ವಾಷಿಂಗ್ಟನ (ಅಮೇರಿಕಾ) – ಅಮೇರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ನಂತರ ಅಮೇರಿಕದಲ್ಲಿ ಅಕ್ರಮವಾಗಿ ವಾಸಿಸುವ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಇದರಲ್ಲಿ ಭಾರತೀಯರೂ ಸೇರಿದ್ದಾರೆ. ಅಂತಹ ಭಾರತೀಯ ವಲಸಿಗರನ್ನು ಅಮೇರಿಕದ ಮಿಲಿಟರಿ ವಿಮಾನವು ಭಾರತದೆಡೆಗೆ ಕರೆದುಕೊಂಡು ಬರುತ್ತಿದೆ. ಈ ವಿಮಾನದಲ್ಲಿ ಎಷ್ಟು ಜನರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರು, ಈಗಾಗಲೇ ಯಾವುದೇ ದಾಖಲೆಗಳು ಹೊಂದಿರದ ಮತ್ತು ಅಮೇರಿಕದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ನ್ಯಾಯೋಚಿತ ಮಾರ್ಗಗಳ ಮೂಲಕ ಭಾರತಕ್ಕೆ ಮರಳಿ ಕರೆತರಲು ಭಾರತದ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಿಂದ ಈ ರೀತಿಯ ವಿಮಾನಗಳು ಬಾಂಗ್ಲಾದೇಶ ಮತ್ತು ಮ್ಯಾನ್‌ಮಾರ್‍ಗೆ ಯಾವಾಗ ಹೋಗಲಿದೆ ? ಎನ್ನುವುದು ಪ್ರಶ್ನೆಯಾಗಿದೆ. ಟ್ರಂಪ್ ಅವರು ಆದೇಶ ಹೊರಡಿಸಿದ ನಂತರ ಕೆಲವೇ ದಿನಗಳಲ್ಲಿ ಅಮೇರಿಕ ನೇರ ಕ್ರಮ ಕೈಗೊಂಡಿತು; ಆದರೆ, ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಭಾರತದ ಜನರು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಬೇಕೆಂದು ಒತ್ತಾಯಿಸುತ್ತಿದ್ದರೂ, ಸರಕಾರವು ಯಾವುದೇ ಕಠಿಣ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬುದು ಅಷ್ಟೇ ಸತ್ಯ ! |