ಶೇಖ್ ಹಸೀನಾ ಇವರ ತಂದೆಯ ಮನೆ ಧ್ವಂಸ ಹಾಗೂ ಸಹೋದರ ಸಂಬಂಧಿ ಮನೆ ನೆಲಸಮ !

ಬಾಂಗ್ಲಾದೇಶದಲ್ಲಿ ಪುನಃ ಹಿಂಸಾಚಾರ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಫೆಬ್ರುವರಿ ೫ ರಂದು ರಾತ್ರಿ ಮತ್ತೊಮ್ಮೆ ಬೃಹತ್ ಹಿಂಸಾಚಾರ ನಡೆದಿದೆ. ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಇವರ ತಂದೆ ಮತ್ತು ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜೀಬುರ್ ರಹಮಾನ್ ಇವರ ಢಾಕಾದಲ್ಲಿನ ‘ಧನಮೋಡಿ-೩೨’ ಇಲ್ಲಿಯ ಮನೆಯ ಮೇಲೆ ದಾಳಿ ನಡೆಸಿ ಬೃಹತ್ ಪ್ರಮಾಣದ ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಭದ್ರತಾ ಪಡೆ ಕೂಡ ಅಲ್ಲಿಯೇ ಇದ್ದರೂ ಅವರು ಈ ಘಟನೆ ತಡೆಯಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಖುಲನಾ ನಗರದಲ್ಲಿ ಶೇಖ ಹಸೀನಾ ಇವರ ಸಹೋದರ ಸಂಬಂಧಿ ಶೇಖ್ ಸೋಹೇಲ್ ಮತ್ತು ಶೇಖ್ ಜೆವೆಲ್ ಇವರ ಮನೆಗಳು ಬುಲ್ಡೋಜರ ಮೂಲಕ ನೆಲಸಮ ಮಾಡಲಾಗಿದೆ. ಶೇಖ ಹಸೀನಾ ಇವರ ಸಹೋದರ ಸಂಬಂಧಿ ಆಗಸ್ಟ್ ನಲ್ಲಿ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅವರ ಮನೆ ರಾತ್ರಿ ೯ ಗಂಟೆಗೆ ಧ್ವಂಸ ಮಾಡಿದ್ದಾರೆ. ವಿದ್ಯಾರ್ಥಿ ಚಳುವಳಿಯ ನಾಯಕರು ಮಹಾನಗರ ಪಾಲಿಕೆಯ ೨ ಬುಲ್ಡೋಜರ್ ತರಿಸಿ ಅವರ ಮನೆ ಕೆಡವಿದರು.

೧. ಶೇಖ್ ಹಸೀನಾ ಇವರ ಅವಾಮಿ ಲೀಗ್ ಪಕ್ಷದಿಂದ ಅವರ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಫೆಬ್ರುವರಿ ೬ ರಂದು ಬೀದಿಗೆ ಇಳಿಯಲು ಕರೆ ನೀಡಿದ್ದರು. ಶೇಖ ಹಸೀನಾ ಇವರ ವಿರುದ್ಧ ದಾಖಲಿಸಿರುವ ಮೊಕದ್ದಮೆ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಯನ್ನು ಖಂಡಿಸಿ ಪಕ್ಷದಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಶೇಖ್ ಹಸಿನಾ ರಾತ್ರಿ ೯ ಗಂಟೆಗೆ ಅವರ ಬೆಂಬಲಿಗರಿಗೆ ಆನ್ಲೈನ್ ಮಾರ್ಗದರ್ಶನ ಮಾಡುತ್ತಿದ್ದರು. ಇದರ ಹಿಂದೆ ‘೨೪ ರಿವೆಲ್ಯುಶನರಿ ಸ್ಟೂಡೆಂಟ್ ಜನತಾ’ ಹೆಸರಿನ ವಿದ್ಯಾರ್ಥಿ ಸಂಘಟನೆಯು ಇವರ ನಿಷೇಧದಲ್ಲಿ ರಾತ್ರಿ ೯ ಗಂಟೆಗೆ ‘ಬುಲ್ಡೋಜರ್ ಫೆರಿ’ ನಡೆಸಲಾಗುವುದು ಎಂದು ಘೋಷಣೆ ನೀಡಿದ್ದು. ಶೇಖ್ ಹಸೀನಾ ಇವರ ತಂದೆಯ ಮನೆ ನೆಲಸಮ ಮಾಡಲಾಗುವುದೆಂದು ಹೇಳಿದ್ದರು.

