Salwan Momika Quran Burning: ಸಲ್ವಾನ್ ಮೊಮಿಕಾಗೆ ಕುರಾನ್ ಸುಟ್ಟು ಶ್ರದ್ಧಾಂಜಲಿ !

ರಾಜಕೀಯ ನಾಯಕ ರಾಸ್ಮಸ್ ಪಲುಡನ್ (38 ವರ್ಷ)

ಕೋಪನ್ ಹ್ಯಾಗನ್ (ಸ್ವೀಡನ್) – ಕೆಲವು ದಿನಗಳ ಹಿಂದೆ ಸ್ವೀಡನ್ ನಲ್ಲಿ ಅಜ್ಞಾತನಿಂದ ಸಲ್ವಾನ್ ಮೊಮಿಕಾ ಅವರನ್ನು ಅವರ ಮನೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರು ಪದೇ ಪದೇ ಕುರಾನ್ ಅನ್ನು ಸುಟ್ಟು ಹಾಕಿದ್ದಕ್ಕಾಗಿ ಅವರನ್ನು ಕೊಲ್ಲಲಾಯಿತು ಎಂದು ಹೇಳಲಾಗುತ್ತದೆ. ಮೊಮಿಕಾಗೆ ಶ್ರದ್ಧಾಂಜಲಿ ಅರ್ಪಿಸಲು ರಾಜಕೀಯ ನಾಯಕ ರಾಸ್ಮಸ್ ಪಲುಡನ್ (38 ವರ್ಷ) ಇಲ್ಲಿನ ಟರ್ಕಿಶ್ ರಾಯಭಾರ ಕಚೇರಿಯ ಮುಂದೆ ಕುರಾನ್ ಅನ್ನು ಸುಟ್ಟುಹಾಕಿದರು. ಈ ಸಂದರ್ಭದಲ್ಲಿ, ಪಲುಡನ್ ಅವರು ಸಲ್ವಾನ್ ಮೋಮಿಕಾ ಅವರನ್ನು ಬೆಂಬಲಿಸಿ ಭಾಷಣ ಮಾಡಿದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಪಲುಡನ್ ಈ ಹಿಂದೆಯೂ ಹಲವು ಬಾರಿ ಕುರಾನ್ ಅನ್ನು ಸುಟ್ಟುಹಾಕಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ಶಿಕ್ಷೆಯೂ ಆಗಿದೆ. ಪಲುಡನ್ ಮುಸ್ಲಿಮರಿಂದ ನಿರಂತರವಾಗಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.

ಪಲುಡನ್ ಮಾತನಾಡುತ್ತಾ, ನಾನು ಕೋಪನ್ ಹ್ಯಾಗನ್ ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯ ಮುಂದೆ ಕುರಾನ್ ಹಿಡಿದು ನಿಂತಿದ್ದೇನೆ. ನೀವು ನೋಡಬಹುದು. ಇಲ್ಲಿ ಕುರಾನ್ ಈಗಾಗಲೇ ಸುಡುತ್ತಿದೆ. ಇದು ಸಲ್ವಾನ್ ಮೋಮಿಕಾ ಅವರ ಬಲಿದಾನದ ಮತ್ತು ಇಸ್ಲಾಂ ಧರ್ಮದ ಟೀಕೆಯ ಸ್ಮರಣಾರ್ಥವಾಗಿದೆ. ಈ ದೊಡ್ಡ ಪುಸ್ತಕವನ್ನು ಸುಟ್ಟುಹಾಕಲು ನನಗೆ ತುಂಬಾ ಸಂತೋಷವಾಯಿತು. ನಮ್ಮ ದೇಶದಲ್ಲಿ ಮುಸ್ಲಿಮರು ಎಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ, ಅವರು ಎಲ್ಲಿಂದ ಬಂದರೋ ಅಲ್ಲಿಗೆ ಹಿಂತಿರುಗಬೇಕು. ಇಲ್ಲದಿದ್ದರೆ ನಮಗೆ ಕಷ್ಟವನ್ನು ಅನುಭವಿಸಬೇಕಾಗುತ್ತಿದೆ ಮತ್ತು ನಮ್ಮ ಧರ್ಮವನ್ನು ತ್ಯಜಿಸಬೇಕಾಗುತ್ತದೆ. ಅವರು ನಮ್ಮನ್ನು ತಮ್ಮ ಮಾತುಗಳಿಂದಲ್ಲ, ಹಿಂಸೆಯಿಂದ ಮತಾಂತರ ಮಾಡುತ್ತಾರೆ’, ಎಂದು ಹೇಳಿದರು.