ಪಾಕಿಸ್ತಾನಿ ಪ್ರಧಾನಿ ಶಹಬಾಜ ಷರೀಫರಿಂದ ಸಾರ್ವಜನಿಕ ಸಭೆಯಲ್ಲಿ ಸ್ವೀಕೃತಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಜಿಹಾದಿ ಭಯೋತ್ಪಾದನೆಯ ಕಾರ್ಖಾನೆ ಎಂದು ಪ್ರಸಿದ್ಧವಾಗಿದೆ; ಆದರೆ ಅದು ಇದನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಈಗ ಪಾಕಿಸ್ತಾನದ ಪ್ರಧಾನಿ ಶಹಬಾಜ ಷರೀಫ ಇದನ್ನು ಒಪ್ಪಿಕೊಂಡಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಹಿಂದಿನ ಸರಕಾರಗಳು ದೇಶಕ್ಕೆ ಭಯೋತ್ಪಾದನೆಯನ್ನು ತಂದಿವೆ ಎಂದು ಹೇಳಿದರು.
ಪ್ರಧಾನಿ ಷರೀಫ ಮಾತನಾಡಿ, 2018 ರ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಾಶವಾಗಿತ್ತು. ಭಯೋತ್ಪಾದನೆಯಿಂದ 80 ಸಾವಿರ ಪಾಕಿಸ್ತಾನಿಯರು ಹುತಾತ್ಮರಾಗಿದ್ದಾರೆ. ಭಯೋತ್ಪಾದನೆಯು ಪಾಕಿಸ್ತಾನದ ಅರ್ಥವ್ಯವಸ್ಥೆಗೆ ಭರಿಸಲಾಗದಷ್ಟು ಹಾನಿಯನ್ನುಂಟು ಮಾಡಿದೆ. ಪಾಕಿಸ್ತಾನಿ ಸೈನಿಕರ ತ್ಯಾಗದ ನಂತರ ಭಯೋತ್ಪಾದನೆ ಸಂಪೂರ್ಣವಾಗಿ ನಷ್ಟವಾಗಿತ್ತು. ದುರದೃಷ್ಟವಶಾತ್, ಕೆಲವು ವರ್ಷಗಳ ಹಿಂದೆ, ಒಂದು ಸರಕಾರ (ಇಮ್ರಾನ್ ಖಾನ್) ಅವರಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿತು ಮತ್ತು ಅವರನ್ನು ‘ಶಾಂತಿದೂತ’ ಎಂದು ಹೇಳಿತು. ಪಾಕಿಸ್ತಾನಕ್ಕೆ ಇದಕ್ಕಿಂತ ದೊಡ್ಡ ಶತ್ರು ಇನ್ಯಾರೂ ಇರಲು ಸಾಧ್ಯವಿಲ್ಲ. (ವಾಸ್ತವವಾಗಿ, ಇಮ್ರಾನ ಖಾನ ಅವರೇ ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದನೆಗೆ ಸರಕಾರವೇ ಉತ್ತೇಜನ ನೀಡಿದೆ ಎಂದು ಮೊದಲು ಒಪ್ಪಿಕೊಂಡವರು. ಅಫ್ಘಾನ್ ವಿಷಯದಲ್ಲಿ ಸಹಾಯ ಮಾಡಲು ಅಮೇರಿಕದಿಂದ ಹಣವನ್ನು ತೆಗೆದುಕೊಂಡು ಭಯೋತ್ಪಾದಕರಿಗೆ ಪೋಷಿಸಲಾಗುತ್ತಿತ್ತು. ಮತ್ತೊಂದೆಡೆ ಇದೇ ಹಣದಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆ ನಡೆಸಿತು. ಷರೀಫ್ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ? – ಸಂಪಾದಕರು)
ಸಂಪಾದಕೀಯ ನಿಲುವು
|