Zaheek Tanveer Released : ಪಾಕಿಸ್ತಾನದ ವಿರುದ್ಧ ‘ಪೋಸ್ಟ್’ ಪ್ರಸಾರ ಮಾಡಿದ್ದಕ್ಕೆ ಒಂದು ವರ್ಷದಿಂದ ಜೈಲಿನಲ್ಲಿದ್ದ ಝಹೇಕ್ ತನ್ವೀರ್ ಬಿಡುಗಡೆ

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡಿರುವ ಪ್ರಕರಣದಲ್ಲಿ  ಬಂಧನ

ರಿಯಾದ – ಸೌದಿ ಅರೇಬಿಯಾದಲ್ಲಿ ಒಂದು ವರ್ಷ ಜೈಲಿನಲ್ಲಿದ್ದ ಭಾರತೀಯ ಮಾನವ ಹಕ್ಕುಗಳ ಕಾರ್ಯಕರ್ತ ಝಾಹೇಕ್ ತನ್ವೀರ್ ಇವರನ್ನು ಬಿಡುಗಡೆಗೊಳಿಸಲಾಗಿದೆ. ಪಾಕಿಸ್ತಾನದ ವಿರುದ್ಧ ‘ಪೋಸ್ಟ್’ ಪ್ರಸಾರ ಮಾಡಿದ್ದರಿಂದ ಝಾಹೇಕ್ ತನ್ವೀರ್ ಇವರನ್ನು ಡಿಸೆಂಬರ್ ೨೦೨೩ ರಂದು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು. ಝಾಹೇಕ್ ಇವರು ಅವರ ಬಿಡುಗಡೆಗಾಗಿ ಪ್ರಯತ್ನ ಮಾಡಿರುವ ಭಾರತೀಯ ರಾಯಭಾರಿಗಳಿಗೆ ಧನ್ಯವಾದ ಹೇಳಿದ್ದಾರೆ. ಝಾಹೇಕ್ ಇವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಮತ್ತು ಭಾರತೀಯ ರಾಯಭಾರಿ ಸುಹೇಲ ಏಜಾಜ್ ಖಾನ್ ಇವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

೧. ೩೯ ವರ್ಷದ ಝಾಹೇಕ್ ತನ್ವೀರ್ ಇವರು, ಪಾಕಿಸ್ತಾನದ ‘ಇಂಟರ್ ಸರ್ವಿಸಸ್ ಇಂಟಲಿಜೆನ್ಸ್’ ಎಂದರೆ ಐ.ಎಸ್.ಐ. ನ ದೂರಿನ ನಂತರ ಡಿಸೆಂಬರ್ ೨೦೨೩ ರಲ್ಲಿ ಸೌದಿ ಪೊಲೀಸರು ಅವರನ್ನು ಬಂಧಿಸಿದ್ದರು.

೨. ಅವರ ಕುರಿತು ಪಾಕಿಸ್ತಾನದ ರಾಜಕೀಯ ವ್ಯವಸ್ಥೆ  ಅಶಕ್ತ ಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪವಿತ್ತು. ಸೌದಿ ಅಧಿಕಾರಿಗಳು ಝಾಹೇಕ್ ಇವರ ಪೋಸ್ಟ್ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಾಜಕೀಯ ಸಂಬಂಧಕ್ಕೆ ಧಕ್ಕೆ ತರುವುದಾಗಿದೆ’, ಎಂದು ಹೇಳಿ ಅವರನ್ನು ಬಂಧಿಸಿದ್ದರು.

೩. ಝಾಹೇಕ್ ತನ್ವೀರ್ ಇವರು, ‘ನನ್ನ ‘ಪೋಸ್ಟ್’ ನ ಉದ್ದೇಶ ರಾಜಕೀಯ ಬಿರುಕು ಮೂಡಿಸುವುದು ಆಗಿರಲಿಲ್ಲ. ನಾನು ಕೇವಲ ಪಾಕಿಸ್ತಾನದಲ್ಲಿ ಕಟ್ಟರತಾವಾದಕ್ಕೆ ಪ್ರೋತ್ಸಾಹ ನೀಡುವ ಬಗ್ಗೆ ಬರೆದಿದ್ದೆ,’ ಎಂದು ಹೇಳಿದರು.

೪. ಝಾಹೇಕ್ ತನ್ವೀರ್ ಇವರು ಮೂಲತಃ ಭಾರತದಲ್ಲಿನ ಭಾಗ್ಯನಗರ (ಹೈದರಾಬಾದ್) ಇಲ್ಲಿಯ ನಿವಾಸಿಯಾಗಿದ್ದಾರೆ. ಬಂಧಿಸುವ ಮೊದಲು ೧೩ ವರ್ಷಗಳಿಂದ ಅವರು ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದರು.

ಸಂಪಾದಕೀಯ ನಿಲುವು

ಸೌದಿ ಅರೇಬಿಯಾ ೨ ದೇಶದ ನಡುವೆ ಬಿರುಕು ನಿರ್ಮಾಣ ಮಾಡುವ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಜೈಲಿಗೆ ಕಳಿಸುತ್ತೇವೆ ಆದರೆ ಭಾರತ ಹಿಂದೂ ಧರ್ಮ, ಹಿಂದೂಗಳ ದೇವತೆಯ ಬಗ್ಗೆ ವಿಡಂಬನಾತ್ಮಕ ‘ಪೋಸ್ಟ್’ ಮಾಡುವವರ ವಿರುದ್ಧ ಏನನ್ನು ಮಾಡುವುದಿಲ್ಲ, ಇದು ಖೇದಕರವಾಗಿದೆ !