ದಕ್ಷಿಣ ಆಫ್ರಿಕಾ: ಹಿಂದೂ ವಿದ್ಯಾರ್ಥಿಯ ಕೈಯಲ್ಲಿನ ಪವಿತ್ರ ದಾರ ಕತ್ತರಿಸಿದ ಶಿಕ್ಷಕ; ಹಿಂದುಗಳಿಂದ ವಿರೋಧ

ಶಿಕ್ಷಕನ ವರ್ತನೆಯನ್ನು ಖಂಡಿಸಿದ ಶಿಕ್ಷಣ ಇಲಾಖೆ

ಜೋಹಾನ್ಸ್ ಬರ್ಗ್ (ದಕ್ಷಿಣ ಆಫ್ರಿಕಾ) – ದಕ್ಷಿಣ ಆಫ್ರಿಕಾದಲ್ಲಿನ ಕ್ವಾಝುಲು – ನತಾಲ್ ಪ್ರದೇಶದಲ್ಲಿನ ಡ್ರೈಕೆನ್ಸ್ ಬರ್ಗ ಮಾಧ್ಯಮಿಕ ಶಾಲೆಯಲ್ಲಿ ಓರ್ವ ಶಿಕ್ಷಕನು ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿಗೆ ಕಟ್ಟಿದ್ದ ಪವಿತ್ರ ದಾರವನ್ನು ಕತ್ತರಿಸಿರುವ ಘಟನೆ ವರದಿಯಾಗಿದೆ. ಈ ಶಾಲೆಯಲ್ಲಿ ಯಾವುದೇ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಿನ್ಹೆ ಧರಿಸಲು ನಿಷೇಧವಿದೆ ಎಂದು ಹೇಳಲಾಗಿದೆ. ಈ ಘಟನೆಯ ನಂತರ ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಮಹಾಸಭೆಯು ಅಲ್ಲಿನ ಶಿಕ್ಷಣ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

೧. ನಾವು ಶಾಲೆಯಲ್ಲಿ ನಡೆದ ಈ ಧಾರ್ಮಿಕ ಅಸಹಿಷ್ಣುತೆಯ ಘಟನೆಯ ವಿಚಾರಣೆ ನಡೆಸುತ್ತಿದ್ದೇವೆ; ಆದರೆ ಯಾವ ವಿದ್ಯಾರ್ಥಿಯ ಜೊತೆಗೆ ಈ ಘಟನೆ ನಡೆದಿದೆ ಅವನು ಮುಂದೆ ಬರಲು ಹೆದರುತ್ತಿರುವುದರಿಂದ ವಿಚಾರಣೆಯಲ್ಲಿ ಅಡಚಣೆ ಬರುತ್ತಿದೆ. ಶಾಲೆಯಲ್ಲಿ ನಡೆದಿರುವ ಕಿರುಕುಳದಿಂದಾಗಿ ಅವನಿಗೆ ಬಹಳ ಮಾನಸಿಕ ಕಿರುಕುಳ ಅನುಭವಿಸಬೇಕಾಯಿತು ಎಂದು ಹಿಂದೂ ಮಹಾಸಭೆ ಹೇಳಿದೆ.

೨ .ಕ್ವಾಝುಲು – ನತಾಲ್ ಪ್ರಾಂತದ ಶಿಕ್ಷಣ ಇಲಾಖೆಯ ವಕ್ತಾರ ಮುಝೀ ಮಹಾಲಾಂಬಿ ಅವರು ಈ ಬಗ್ಗೆ ಮಾತನಾಡಿ, ಸಂವಿಧಾನ]ವು ನಮ್ಮ ದೇಶದ ಸರ್ವೋಚ್ಚ ಕಾನೂನಾಗಿದ್ದು ಅದರ ವಿರುದ್ಧವಿರುವ ಶಾಲೆಯ ಯಾವುದೇ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಶಿಕ್ಷಣ ಇಲಾಖೆಯು ಆಗ್ರಹಿಸುತ್ತದೆ. ಯಾವುದೇ ವಿದ್ಯಾರ್ಥಿಗೂ ಕೂಡ ಅವನ ಧಾರ್ಮಿಕ ಆಯ್ಕೆಗಾಗಿ ಶಿಕ್ಷೆ ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ.