ಚನ್ನಗಿರಿಯಲ್ಲಿ ನಡೆದ ಘಟನೆ
ದಾವಣಗೆರೆ – ಔಷಧಿಗಳನ್ನು ಖರೀದಿಸಲು ಬಂದ ಮಹಿಳೆಯರು, ಹುಡುಗಿಯರು ಮತ್ತು ಯುವತಿಯರನ್ನು ವಂಚಿಸಿ ಅವರ ಮೇಲೆ ಬಲಾತ್ಕಾರ ಮಾಡಿ, ಆ ಕೃತ್ಯಗಳ ವೀಡಿಯೊಗಳನ್ನು ಮಾಡುತ್ತಿದ್ದ ಅಮ್ಜದ್ ಎಂಬ ಮೆಡಿಕಲ್ ಸ್ಟೋರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಅವನು ಅಂಗಡಿಗೆ ಬರುವ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಂಡು ಅವರ ಮೇಲೆ ಬಲಾತ್ಕಾರ ಮಾಡಿ ಅದನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದನು. ನಂತರ ಅವನು ಈ ವೀಡಿಯೊಗಳನ್ನು ತನ್ನ ಲ್ಯಾಪ್ಟಾಪ್‌ನಲ್ಲಿ ಸೇವ್ ಮಾಡಿಕೊಂಡು ನೋಡುತ್ತಿದ್ದನು. ಪೊಲೀಸರು ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅದರಲ್ಲಿ 60 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಕಂಡುಬಂದಿವೆ.
ಸಂಪಾದಕೀಯ ನಿಲುವುಇಂತಹವರಿಗೆ ಶರಿಯಾ ಕಾನೂನಿನ ಪ್ರಕಾರ ಕೈಕಾಲುಗಳನ್ನು ಮುರಿಯುವ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಕೋರಿದರೆ ಆಶ್ಚರ್ಯಪಡಬಾರದು ! |