ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್, ಫೆಬ್ರವರಿ 2 (ಸುದ್ದಿ) – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರದರ್ಶನದಲ್ಲಿ ಅತ್ಯಂತ ಸುಂದರವಾದ ಮತ್ತು ಆಳವಾದ ಮಾಹಿತಿಯನ್ನು ನೀಡುವ ವೈಜ್ಷಾನಿಕ ಪದ್ದತಿಯಲ್ಲಿ ಅರ್ಥವಾಗುವಂತೆ ಶಾಸ್ತ್ರಗಳ ಮಹತ್ವವನ್ನು ವಿವರಿಸುವ ಪ್ರದರ್ಶನವನ್ನು ಇರಿಸಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದಾರೆ. ಇದು ಮಾನವೀಯತೆಗೆ ಸಹಾಯ ಮಾಡುವಲ್ಲಿ ಬಹಳ ಸಹಾಯ ಮಾಡುತ್ತದೆ ಮತ್ತು ವ್ಯಾಪಕವಾದ ಕಾರ್ಯವನ್ನು ಮಾಡುತ್ತದೆ ಎಂದು ಮಥುರಾದ ರಾಮಾಶ್ರಮ ಸಂಸ್ಥೆಯ ಮುಖ್ಯಸ್ಥ ಪೂ. ಅಮಿತ ಕುಮಾರಜಿ ಇವರು ಹೇಳಿದರು. ಅವರು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಕ್ಷೆಗೆ ಭೇಟಿ ನೀಡಿದರು. ಪ್ರದರ್ಶನವನ್ನು ನೋಡಿದ ನಂತರ, ಅವರು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯವನ್ನು ಬಹಳ ಶ್ಲಾಘಿಸಿದರು.

ಪೂ. ಅಮಿತ ಕುಮಾರಜಿ ಇವರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರದರ್ಶನಕ್ಕೆ ಭೇಟಿ ನೀಡಿದರು ಮತ್ತು ಪ್ರದರ್ಶನದ ಬಗ್ಗೆ ತಿಳಿದುಕೊಂಡರು. ಈ ಸಮಯದಲ್ಲಿ, ಅವರು ಪ್ರದರ್ಶನದಲ್ಲಿದ್ದ ಕೆಲವು ಆಧ್ಯಾತ್ಮಿಕ ಸಂಶೋಧನಾ ಫಲಕಗಳ ಛಾಯಾಚಿತ್ರಗಳನ್ನು ತೆಗೆದರು ಮತ್ತು ನಂತರ, ಸ್ವಲ್ಪ ಸಮಯದ ನಂತರ, ಅವರು ಹಲವಾರು ಸಾಧಕರನ್ನು ತಮ್ಮೊಂದಿಗೆ ಕರೆತಂದು ಪ್ರದರ್ಶನವನ್ನು ತೋರಿಸಿದರು.
ಅಸ್ಸಾಂನ ಶ್ರೀ ಓನಿಐಟಿ ಸತ್ರದ ಸಾಧಕರಿಂದ ಪ್ರದರ್ಶನಕ್ಕೆ ಭೇಟಿ !
ಅಸ್ಸಾಂನ ಮಜುಲಿಯಲ್ಲಿರುವ ‘ಶ್ರೀ ಓಣಿ ಐಟಿ ಸತ್ರ’ ಈ ಪಂಥದ ಸಾಧಕರು ಪ್ರದರ್ಶನಕ್ಕೆ ಭೇಟಿ ನೀಡಿ ಪ್ರದರ್ಶನವನ್ನು ಚಿತ್ರೀಕರಿಸಿದರು. ಅಸ್ಸಾಂನಲ್ಲಿರುವ ‘ಸತ್ರ’ ಅಂದರೆ ವೈಷ್ಣವ ಆರಾಧಕರ ಕೇಂದ್ರಗಳಾಗಿವೆ, ಇವು 15 ನೇ ಶತಮಾನದಲ್ಲಿ ಸ್ಥಾಪನೆಯಾಗಿತ್ತು. ಇಲ್ಲಿ ವಿಷ್ಣುವಿನ ಭಕ್ತಿಯ ಜೊತೆಗೆ ನೃತ್ಯ ಮತ್ತು ನಾಟಕಗಳನ್ನು ಸಹ ಅಭ್ಯಾಸ ಮಾಡಲಾಗುತ್ತದೆ.