ಪ್ರಧಾನಿ ಮೋದಿ ಇವರಿಂದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್ – ಪ್ರಯಾಗರಾಜ್ ಮಹಾಕುಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದ ಮಂತ್ರಗಳನ್ನು ಪಠಿಸುತ್ತಾ ತ್ರಿವೇಣಿ ಸಂಗಮದಲ್ಲಿ ಭಕ್ತಿಪೂರ್ವಕ ಸ್ನಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಮೊದಲು ವಿಧಿವತ್ತಾಗಿ ಪೂಜೆಯನ್ನು ನೆರವೇರಿಸಿದರು.

ಸಂಗಮಕ್ಕೆ ಪ್ರವೇಶಿಸುವ ಮೊದಲು, ಪ್ರಧಾನಮಂತ್ರಿಯವರು ಮೊದಲು ಭಕ್ತಿಯಿಂದ ನೀರನ್ನು ಮುಟ್ಟಿ ಆಶೀರ್ವಾದ ಪಡೆದರು ಮತ್ತು ನಂತರ ಸೂರ್ಯನಿಗೆ ಅರ್ಘ್ಯ ಮತ್ತು ತರ್ಪಣ ಅರ್ಪಿಸಿದರು. ಅವರು ತ್ರಿವೇಣಿ ಸಂಗಮದಲ್ಲಿ ವೇದ ಮಂತ್ರಗಳನ್ನು ಪಠಿಸುತ್ತಾ ಅಕ್ಷತೆ, ನೈವೇದ್ಯ, ಹೂವುಗಳು ಮತ್ತು ಹಣ್ಣುಗಳನ್ನು ಅರ್ಪಿಸುವ ಮೂಲಕ ಪವಿತ್ರ ನದಿಗಳ ಆರತಿಯನ್ನು ಮಾಡಿದರು.

ಪ್ರಧಾನಮಂತ್ರಿಯವರು, ಪ್ರಪಂಚದಾದ್ಯಂತದ ಮಹಾಕುಂಭದಲ್ಲಿ ನೆರೆದಿದ್ದ ಭಕ್ತರಿಗೆ ‘ಶ್ರೇಷ್ಠ ಭಾರತ’ ಮತ್ತು ‘ವಸುಧೈವ ಕುಟುಂಬಕಂ’ (‘ಇಡೀ ಪೃಥ್ವಿ ಒಂದು ಕುಟುಂಬ’) ಸಂದೇಶವನ್ನು ನೀಡಿದರು.

ಪ್ರಧಾನಿಯವರ ಸಮ್ಮುಖದಲ್ಲಿಯೂ ಭಕ್ತರಿಂದ ಸ್ನಾನ

ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮ ತಲುಪಿದಾಗ, ಸಾಮಾನ್ಯ ಭಕ್ತರು ಸಹ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದರು. ಜನರು ಸ್ನಾನ ಮಾಡುವುದನ್ನು ನಿಲ್ಲಿಸಲಿಲ್ಲ. ಸಂಗಮ ನದಿಯ ದಡದಲ್ಲಿ ಲಕ್ಷಾಂತರ ಜನರು ‘ಹರ ಹರ ಗಂಗೆ’ ಘೋಷಣೆಗಳನ್ನು ಕೂಗಲಾಯಿತು.