲಾಖರಾಮ ಮತ್ತು ಹಾರ್ದಿಕಾ ಟೋನಾ ಪ್ರದೇಶಗಳಿಂದ ಬಂದಿವೆ.
ಸಂಪಾದಕೀಯ ನಿಲುವು
|