Neha Murder Case : ನನ್ನ ಮಗಳ ಹತ್ಯೆಯ ಹಿಂದೆ ಕೆಲವು ಶಾಸಕರ ಕೈವಾಡ ! – ಕಾಂಗ್ರೆಸ್ಸಿನ ನಗರಸೇವಕ ಹಾಗೂ ನೇಹಾಳ ತಂದೆಯ ಆರೋಪ

 

ನೇಹಾ ಹಿರೇಮಠ ಕೊಲೆ ಪ್ರಕಾರಣ

ಹುಬ್ಬಳ್ಳಿ – ಇಲ್ಲಿಯ ನೇಹಾ ಹಿರೇಮಠ ಈಕೆಯ ಹತ್ಯೆಗೆ ೯ ತಿಂಗಳು ಕಳೆದಿದೆ, ಆದರೂ ನ್ಯಾಯ ದೊರೆತಿಲ್ಲ. ಆದ್ದರಿಂದ ಕಾಂಗ್ರೆಸ್ಸಿನ ನಗರಸೇವಕ ಹಾಗೂ ನೇಹಾಳ ತಂದೆ ನಿರಂಜನ್ ಹಿರೇಮಠ ಇವರು ಸಿಬಿಐ ವಿಚಾರಣೆಗಾಗಿ ಒತ್ತಾಯಿಸುತ್ತಿದ್ದಾರೆ. ‘ರಾಜ್ಯ ಸರಕಾರವು ೧೨೦ ದಿನಗಳಲ್ಲಿ ನ್ಯಾಯ ದೊರಕಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದರು; ಆದರೆ ಯಾವುದೇ ಪ್ರಗತಿ ಆಗಿಲ್ಲ. ಈ ಕೊಲೆಯ ಹಿಂದೆ ಕೆಲವು ಶಾಸಕರ ಕೈವಾಡವಿದೆ, ಆದ್ದರಿಂದ ಈ ಪ್ರಕರಣದ ವಿಚಾರಣೆ ಸಿಬಿಐಗೆ ಒಪ್ಪಿಸಬೇಕೆಂದು’, ಅವರು ಆಗ್ರಹಿಸಿದ್ದಾರೆ. ಹಿರೇಮಠ ಇವರು ಈ ಶಾಸಕರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ್ ಮುತಾಲಿಕ್ ಇವರು ಕೂಡ ಸಿಬಿಐ ವಿಚಾರಣೆಗೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವು ಗಣ್ಯ ವ್ಯಕ್ತಿಗಳ ಕೈವಾಡ ಇರುವುದಾಗಿ ಆರೋಪವಿದೆ.

ಏಪ್ರಿಲ್ ೧೮, ೨೦೨೪ ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಇವಳ ಬರ್ಬರ ಹತ್ಯೆ ನಡೆದಿತ್ತು. ಆರೋಪಿ ಫಯಾಜ್ ಇವನ ಪ್ರೀತಿ ನಿರಾಕರಿಸಿದ್ದರಿಂದ ಆ ಸಿಟ್ಟಿನಲ್ಲಿ ನೇಹಾಳ ಹತ್ಯೆ ಮಾಡಿದ್ದನು. ಪೊಲೀಸರು ಕೆಲವೇ ಸಮಯದಲ್ಲಿ ಫಯಾಝನನ್ನು ಬಂಧಿಸಿದ್ದರು; ಆದರೆ ಇಲ್ಲಿಯವರೆಗೆ ಫಯಾಝನಿಗೆ ಶಿಕ್ಷೆ ಆಗಿಲ್ಲ.