ನಿರಂಜನಿ ಅಖಾಡದಲ್ಲಿ ಮಹಾಮಂಡಲೇಶ್ವರನಾಗಿ ಸಾಧ್ವಿ ಮಂಜು ಅವರ ಪಟ್ಟಾಭಿಷೇಕ !

ಪ್ರಯಾಗರಾಜ ಕುಂಭಮೇಳ 2025

ಮಹಾಮಂಡಲೇಶ್ವರ ಮಂಜು ಗಿರಿ ದೇವಿ

ಪ್ರಯಾಗರಾಜ್, ಫೆಬ್ರವರಿ 2 (ಸುದ್ದಿ) – ಆನಂದ್ ಅಖಾಡಾದ ಸಾಧ್ವಿ ಮಂಜು ಗಿರಿ ದೇವಿಯನ್ನು ನಿರಂಜನಿ ಅಖಾಡಾದಲ್ಲಿ ಮಹಾಮಂಡಲೇಶ್ವರರಾಗಿ ಪಟ್ಟಾಭಿಷೇಕ ಮಾಡಲಾಯಿತಯು. ಪಟ್ಟಾಭಿಷೇಕ ಸಮಾರಂಭವು ನಿರಂಜನಿ ಅಖಾಡದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ನಡೆಯಿತು. ಈ ಸಂದರ್ಭದಲ್ಲಿ, ನಿರಂಜನಿ ಅಖಾರದ ಪೀಠಾಧೀಶ್ವರ, ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಸಾನಂದ ಪುರಿ ಮಹಾರಾಜ, ಅಖಿಲ ಭಾರತಿಯ ಅಖಾಡಾ ಪರಿಷತ್ತಿನ ಅಧ್ಯಕ್ಷ ಶ್ರೀ ಮಹಾಂತ ರವೀಂದ್ರಪುರಿ ಮಹಾರಾಜ, ಆನಂದ ಅಖಾಡಾದ ಪೀಠಾಧೀಶ್ವರ ಶ್ರೀ ಬಾಲಕಾನಂದ ಮಹಾರಾಜ ಮತ್ತು ಇತರ ಸಂತರು ಮತ್ತು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರು, ಮಹಂತರು, ಮಹಾಮಂಡಲೇಶ್ವರರು, ಮುಂತಾದವರು ಸಾಧ್ವಿ ಮಂಜು ಅವರಿಗೆ ಹೂ ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಹಾಮಂಡಲೇಶ್ವರ ಮಂಜು ದೇವಿ ಗಿರಿ ಇವರ ಮೇಲೆ ಹೂಮಳೆಯನ್ನು ಸುರಿಸಲಾಯಿತು.