ವಸಂತ ಪಂಚಮಿಯ ದಿನದಂದು ಧಾರ (ಮಧ್ಯಪ್ರದೇಶ )ನ ಭೋಜಶಾಲೆಯಲ್ಲಿ ಪೂಜೆ ನೆರವೇರಿತು

ಸಾವಿರಾರು ಹಿಂದೂಗಳ ಉಪಸ್ಥಿತಿ

ಧಾರ (ಮಧ್ಯಪ್ರದೇಶ) – ಇಲ್ಲಿ ಫೆಬ್ರವರಿ 3 ರಂದು, ವಸಂತ ಪಂಚಮಿಯ ನಿಮಿತ್ತ ಹಿಂದೂಗಳು ಭೋಜಶಾಲೆಯಲ್ಲಿ ಪೂಜೆ ಮತ್ತು ಯಜ್ಞವನ್ನು ಆಯೋಜಿಸಿದರು. ಈ ಕಾರ್ಯಕ್ರಮದ ಭದ್ರತೆಗಾಗಿ ಆಡಳಿತವು 700 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಮತ್ತು ಕಾರ್ಯಕ್ರಮದ ನಿಯೋಜನೆಗಾಗಿ 40 ಅಧಿಕಾರಿಗಳನ್ನು ನಿಯೋಜಿಸಿತ್ತು. ಇಲ್ಲಿ 4 ದಿನಗಳ ವಸಂತೋತ್ಸವವನ್ನು ಆಯೋಜಿಸಲಾಗುತ್ತಿದೆ. ಇದರ ಅಡಿಯಲ್ಲಿ ಮಾತೃಶಕ್ತಿ ಸಮ್ಮೇಳನ, ಭಜನ ಸಂಧ್ಯಾ, ಕವಿ ಸಮ್ಮೇಳನ ಮತ್ತು ಕನ್ಯಾ ಪೂಜನದಂತಹ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ಫೆಬ್ರವರಿ 3 ರಂದು ಸಾವಿರಾರು ಹಿಂದೂಗಳು ಇಲ್ಲಿ ಪೂಜೆ ಸಲ್ಲಿಸಿದರು.

ಮುಸ್ಲಿಮರು ಭೋಜಶಾಲೆಯನ್ನು ಕಮಾಲ ಮೌಲಾ ಮಸೀದಿ ಎಂದು ಕರೆಯುತ್ತಾರೆ. ಈ ವಿಷಯದಲ್ಲಿ ಹಿಂದೂ ಪಕ್ಷವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅದಕ್ಕೆ ನ್ಯಾಯಾಲಯವು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದ ನಂತರ ಸಮೀಕ್ಷೆ ಪೂರ್ಣಗೊಂಡಿದೆ. ಈ ಪ್ರಕರಣದ ಬಗ್ಗೆ ಇನ್ನೂ ತೀರ್ಪು ಹೊರಬರುವುದು ಬಾಕಿ ಇದೆ.