೨. ಆಗಸ್ಟ್ ೧೫, ೧೯೭೫ ರಂದು ಈ ಮನೆಯಲ್ಲಿ ‘ಬಂಗಬಂಧು’ ಅವರ ಪತ್ನಿ, ಹುಡುಗ, ಸೊಸೆ ಮತ್ತು ಅನೇಕ ಸಂಬಂಧಿಕರ ಹತ್ಯೆ ಮಾಡಲಾಗಿತ್ತು. ಅದರ ನಂತರ ಮನೆಯು ಸ್ಮಾರಕ ಸಂಗ್ರಹಾಲಯದಲ್ಲಿ ರೂಪಗೊಂಡಿತು. ಈ ಹಿಂದೆ ಆಗಸ್ಟ್ ೫, ೨೦೨೪ ರಲ್ಲಿ ಶೇಖ ಹಸೀನಾ ದೇಶ ತೊರೆದ ನಂತರ ಈ ಮನೆಯ ಮೇಲೆ ಗುಂಪಿನಿಂದ ದಾಳಿ ನಡೆದಿತ್ತು. ಅದನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿತ್ತು. ಅಂದಿನಿಂದ ಈ ಮನೆ ಪಾಳು ಬಿದ್ದಿತ್ತು.

ನೀವು ಮನೆ ಕೆಡವಬಹುದು; ಆದರೆ ಇತಿಹಾಸ ಅಳಿಸಲು ಸಾಧ್ಯವಿಲ್ಲ ! – ಶೇಖ್ ಹಸೀನಾ

ಶೇಖ್ ಹಸೇನಾ

ನಾವು ಸಹೋದರಿಯರು (ಶೇಖ್ ಹಸಿನಾ ಮತ್ತು ಅವರ ತಂಗಿ ಶೇಖ್ ರೆಹಾನ ಇವರ ಜೊತೆಗೆ ಭಾರತಕ್ಕೆ ಬಂದಿದ್ದರು.) ಧನಮೋಡಿಯ ಆ ನೆನಪುಗಳಿಗಾಗಿ ಬದುಕುತ್ತಿದ್ದೇವೆ, ಈಗ ಪ್ರತಿಭಟನಾಕಾರರು ಆ ಮನೆಯನ್ನು ದ್ವಂಸಗೊಳಿಸುತ್ತಿದ್ದಾರೆ. ಕಳೆದ ಬಾರಿ ಅವರು ಈ ಮನೆಗೆ ಬೆಂಕಿ ಹಚ್ಚಿದರು ಮತ್ತು ಈಗ ಮನೆಯನ್ನು ಕೆಡವಿದ್ದಾರೆ. ಅವರು ಈ ಮನೆ ಕೆಡವಬಹುದು, ಆದರೆ ಇತಿಹಾಸ ಅಳಿಸುವಲ್ಲಿ ಅವರು ಸಫಲರಾಗುವುದಿಲ್ಲ, ಎಂದು ಶೇಖ ಹಸೀನಾ ಇವರು ಮನೆಯ ಮೇಲೆ ನಡೆದಿರುವ ದಾಳಿಯ ಬಗ್ಗೆ ಹೇಳಿಕೆ ನೀಡಿದರು. ಅವರು ಅವರ ಪಕ್ಷದ ಕಾರ್ಯಕರ್ತರಿಗೆ ಆನ್ಲೈನ್ ಮಾರ್ಗದರ್ಶನ ಮಾಡುವಾಗ ಮಾತನಾಡುತ್ತಿದ್ದರು.

ಹಸೀನಾ ಮಾತು ಮುಂದುವರಿಸಿ, ಮಹಮ್ಮದ್ ಯುನೂಸ್ ಮತ್ತು ಅವರ ಸರಕಾರದಿಂದ ನನ್ನನ್ನು ಮತ್ತು ನನ್ನ ತಂಗಿಯನ್ನು ಕೊಲ್ಲುವ ಪ್ರಯತ್ನ ನಡೆಯಿತು. ಅಲ್ಲಾ ನನ್ನನ್ನು ಈ ದಾಳಿಯ ನಂತರ ಕೂಡ ಜೀವಂತ ಇರಿಸಿದ್ದರೆ, ನಾನು ಖಂಡಿತವಾಗಿಯೂ ಏನಾದರೂ ಒಳ್ಳೆಯದನ್ನು ಮಾಡಿರಬಹುದು, ಅದು ನಡೆಯದಿದ್ದರೆ ಆಗ ನಾನು ಇಷ್ಟು ಸಾರಿ ಸಾವನ್ನು ಹೇಗೆ ಸೋಲಿಸಬಹುದು ? ನಾನು ಬಾಂಗ್ಲಾದೇಶದ ಜನರಿಂದ ನ್ಯಾಯ ಕೇಳುತ್ತೇನೆ. ನಾನು ನನ್ನ ದೇಶಕ್ಕಾಗಿ ಏನು ಮಾಡಲೇ ಇಲ್ಲವೇ ? ಹಾಗಾದರೆ ಇಷ್ಟು ಅವಮಾನ ಏಕೆ ? ಎಂದು ಕೇಳಿದ್ದಾರೆ.